/newsfirstlive-kannada/media/post_attachments/wp-content/uploads/2024/03/HARDIK-PANDYA.jpg)
ನಿನ್ನೆ ನಡೆದ ಐಪಿಎಲ್​ನ ರೋಚಕ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ತಂಡವು ಮುಂಬೈ ಇಂಡಿಯನ್ಸ್ ತಂಡವನ್ನು 31 ರನ್‌ಗಳಿಂದ ಸೋಲಿಸಿದೆ. ಮೊದಲು ಬ್ಯಾಟ್ ಮಾಡಿದ್ದ ಹೈದರಾಬಾದ್ 277 ರನ್ ಗಳಿಸಿತ್ತು. ಇದಕ್ಕೆ ಉತ್ತರವಾಗಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಮುಂಬೈ ತಂಡ ಕೇವಲ 246 ರನ್ ಗಳಿಸಲಷ್ಟೇ ಶಕ್ತವಾಯಿತು.
ಇದನ್ನೂ ಓದಿ: ಇವರು ಪಕ್ಕಾ ಫ್ಯಾಮಿಲಿ ಮ್ಯಾನ್; ಟೀಂ ಇಂಡಿಯಾ ಸ್ಟಾರ್​​ಗಳ ಕೌಟುಂಬಿಕ ನಂಟು ಹೆಂಗಿದೆ..?
ಸೋಲಿನ ನಂತರ ಪ್ರತಿಕ್ರಿಯಿಸಿದ ಪಾಂಡ್ಯ.. ನಾವು ಕೆಲವು ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ತಪ್ಪುಗಳಿಂದ ಪಾಠ ಕಲಿಯುತ್ತಿದ್ದೇವೆ. ನಮಗೆ ಇಷ್ಟು ದೊಡ್ಡ ಟಾರ್ಗೆಟ್​ ಸಿಗಲಿದೆ ಅಂದ್ಕೊಡಿರಲಿಲ್ಲ. ಹೈದರಾಬಾದ್ ತಂಡದ ಬ್ಯಾಟಿಂಗ್ ಕೂಡ ಉತ್ತಮವಾಗಿತ್ತು. ಬೌಲಿಂಗ್​ ವೇಳೆ ಹೊಸ ಪ್ರಯೋಗಗಳನ್ನು ಮಾಡಿದ್ದೇವೆ. ನಾವು ತಪ್ಪುಗಳಿಂದ ಕಲಿಯುತ್ತೇವೆ. ಸ್ವಲ್ಪ ಬದಲಾವಣೆ ಬೇಕು. ಇಲ್ಲಿನ ಪಿಚ್ ಬ್ಯಾಟ್ಸ್‌ಮನ್‌ಗಳಿಗೆ ಸಹಕಾರಿಯಾಗಿದೆ. ರೋಹಿತ್, ತಿಲಕ್, ಕಿಶನ್, ಡೆವಿಡ್ ಚೆನ್ನಾಗಿ ಆಡಿದರು ಎಂದರು.
ಮುಂಬೈ ಇಂಡಿಯನ್ಸ್​​​ಗೆ ಇದು ಎರಡನೇ ಸೋಲಾಗಿದೆ. ಮೊದಲ ಪಂದ್ಯವನ್ನು ಗುಜರಾತ್ ಟೈಟನ್ಸ್​ ವಿರುದ್ಧ ಆಡಿತ್ತು. ಇನ್ನು ಹೈದರಾಬಾದ್ ಕೂಡ ಇದುವರೆಗೆ 2 ಪಂದ್ಯಗಳನ್ನು ಆಡಿದೆ. ಮೊದಲ ಪಂದ್ಯ ಸೋತು, ಎರಡನೇ ಪಂದ್ಯ ಮುಂಬೈ ವಿರುದ್ಧ ಗೆಲುವು ಸಾಧಿಸಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us