Advertisment

10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇನ್ಮುಂದೆ ಗಣಿತ ಮತ್ತು ವಿಜ್ಞಾನದಲ್ಲಿ 20 ಅಂಕ ಬಂದ್ರೆ ಪಾಸ್​!

author-image
AS Harshith
Updated On
10ನೇ ತರಗತಿ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ! ಇನ್ಮುಂದೆ ಗಣಿತ ಮತ್ತು ವಿಜ್ಞಾನದಲ್ಲಿ 20 ಅಂಕ ಬಂದ್ರೆ ಪಾಸ್​!
Advertisment
  • ಇನ್ಮುಂದೆ ಗಣಿತ ಮತ್ತು ವಿಜ್ಞಾನ ಪರೀಕ್ಷೆಯೆಂದು ಭಯಪಡಬೇಕಾಗಿಲ್ಲ
  • ಉತ್ತೀರ್ಣ ಅಂಕವನ್ನು 35ರಿಂದ 20ಕ್ಕೆ ಇಳಿಸಿದ ಪ್ರೌಢ ಶಿಕ್ಷಣ ಇಲಾಖೆ
  • ಗಣಿತ ಮತ್ತು ವಿಜ್ಞಾನ ಪರೀಕ್ಷೆಯಲ್ಲಿ ಪಾಸ್​ ಮಾರ್ಕ್​ 20 ಬಂದ್ರೆ ಸಾಕು

ವಿದ್ಯಾರ್ಥಿಗಳ ಜೀವನದಲ್ಲಿ 10ನೇ ತರಗತಿ ಎಂಬುದು ಮಹತ್ವದ ಘಟ್ಟ. ಬಹುತೇಕರು ಎಸ್​ಎಸ್​ಎಲ್​ಸಿಯಲ್ಲಿ ಉತ್ತಮ ಅಂಕ ಬರಲು ಶ್ರಮಿಸುತ್ತಾರೆ. ಇನ್ನು ಕೆಲವರು ಪಾಸಿಂಗ್​ ಮಾರ್ಕ್​ಗಾಗಿ ಕಷ್ಟಪಡುತ್ತಾರೆ. ಆದರೀಗ ಪಾಸಿಂಗ್​​ ಮಾರ್ಕ್​ಗಾಗಿ ಕಷ್ಟಪಡುವ ವಿದ್ಯಾರ್ಥಿಗಳಿಗೆ ಮಹಾರಾಷ್ಟ್ರ ಶಿಕ್ಷಣ ಇಲಾಖೆ ಸಿಹಿ ಸುದ್ದಿ ನೀಡಿದೆ.

Advertisment

ಕೆಲವು ವಿದ್ಯಾರ್ಥಿಗಳು ಗಣಿತ ಮತ್ತು ವಿಜ್ಞಾನವೆಂದಾಗ ಹಿಂದೇಟು ಹಾಕುವುದು ಜಾಸ್ತಿ. ಇವೆರಡು ತುಸು ಕಷ್ಟದ ವಿಷಯವೆಂದು ಓದಲು ಕಷ್ಟಪಡುತ್ತಿರುತ್ತಾರೆ. ಇನ್ನು ಕೆಲವರು ಪಾಸ್​ ಮಾರ್ಕ್​ಗಾಗಿ ಮಾತ್ರ ಓದುತ್ತಾರೆ. ಆದರೀಗ ಮಹಾರಾಷ್ಟ್ರ ಸ್ಟೇಟ್​​ ಫಾರ್​ ಎಜುಕೇಶನಲ್​ ರಿಸರ್ಚ್​ ಆ್ಯಂಡ್​​ ಟ್ರೈನಿಂಗ್​ (SCERT) 10ನೇ ತರಗತಿ ಪರೀಕ್ಷೆಯ ಪಾಸಿಂಗ್​ ಮಾರ್ಕ್​ ಅನ್ನು 35 ರಿಂದ 20 ಮಾರ್ಕ್​ಗೆ ಇಳಿಸಿದೆ. 10ನೇ ತರಗತಿ ಹೊಸ ರಾಜ್ಯ ಪಠ್ಯಕ್ರಮದ ಚೌಕಟ್ಟು- ಶಾಲಾ ಶಿಕ್ಷಣದಲ್ಲಿ ಈ ನಿರ್ಧಾರವನ್ನು ಪ್ರಕಟಿಸಿದೆ.

ಇದನ್ನೂ ಓದಿ: ಕರ್ನಾಟಕ ಆರೋಗ್ಯ ಟ್ರಸ್ಟ್​​ನಲ್ಲಿ ಹಲವು ಹುದ್ದೆಗಳ ನೇಮಕಾತಿ.. ಅರ್ಜಿ ಆಹ್ವಾನ, ತಕ್ಷಣ ಅಪ್ಲೇ ಮಾಡಿ

ಮಹಾರಾಷ್ಟ್ರ ರಾಜ್ಯ ಪ್ರೌಢ ಮತ್ತು ಉನ್ನತ ಮಾಧ್ಯಮಿಕ ಶಿಕ್ಷಣ ಮಂಡಳಿಯ ಅಧ್ಯಕ್ಷ ಶರದ್​ ಗೋಸಾವಿ, ಹೊಸ ಪಠ್ಯಕ್ರಮವನ್ನು ಜಾರಿಗೊಳಿಸುವ ಮೂಲಕ ಉತ್ತೀರ್ಣ ಅಂಕಗಳಲ್ಲಿ ಬದಲಾವಣೆ ತರುವ ಬಗ್ಗೆ ತಿಳಿದ್ದರು. ಅದರಂತೆಯೇ ಇದೀಗ 10ನೇ ತರಗತಿಯವರಿಗಾಗಿ ಉತ್ತೀರ್ಣ ಅಂಕವನ್ನು 20ಕ್ಕೆ ಇಳಿಸಿದ್ದಾರೆ.

Advertisment

ಇದನ್ನೂ ಓದಿ: ವಿಷಸರ್ಪ ಕಚ್ಚಿ ಮೂವರು ಸಾ*ವು.. ಪುಂಗಿದಾಸನನ್ನು ಕರೆಸಿ ಹಾವು ಹಿಡಿಯಲು ಮುಂದಾದ ಅರಣ್ಯ ಇಲಾಖೆ

ಒಂದು ವೇಳೆ ಕಡಿಮೆ ಅಂಕದ ಮೂಲದ ಅನುತ್ತೀರ್ಣರಾದರೆ, ಆಸಕ್ತಿಯ ಕೋರ್ಸ್​​ಗಳನ್ನು ಕೈಬಿಡಬೇಕಾಗುತ್ತದೆ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲೆಂದು ಗಣಿತ ಮತ್ತು ವಿಜ್ಞಾನ ವಿಷಯದಲ್ಲಿ ಉತ್ತೀರ್ಣ ಅಂಕವನ್ನು 35ರಿಂದ 20ಕ್ಕೆ ಇಳಿಸಲಾಗಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment