newsfirstkannada.com

ಶ್ರೀಶೈಲದ ಕೋಟ್ಯಾಂತರ ಭಕ್ತರ ಮನಸ್ಸಿಗೆ ಘಾಸಿ; ಮಾಂಸದ ಮೂಳೆ ಸಿಕ್ಕ ಬೆನ್ನಲ್ಲೇ ಹಲವು ಅನುಮಾನ..!

Share :

Published February 12, 2024 at 9:19am

Update February 12, 2024 at 9:20am

    ಮೂಳೆಯ ಪೀಸುಗಳು ಪತ್ತೆ ಆಗ್ತಿದ್ದಂತೆ ಭಕ್ತ ಮಾಡಿದ್ದೇನು?

    ಗಂಭಿರವಾಗಿ ಪರಿಗಣಿಸಿ ಆಡಳಿತ ಮಂಡಳಿ, ತನಿಖೆಗೆ ಆದೇಶ

    ಕಳೆದ ಶುಕ್ರವಾರ ವಿತರಿಸಿದ ಪ್ರಸಾದದಲ್ಲಿ ಮೂಳೆಯ ತುಂಡುಗಳು!

ಆಂಧ್ರಪ್ರದೇಶದ ಶ್ರೀಶೈಲ ದೇಗುಲದಲ್ಲಿ ವಿತರಿಸಿರುವ ಪ್ರಸಾದದಲ್ಲಿ ಮೂಳೆ ಪತ್ತೆಯಾಗಿರುವ ವಿಚಾರ ಭಾರೀ ಚರ್ಚೆಗೆ ಕಾರಣವಾಗಿದೆ. ಈ ಸಂಬಂಧ ದೇವಾಲಯದ ಆಡಳಿತ ಮಂಡಳಿ ತನಿಖೆಗೆ ಆದೇಶ ನೀಡಿದೆ.

ಕಳೆದ ಶುಕ್ರವಾರ ಹೈದ್ರಾಬಾದ್ ಮೂಲದ ಹರೀಶ್ ರೆಡ್ಡಿ ಅನ್ನೋರು ದೇವಾಲಯಕ್ಕೆ ಭೇಟಿ ನೀಡಿದ್ದರು. ಈ ವೇಳೆ ಪ್ರಸಾದವಾಗಿ ಸ್ವೀಕರಿಸಿದ್ದ ಪುಳಿಯೊಗರೆಯಲ್ಲಿ ಮಾಂಸದ ಮೂಳೆಗಳು ಪತ್ತೆಯಾಗಿದ್ದವು. ಅದನ್ನು ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಭರತ್ ರೆಡ್ಡಿ ಅನ್ನೋರು ಹಂಚಿಕೊಂಡಿದ್ದರು. ಈ ಬೆನ್ನಲ್ಲೇ, ದೇವಾಲಯದ ಆಡಳಿತ ಮಂಡಳಿ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿತ್ತು. ಇದೀಗ ಪ್ರಕರಣವನ್ನು ತನಿಖೆಗೆ ಆದೇಶ ನೀಡಲಾಗಿದೆ.

ಇದನ್ನೂ ಓದಿWATCH: ಪ್ರಸಿದ್ಧ ಶ್ರೀಶೈಲ ದೇವಸ್ಥಾನದ ಪ್ರಸಾದದಲ್ಲಿ ಮೂಳೆ ಪತ್ತೆ; ಭಕ್ತರು ಫುಲ್ ಶಾಕ್‌!

ಭಕ್ತರ ನಂಬಿಕೆಗೆ ದಕ್ಕೆ..!
ವಿಡಿಯೋ ವೈರಲ್ ಬೆನ್ನಲ್ಲೇ ಕೋಟ್ಯಾಂತರ ಭಕ್ತರ ಮನಸ್ಸಿಗೆ ತುಂಬಾ ಘಾಸಿಯಾಗಿದೆ. ಪ್ರಸಾದದಲ್ಲಿ ಮಾಂಸದ ತುಂಡುಗಳು ಬಂದಿರೋದು, ಶಾಕಾಹಾರಿಗಳನ್ನು ತಳಮಳಕ್ಕೆ ತಳ್ಳಿದೆ. ಅಲ್ಲದೇ, ಪವಿತ್ರ ಕ್ಷೇತ್ರದಲ್ಲಿ ಮೂಳೆಗಳು ಬಂದಿದ್ದು ಹೇಗೆ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ದೇವಾಲಯದಲ್ಲಿ ಪ್ರಸಾದ ತಯಾರಿಸುವ ಕಿಚನ್ ಹೈಜೀನ್ ಬಗ್ಗೆ ಚರ್ಚೆ ಆಗ್ತಿದೆ. ಅಲ್ಲಿರುವ ಕಿಚನ್​​ನಲ್ಲಿ ಸಿಬ್ಬಂದಿ ಮಾಂಸಹಾರವನ್ನೂ ತಯಾರಿಸಿ ಸೇವಿಸುತ್ತಾರಾ? ಆ ಕಿಚನ್​​ಗೆ ಮಾಂಸಾಹಾರ ತೆಗೆದುಕೊಂಡು ಬರಲು ಅನುಮತಿ ಇದೆಯಾ? ಈ ವಿಚಾರ ಆಡಳಿತ ಮಂಡಳಿಗೆ ಗೊತ್ತಿಲ್ಲವಾ? ಒಂದು ವೇಳೆ ಗೊತ್ತಿದ್ದರೂ ಸುಮ್ಮನೆ ಕೂತಿದ್ಯಾ ಎಂಬ ಪ್ರಶ್ನೆಗಳು ಶುರುವಾಗಿದೆ.

ಭಕ್ತ ಹರೀಶ್​ ರೆಡ್ಡಿಗೆ ಮಾಂಸದ ಮೂಳೆಗಳು ಪತ್ತೆ ಆಗುತ್ತಿದ್ದಂತೆಯೇ, ಆಡಳಿತ ಮಂಡಳಿಗೆ ದೂರು ನೀಡಿದ್ದಾರೆ. ಗಂಭೀರವಾಗಿ ಪರಿಗಣಿಸಿದ ಆಡಳಿತ ಮಂಡಳಿ ತನಿಖೆಗೆ ಆದೇಶ ನೀಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಶ್ರೀಶೈಲದ ಕೋಟ್ಯಾಂತರ ಭಕ್ತರ ಮನಸ್ಸಿಗೆ ಘಾಸಿ; ಮಾಂಸದ ಮೂಳೆ ಸಿಕ್ಕ ಬೆನ್ನಲ್ಲೇ ಹಲವು ಅನುಮಾನ..!

https://newsfirstlive.com/wp-content/uploads/2024/02/SRISAHILA.jpg

Load More