ಎಗ್​ ರೈಸ್​ ತಿನ್ನಲು ಹೋಗಿದ್ದ 6 ವಿದ್ಯಾರ್ಥಿಗಳು.. 800 ಬಸ್ಕಿ ಶಿಕ್ಷೆಗೆ ಭಯ ಬಿದ್ದು SSLC ಸ್ಟೂಡೆಂಟ್ಸ್​ ನಾಪತ್ತೆ

author-image
Bheemappa
Updated On
ಎಗ್​ ರೈಸ್​ ತಿನ್ನಲು ಹೋಗಿದ್ದ 6 ವಿದ್ಯಾರ್ಥಿಗಳು.. 800 ಬಸ್ಕಿ ಶಿಕ್ಷೆಗೆ ಭಯ ಬಿದ್ದು SSLC ಸ್ಟೂಡೆಂಟ್ಸ್​ ನಾಪತ್ತೆ
Advertisment
  • ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ನಡೆದಿರುವ ಘಟನೆ
  • ಶಾಲೆ ಕಾಂಪೌಂಟ್ ಜಂಪ್ ಮಾಡಿ ವಿದ್ಯಾರ್ಥಿಗಳು ಎಸ್ಕೇಪ್
  • ಶಾಲಾ ಮಂಡಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪೋಷಕರು

ಚಿತ್ರದುರ್ಗ: ಎಗ್ ರೈಸ್ ತಿಂದಿದ್ದಕ್ಕೆ 800 ಬಸ್ಕಿ ಹೊಡೆಯೋ ಶಿಕ್ಷೆ ನೀಡಿದ್ದಕ್ಕೆ ವಿದ್ಯಾರ್ಥಿಗಳು ಶಾಲೆಯಿಂದ ನಾಪತ್ತೆಯಾಗಿರುವ ಘಟನೆ ಹೊಳಲ್ಕೆರೆ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಇದನ್ನೂ ಓದಿ:ಮೊಬೈಲ್​ ರಿಟ್ರೀವ್​, ದರ್ಶನ್​ಗೆ ಮತ್ತಷ್ಟು ಸಂಕಷ್ಟ.. ಫೋನ್​​ನಲ್ಲಿ ಸಿಕ್ಕ ಆ 4 ಸತ್ಯಗಳೇನು?

ಹೊಳಲ್ಕೆರೆ ಪಟ್ಟಣದ ಖಾಸಗಿ ಶಾಲೆಯೊಂದರಲ್ಲಿ ಎಸ್ಎಸ್ಎಲ್​ಸಿ ಓದುತ್ತಿದ್ದ ಯಶಸ್, ಶ್ರೇಯಸ್, ತರುಣ್, ಸಿದ್ಧಾರ್ಥ, ಮನು, ಧನುಷ್ ಎಂಬ 6 ಜನ ವಿದ್ಯಾರ್ಥಿಗಳು ಶಾಲೆಯ ಒತ್ತಡ, ಬಸ್ಕಿ ಹೊಡೆಯೋ ಶಿಕ್ಷೆ ತಾಳಲಾರದೇ ಶಾಲೆಯ ಕಾಂಪೌಂಡ್​ ಅನ್ನು ಜಂಪ್ ಮಾಡಿ ನಾಪತ್ತೆಯಾಗಿದ್ದರು. ಇನ್ನು, ಈ ವಿಷಯ ತಿಳಿಯುತ್ತಿದ್ದಂತೆ ಶಾಲೆಗೆ ಪೋಷಕರು ಆಗಮಿಸಿ ಆಡಳಿತ ಮಂಡಳಿ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: ಎಗ್​​ ಪಫ್​ಗಾಗಿ ₹3.60 ಕೋಟಿ ಹಣ ಖರ್ಚು ಮಾಡಿದ್ರಾ? ಮಾಜಿ ಸಿಎಂ ಜಗನ್ ವೆಚ್ಚಕ್ಕೆ ಆಂಧ್ರ ಜನ ಶಾಕ್!

publive-image

ಶಾಲೆ ಬಿಟ್ಟು ಪರಾರಿಯಾದ ಮಕ್ಕಳು ಸದ್ಯ ಬೆಂಗಳೂರಿಗೆ ಬಂದಿದ್ದಾರೆ ಎಂಬ ಮಾಹಿತಿ ತಿಳಿದು ಬಂದಿದ್ದು, ಇದರಿಂದ ಪೋಷಕರು ನಿಟ್ಟುಸಿರು ಬಿಟ್ಟಿದ್ದಾರೆ. ಇನ್ನು ಇದೇ ವೇಳೆ ಮಕ್ಕಳಿಗೆ ಕಿರುಕುಳ ನೀಡುತ್ತಿದ್ದಾರೆ ಎಂಬ ಆರೋಪ ಕೂಡ ಶಾಲೆ ವಿರುದ್ಧ ಕೇಳಿ ಬಂದಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment