/newsfirstlive-kannada/media/post_attachments/wp-content/uploads/2024/06/Yuva-Rajkumar-Divorce-5.jpg)
ಬೆಂಗಳೂರು: ನಟ ಯುವರಾಜ್ ಕುಮಾರ್ ಕೌಟುಂಬಿಕ ಕಲಹ ನ್ಯಾಯಾಲಯದ ಮೆಟ್ಟಿಲೇರಿದೆ. ಪತ್ನಿ ಶ್ರೀದೇವಿ ಭೈರಪ್ಪ ವಿರುದ್ಧ ಆರೋಪ ಮಾಡಿರುವ ಯುವರಾಜ್ ಕುಮಾರ್ ಅವರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಈ ಅರ್ಜಿ ವಿಚಾರಣೆ ನಡೆಸಿದ ಫ್ಯಾಮಿಲಿ ಕೋರ್ಟ್ ಇಂದು ಪ್ರಕರಣವನ್ನ ಮಿಡಿಯೇಷನ್ ಕೌನ್ಸೆಲಿಂಗ್‌ಗೆ ರೆಫರ್ ಮಾಡಿ ಮಹತ್ವದ ಆದೇಶ ನೀಡಿದೆ.
ಯುವರಾಜ್ ಕುಮಾರ್ ಡಿವೋರ್ಸ್ ಕೇಸ್ ಇಂದು 1ನೇ ಹೆಚ್ಚುವರಿ ಕೌಟುಂಬಿಕ ನ್ಯಾಯಾಲಯದಲ್ಲಿ ನಡೀತು. ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಧೀಶೆ ಕಲ್ಪನಾ ಎಂ.ಎಸ್ ಅವರು ವಾದ, ಪ್ರತಿವಾದವನ್ನು ಆಲಿಸಿದರು.
ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಪರ ವಕೀಲರು ಇಂದು ವಿಚಾರಣೆಗೆ ಹಾಜರಾಗಿದ್ದರು. ಶ್ರೀದೇವಿ ಪರ ವಕೀಲೆ ದೀಪ್ತಿ ಅವರು ನಾವು ಗುರುರಾಜ ಕುಮಾರ್ ವಿಚ್ಛೇದನ ಅರ್ಜಿಗೆ ಆಕ್ಷೇಪಣೆ ಸಲ್ಲಿಸುತ್ತೇವೆ. ತಮ್ಮ ಆಕ್ಷೇಪಣೆ ಬಗ್ಗೆ ವಾದ ಮಾಡಲು ಅವಕಾಶ ಕೋರಿದರು. ಆದರೆ ಶ್ರೀದೇವಿ ಪರ ವಕೀಲರ ವಾದಕ್ಕೆ ಜಡ್ಜ್ ಅವಕಾಶ ನೀಡಲಿಲ್ಲ. ಬದಲಾಗಿ ಅರ್ಜಿ ವಿಚಾರಣೆಯ ಪ್ರಕ್ರಿಯೆ ಮುಗಿದ ಮೇಲೆ ನಿಮ್ಮ ವಾದ ಆಲಿಸಲಾಗುತ್ತೆ ಎಂದಿದ್ದಾರೆ.
ಇದನ್ನೂ ಓದಿ:ಇಂದು ಯುವ ಡಿವೋರ್ಸ್ ಅರ್ಜಿ ವಿಚಾರಣೆ.. ಕೋರ್ಟ್ಗೆ ತೆರಳುವ ಮುನ್ನ ಹೀಗೊಂದು ಪೋಸ್ಟ್ ಹಂಚಿಕೊಂಡ ಶ್ರೀದೇವಿ!
ಮೊದಲು ಯುವರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ಮಿಡಿಯೇಷನ್ ಕೌನ್ಸೆಲಿಂಗ್ ನಡೆಯಬೇಕು. ಇದು ಕೌಟುಂಬಿಕ ಕಲಹ ಆದ್ದರಿಂದ ಮೊದಲು ಕೌನ್ಸೆಲಿಂಗ್ ನಡೆಯಬೇಕು. ಕೌನ್ಸೆಲಿಂಗ್ ಮುಗಿದ ಬಳಿಕ ಇಬ್ಬರ ತೀರ್ಮಾನ ಕೇಳಬೇಕು. ಆ ಬಳಿಕ ನಿಮ್ಮ ಆಕ್ಷೇಪಣೆ ಕೈಗೆತ್ತಿಕೊಳ್ಳುವುದಾಗಿ ಶ್ರೀದೇವಿ ಪರ ವಕೀಲರಿಗೆ ಜಡ್ಜ್ ಸ್ಪಷ್ಟಪಡಿಸಿದ್ದಾರೆ.
ಇದನ್ನೂ ಓದಿ:‘ಯವ ರಾಜ್ಕುಮಾರ್ಗೆ ಸಹನಟಿ ಜತೆ ಅಫೇರ್’- ದೊಡ್ಮನೆ ಕುಡಿ ವಿರುದ್ಧ ಶ್ರೀದೇವಿ ಆರೋಪ
ಕೌನ್ಸೆಲಿಂಗ್ ಬಳಿಕ ವಿಚ್ಛೇದನದ ಆಕ್ಷೇಪಣೆ ಕೇಳೋದಾಗಿ ಹೇಳಿದ ನ್ಯಾಯಾಧೀಶರ ಸೂಚನೆಗೆ ಶ್ರೀದೇವಿ ಪರ ವಕೀಲರು ಸಮ್ಮತಿ ಸೂಚಿಸಿದ್ದಾರೆ. ಮುಂದಿನ ಆಗಸ್ಟ್ 23ಕ್ಕೆ ಯುವರಾಜ್ ಕುಮಾರ್, ಶ್ರೀದೇವಿ ಅವರ ಮಿಡಿಯೇಷನ್ ಕೌನ್ಸೆಲಿಂಗ್‌ಗೆ ಡೇಟ್ ಫಿಕ್ಸ್ ಮಾಡಲಾಗಿದೆ. ಅಂದು ಅರ್ಬಿಟ್ರೇಟರ್ ಮೂಲಕ ಗುರುರಾಜ್ ಕುಮಾರ್ ಹಾಗೂ ಶ್ರೀದೇವಿ ಅವರ ಕೌನ್ಸೆಲಿಂಗ್ ನಡೆಯಲಿದೆ. ಕೌನ್ಸೆಲಿಂಗ್ ವರದಿ ಆಧಾರದ ಮೇಲೆ ಮುಂದಿನ ವಿಚಾರಣೆ ನಡೆಸಲು ಫ್ಯಾಮಿಲಿ ಕೋರ್ಟ್ ನಿರ್ಧಾರ ಮಾಡಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ