/newsfirstlive-kannada/media/post_attachments/wp-content/uploads/2024/04/RCB-KOHLI-2.jpg)
ಸದ್ಯ ನಡೆಯುತ್ತಿರೋ 2024ರ ಇಂಡಿಯನ್​ ಪ್ರೀಮಿಯರ್​ ಲೀಗ್​​ನಲ್ಲಿ ರಾಯಲ್​ ಚಾಲೆಂಜರ್ಸ್​ ಬೆಂಗಳೂರು ತಂಡ ಬ್ಯಾಕ್​ ಟು ಬ್ಯಾಕು 5 ಪಂದ್ಯ ಸೋತಿದೆ. ಇತ್ತೀಚೆಗೆ ವಾಂಖೆಡೆ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲೂ ಮುಂಬೈ ಇಂಡಿಯನ್ಸ್​ ವಿರುದ್ಧ ಆರ್​​​ಸಿಬಿ ಸೋತಿತ್ತು. ಸನ್​ರೈಸರ್ಸ್​​ ಹೈದರಾಬಾದ್​​ ವಿರುದ್ಧವಾದ್ರೂ ಗೆಲ್ಲಲೇಬೇಕು ಎಂದು ಆರ್​​ಸಿಬಿ ಭರ್ಜರಿ ತಯಾರಿ ನಡೆಸಿಕೊಂಡಿದೆ. ಇದರ ಮಧ್ಯೆ ಆರ್​​ಸಿಬಿ ಹೀನಾಯ ಸೋಲಿಗೆ ಅಸಲಿ ಕಾರಣ ಸ್ಟಾರ್​ ಫಿನಿಶರ್​ ದಿನೇಶ್​ ಕಾರ್ತಿಕ್​ ಬಿಚ್ಚಿಟ್ಟಿದ್ದಾರೆ.
ಆರ್​​ಸಿಬಿ ಮುಖ್ಯ ಕೋಚ್​​ ಆ್ಯಂಡಿ ಫ್ಲವರ್ ಬೆಸ್ಟ್​ ಕೋಚ್​​. ಅವರಿಗಿರೋ ಕ್ಲಾರಿಟಿ ಯಾರಿಗೂ ಇಲ್ಲ. ಸಪೋರ್ಟ್​ ಸ್ಟ್ಯಾಫ್​​ ಮಾತ್ರ ಅಷ್ಟೆಲ್ಲಾ ಮಾಡೋಕೆ ಸಾಧ್ಯ. ಕ್ರಿಕೆಟ್​ ಎಂದರೆ ಯಾವಾಗಲೂ ಕ್ಯಾಪ್ಟನ್​ ಡ್ರೈವೆನ್​ ಗೇಮ್​​. ಅದುವೇ ಸತ್ಯ. ಇದು ಫುಟ್​ಬಾಲ್​​, ಬ್ಯಾಸ್ಕೆಟ್​ ಬಾಲ್ ಅಲ್ಲ​ ಎಂದು ಆಕ್ರೋಶ ಹೊರಹಾಕಿದ್ರು.
ಗೇಮ್​ ಮುಗಿದ ಮೇಲೆ ನಮಗೆ ರೆಸ್ಟ್​ ಮಾಡಲು ಹೇಳೋದಾಗಲಿ, ವರ್ಕ್​​ ಲೋಡ್​ ಕಡಿಮೆ ಮಾಡೋದಾಗಲಿ. ಜತೆಗೆ ಎಲ್ಲರಿಗೂ ಸ್ಪೇಸ್​ ಕೊಡೋ ಅದ್ಭುತ ಕೋಚ್​​​ ಆ್ಯಂಡಿ ಫ್ಲವರ್​​ ಎಂದರು.
ಆ್ಯಂಡಿ ಫ್ಲವರ್​ ಅಷ್ಟೇ ಅಲ್ಲ, ಫಾಫ್​​ ಮತ್ತು ಕೊಹ್ಲಿ ಉತ್ತಮ ಕೆಲಸ ಮಾಡಿದ್ದಾರೆ. ಕೇವಲ 5 ಮ್ಯಾಚ್​​ ಮಾತ್ರ ಆಗಿರೋದು. ನೀವು 1 ಮ್ಯಾಚ್​​ ಗೆದ್ದು, 5 ಪಂದ್ಯ ಕಳೆದುಕೊಂಡಿದ್ದೀವಿ ಅನ್ನೋದರ ಬಗ್ಗೆ ಯೋಚನೆ ಮಾಡ್ತಿದೀರಾ? ಎಂದು ನನಗೆ ಗೊತ್ತು. ಆದರೆ, ಮೂವರು ತುಂಬಾ ಪ್ರಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us