/newsfirstlive-kannada/media/post_attachments/wp-content/uploads/2024/09/RCB_TEAM.jpg)
ಇಂಡಿಯನ್ ಪ್ರೀಮಿಯರ್ ಲೀಗ್ 2025ಕ್ಕೆ ಇನ್ನು ಹಲವು ತಿಂಗಳು ಬಾಕಿ ಇದೆ. ಇದೇ ತಿಂಗಳು 24 ಮತ್ತು 25ನೇ ತಾರೀಕು ಮೆಗಾ ಆಕ್ಷನ್ ನಡೆಯಲಿದ್ದು, ಎಲ್ಲರ ಚಿತ್ತ ಹರಾಜಿನತ್ತ ನೆಟ್ಟಿದೆ. ಈಗಾಗಲೇ ಎಲ್ಲಾ ತಂಡಗಳ ಮಾಲೀಕರು ರೀಟೈನ್ ಲಿಸ್ಟ್ ಬಿಸಿಸಿಐಗೆ ಸಲ್ಲಿಸಿವೆ.
ಕೊಹ್ಲಿ, ರಜತ್ ಪಾಟಿದಾರ್, ಯಶ್ ದಯಾಳ್ ಅವರನ್ನು ಮಾತ್ರ ರೀಟೈನ್ ಮಾಡಿಕೊಂಡಿರೋ ಆರ್‌ಸಿಬಿ ಉಳಿದವರನ್ನು ರಿಲೀಸ್ ಮಾಡಿದೆ. ಹೇಗಾದ್ರೂ ಮಾಡಿ ಮುಂದಿನ ಸೀಸನ್ ಗೆಲ್ಲಲು ಬಲಿಷ್ಠ ತಂಡ ಕಟ್ಟಬೇಕಿದೆ. ಅದಕ್ಕಾಗಿ ಅಳೆದು ತೂಗಿ ಆಟಗಾರರಿಗೆ ಮಣೆ ಹಾಕಲು ಆರ್‌ಸಿಬಿ ನಿರ್ಧರಿಸಿದೆ. ಮೆಗಾ ಹರಾಜಿನಲ್ಲಿ ಯುವ ಆಟಗಾರರನ್ನೇ ಖರೀದಿ ಮಾಡಲು ಬೆಂಗಳೂರು ತಂಡ ಭರ್ಜರಿ ತಯಾರಿ ನಡೆಸಿಕೊಂಡಿದೆ.
ಸ್ಟಾರ್ ಆಲ್ರೌಂಡರ್ಸ್ ಮೇಲೆ ಆರ್‌ಸಿಬಿ ಕಣ್ಣು
ಮೆಗಾ ಹರಾಜಿನಲ್ಲಿ ಆರ್‌ಸಿಬಿ ಸ್ಟಾರ್ ಆಲ್ರೌಂಡರ್ಸ್ ಖರೀದಿ ಮಾಡಲು ಪ್ಲಾನ್ ಮಾಡಿಕೊಂಡಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲೂ ತಂಡಕ್ಕೆ ಕೊಡುಗೆ ನೀಡೋರಿಗೆ ಮೊದಲ ಆದ್ಯತೆ. ಅದರಲ್ಲೂ ಆರ್‌ಸಿಬಿ ತಂಡದ ಮಾಜಿ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಕೇಳಿ ಬಂದಿದೆ.
ಬ್ಯಾಟಿಂಗ್‌ನಲ್ಲೂ ಆರ್ಸಿಬಿಗೆ ನೆರವಾಗಬಲ್ಲರು
ವಾಷಿಂಗ್ಟನ್ ಸುಂದರ್ ಕೇವಲ ಸ್ಪಿನ್ ಬೌಲರ್ ಅಲ್ಲ, ಅತ್ಯುತ್ತಮ ಬ್ಯಾಟರ್ ಕೂಡ ಹೌದು. ಇವರು ಆರ್‌ಸಿಬಿ ಸೇರಿದರೆ ತಂಡದ ಬ್ಯಾಟಿಂಗ್ ಲೈನ್ ಅಪ್ ಬೆಳೆಯುತ್ತದೆ. ವಿಶೇಷವಾಗಿ ಮಧ್ಯಮ ಕ್ರಮಾಂಕದಲ್ಲಿ ಆರ್ಸಿಬಿಗೆ ನೆರವಾಗಬಲ್ಲರು. ಇವರಿಗೆ ಈಗಾಗಲೇ ಆರ್‌ಸಿಬಿ ಪರ ಆಡಿರೋ ಅನುಭವ ಇದೆ.
ನ್ಯೂಜಿಲೆಂಡ್ ವಿರುದ್ಧ ಅಬ್ಬರ
ಇತ್ತೀಚೆಗೆ ನಡೆದ ನ್ಯೂಜಿಲೆಂಡ್ ವಿರುದ್ಧದ 2ನೇ ಟೆಸ್ಟ್ನಲ್ಲಿ ಭಾರತ ತಂಡದ ಪರ ವಾಷಿಂಗ್ಟನ್ ಸುಂದರ್ ಅಮೋಘ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 7 ಹಾಗೂ 2ನೇ ಇನಿಂಗ್ಸ್‌ನಲ್ಲಿ 4 ವಿಕೆಟ್ ಕಬಳಿಸಿದ ಇವರು ಭಾರತ ಕ್ರಿಕೆಟ್ ತಂಡದ ಸ್ಟಾರ್ ಆಗಿ ಹೊರಹೊಮ್ಮಿದ್ದಾರೆ.
ಇದನ್ನೂ ಓದಿ:ಆರ್‌ಸಿಬಿ ತಂಡದ ಹೊಸ ರೀಟೈನ್ ಲಿಸ್ಟ್ ಔಟ್; ಮ್ಯಾಕ್ಸಿ ಸೇರಿ ಅಚ್ಚರಿ ಹೆಸರುಗಳು ರಿವೀಲ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ