/newsfirstlive-kannada/media/post_attachments/wp-content/uploads/2024/05/Team-India_m.jpg)
ವೆಸ್ಟ್ ಇಂಡೀಸ್ನ ಬಾರ್ಬಡೋಸ್ ಬ್ರಿಡ್ಜ್‌ಟೌನ್ ಮೈದಾನದಲ್ಲಿ ನಡೆಯಲಿರೋ 2024ರ ಟಿ20 ವಿಶ್ವಕಪ್ ಫೈನಲ್ ಹೈವೋಲ್ಟೇಜ್ ಪಂದ್ಯಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದಿನ ಹೈವೋಲ್ಟೇಜ್ ಪಂದ್ಯದಲ್ಲಿ ಸೌತ್ ಆಫ್ರಿಕಾ, ಟೀಮ್ ಇಂಡಿಯಾ ಮುಖಾಮುಖಿ ಆಗಲಿವೆ. ಹೇಗಾದ್ರೂ ಮಾಡಿ ಫೈನಲ್ ಗೆದ್ದು ಟ್ರೋಫಿ ತಮ್ಮದಾಗಿಸಿಕೊಳ್ಳಬೇಕು ಎಂದು ಎರಡು ತಂಡಗಳು ಪೈಪೋಟಿ ನಡೆಸುತ್ತಿವೆ.
2024ರ ಟಿ20 ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾ ಸತತ 6 ಗೆಲುವು ಸಾಧಿಸಿತ್ತು. ಗ್ರೂಮ್ ಸ್ಟೇಜ್ನಲ್ಲಿ ಟೀಮ್ ಇಂಡಿಯಾ 3 ಪಂದ್ಯ ಗೆದ್ದು ಸೂಪರ್ 8ಗೆ ಲಗ್ಗೆ ಇಟ್ಟಿತ್ತು. ನಂತರ ಈ ಸುತ್ತಿನಲ್ಲೂ ಅಫ್ಘಾನ್, ಬಾಂಗ್ಲಾದೇಶ ಮತ್ತು ಆಸ್ಟ್ರೇಲಿಯಾ ವಿರುದ್ಧವೂ ಗೆದ್ದ ಟೀಮ್ ಇಂಡಿಯಾ ಸೆಮಿ ಫೈನಲ್ಗೆ ಎಂಟ್ರಿ ನೀಡಿತ್ತು. ಬಳಿಕ ಸೆಮಿ ಫೈನಲ್ನಲ್ಲಿ ಇಂಗ್ಲೆಂಡ್ ವಿರುದ್ಧ ಗೆದ್ದಿದ್ದು ಈಗ ಸೌತ್ ಆಫ್ರಿಕಾ ವಿರುದ್ಧ ಫೈನಲ್ಸ್ ಆಡುತ್ತಿದೆ. ಈ ಮಧ್ಯೆ ಟೀಮ್ ಇಂಡಿಯಾಗೆ ರಣಬೇಟೆಗಾರನ ಎಂಟ್ರಿಯಾಗಿದೆ.
ಯೆಸ್, ಎಷ್ಟು ಚಾನ್ಸ್ ನೀಡಿದ್ರೂ ಸದುಪಯೋಗ ಮಾಡಿಕೊಳ್ಳದ ಶಿವಮ್ ದುಬೆಗೆ ಇಂದು ತಂಡದಲ್ಲಿ ಸ್ಥಾನ ಸಿಗೋದು ಡೌಟ್. ಹಾಗಾಗಿ ಟೀಮ್ ಇಂಡಿಯಾದಲ್ಲಿ ದುಬೆ ಬದಲಿಗೆ ಸಂಜು ಸ್ಯಾಮ್ಸನ್ಗೆ ಸ್ಥಾನ ನೀಡಲು ಕ್ಯಾಪ್ಟನ್ ರೋಹಿತ್ ಶರ್ಮಾ ಮುಂದಾಗಿದ್ದಾರೆ ಎಂದು ತಿಳಿದು ಬಂದಿದೆ.
ರಾಜಸ್ಥಾನ್ ತಂಡದ ನಾಯಕನಾಗಿ ಸಂಜು ಸ್ಯಾಮ್ಸನ್ ತಂಡವನ್ನು ಮುನ್ನಡೆಸಿದ್ರು. ಐಪಿಎಲ್ನಲ್ಲಿ ಸಂಜು ವಿಕೆಟ್ ಕೀಪರ್ ಮತ್ತು ಬ್ಯಾಟರ್ ಆಗಿ ಯಶಸ್ವಿಯಾಗಿದ್ದಾರೆ. ಈ ಐಪಿಎಲ್ ಋತುವಿನಲ್ಲಿ ತಾನು ಆಡಿರೋ 15 ಪಂದ್ಯಗಳಲ್ಲಿ 531 ರನ್ ಗಳಿಸಿದ್ದರು.
ಇದನ್ನೂ ಓದಿ:ಇಂದು ನಡೆಯಬೇಕಿದ್ದ ಟೀಮ್ ಇಂಡಿಯಾ, ಸೌತ್ ಆಫ್ರಿಕಾದ ಫೈನಲ್ ಪಂದ್ಯ ದಿಢೀರ್ ರದ್ದು?
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ