newsfirstkannada.com

₹500 ಮುಖಬೆಲೆಯ ನೋಟಿನಲ್ಲಿ ಪ್ರತ್ಯಕ್ಷನಾದ ಶ್ರೀರಾಮಚಂದ್ರ; ಏನಿದರ ಅಸಲಿಯತ್ತು?

Share :

Published January 19, 2024 at 1:25pm

    ಗಾಂಧೀಜಿ ಅವರ ಫೋಟೋಗೆ ಬದಲಾಗಿ ರಾಮನ ಫೋಟೋ

    ಜನವರಿ 22ರಂದೇ ಶ್ರೀರಾಮನ ನೋಟು ಬಿಡುಗಡೆ ಆಗುತ್ತಾ?

    ರಾಮಮಂದಿರ ಲೋಕಾರ್ಪಣೆ ವೇಳೆ ಇದು ವಿಶಿಷ್ಟ ಬೇಡಿಕೆ!

ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆಗೆ ಕೆಲವೇ ಗಂಟೆಗಳು ಬಾಕಿ ಉಳಿದಿದೆ. ದೈವಿಕ ನಗರಿಯತ್ತ ರಾಮನ ಭಕ್ತರು ಧಾವಿಸುತ್ತಿರುವಾಗ ಎಲ್ಲೆಲ್ಲೂ ರಾಮನಾಮವೇ ಆವರಿಸುತ್ತಿದೆ. ಭವ್ಯ ರಾಮಮಂದಿರದ ಲೋಕಾರ್ಪಣೆಯ ಸಂದರ್ಭದಲ್ಲಿ ರಾಮನ ಭಕ್ತರು ವಿಶಿಷ್ಟ ಬೇಡಿಕೆಯೊಂದನ್ನ ಇಟ್ಟಿದ್ದಾರೆ. 500 ರೂಪಾಯಿ ಮುಖಬೆಲೆಯ ನೋಟಿನಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಅವರ ಫೋಟೋಗೆ ಬದಲಾಗಿ ರಾಮನ ಫೋಟೋ ಹಾಕಿ ವೈರಲ್ ಮಾಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಶ್ರೀರಾಮನ ಫೋಟೋ ಇರುವ ನಕಲಿ ನೋಟಿನ ಫೋಟೋ ಹರಿದಾಡುತ್ತಿದೆ. ಇದನ್ನು ರಾಮನ ಭಕ್ತರು ಹಂಚಿಕೊಂಡಿದ್ದು, ಜನವರಿ 22ರಂದೇ ಹೊಸ ನೋಟು ಬಿಡುಗಡೆ ಮಾಡಲು ಕೋರಿಕೊಂಡಿದ್ದಾರೆ. ಆದರೆ ಫ್ಯಾಕ್ಟ್ ಚೆಕಿಂಗ್‌ನಲ್ಲಿ ಇದೊಂದು ಸುಳ್ಳು ಸುದ್ದಿಯೆಂದು ಗೊತ್ತಾಗಿದೆ.

ವೈರಲ್ ಆದ 500 ನಕಲಿ ನೋಟಿನಲ್ಲಿ ಮುಂಭಾಗ ಗಾಂಧೀಜಿ ಬದಲು ಶ್ರೀರಾಮನ ಫೋಟೋ ಹಾಕಲಾಗಿದೆ. ಹಿಂಭಾಗ ಕೆಂಪುಕೋಟೆಯ ಜಾಗದಲ್ಲಿ ಅಯೋಧ್ಯೆ ಮಂದಿರ ಹಾಗೂ ರಾಮನ ಬಿಲ್ಲು ಬಾಣವನ್ನು ಹಾಕಲಾಗಿದೆ.

ಇದನ್ನೂ ಓದಿ: BREAKING: ಅಮೋಘ ದರ್ಶನ.. ಗರ್ಭಗುಡಿಯಲ್ಲಿ ವಿರಾಜಮಾನವಾದ ರಾಮಲಲ್ಲಾ ಮೂರ್ತಿ

ಸೋಷಿಯಲ್ ಮೀಡಿಯಾ X ಜಾಲತಾಣದಲ್ಲಿ ನಕಲಿ 500 ನೋಟನ್ನು ರಘುಎನ್‌ಮೂರ್ತಿ07 ಎಂಬುವವರು ಮೊದಲಿಗೆ ಹಂಚಿಕೊಂಡಿದ್ದಾರೆ. ಆ ಬಳಿಕ ಹಲವಾರು ಮಂದಿ ಈ ನಕಲಿ ನೋಟನ್ನು ಶೇರ್ ಮಾಡಿದ್ದು, ಜನವರಿ 22ರಂದೇ ರಾಮನ ಫೋಟೋ ಇರುವ ನೋಟು ಹಂಚುವ ಬಗ್ಗೆ ಚರ್ಚೆ ನಡೆಸಿದ್ದಾರೆ. ಇದು ಸೋಷಿಯಲ್ ಮೀಡಿಯಾದಲ್ಲಿ ಚರ್ಚೆಯಾಗಿದ್ದು, ಈ ಬಗ್ಗೆ RBI ಅಥವಾ ಯಾವುದೇ ಸರ್ಕಾರಿ ಸಂಸ್ಥೆ ಮಾಹಿತಿಯನ್ನು ನೀಡಿಲ್ಲ. ಇದು ಕೇವಲ ರಾಮಭಕ್ತರ ಅಭಿಲಾಷೆಯಾಗಿದ್ದು, ರಾಮನ ಫೋಟೋ ಇರುವ ನೋಟು ನಕಲಿ ಎಂದು ಸಾಬೀತಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

₹500 ಮುಖಬೆಲೆಯ ನೋಟಿನಲ್ಲಿ ಪ್ರತ್ಯಕ್ಷನಾದ ಶ್ರೀರಾಮಚಂದ್ರ; ಏನಿದರ ಅಸಲಿಯತ್ತು?

https://newsfirstlive.com/wp-content/uploads/2024/01/500-Rupees-Rama-notes.jpg

Load More