/newsfirstlive-kannada/media/media_files/2025/08/09/air_chief_marshal-2025-08-09-14-32-22.jpg)
ಬೆಂಗಳೂರು: ಆಪರೇಷನ್ ಸಿಂಧೂರ ವೇಳೆ ಪಾಕಿಸ್ತಾನದ 5 ಎಫ್- 16 ಫೈಟರ್ ಜೆಟ್ಗಳನ್ನು ಹಾಗೂ ಒಂದು ದೊಡ್ಡ ವಿಮಾನವನ್ನು ನಾಶಗೊಳಿಸಲಾಗಿದೆ ಎಂದು ಭಾರತೀಯ ವಾಯುಪಡೆ (ಐಎಎಫ್) ಯ ಏರ್ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಏರ್ ಮಾರ್ಷಲ್ ಕತ್ರೆ ವಾರ್ಷಿಕ ಉಪನ್ಯಾಸದಲ್ಲಿ ಪಾಕ್ ಮೇಲಿನ ದಾಳಿಯ ಭೀಕರತೆಯ ಬಗ್ಗೆ ಅವರು ಹೇಳಿದ್ದಾರೆ.
ಐಎಎಫ್ ಏರ್ಚೀಫ್ ಮಾರ್ಷಲ್ ಎಪಿ ಸಿಂಗ್ ಅವರು ಮಾತನಾಡಿ, ಪಾಕಿಸ್ತಾನದ ಜಾಕೊಬಾದ್ನ ಶಹ್ಬಾಜ್ ಏರ್ಬೇಸ್ನಲ್ಲಿ ನಿಲ್ಲಿಸಲಾಗಿದ್ದ 5 ಎಫ್-16 ಫೈಟರ್ ಜೆಟ್ಗಳನ್ನು ನಾಶಗೊಳಿಸಲಾಗಿದೆ. ಇದರ ಜೊತೆಗೆ ಮುರಿದ್ ಮತ್ತು ಚಕ್ಲಾಲಾ ಪ್ರದೇಶಗಳಲ್ಲಿ ಇದ್ದ ಕಮಾಂಡ್ ಹಾಗೂ ಕಟ್ರೋಲ್ ಕೇಂದ್ರಗಳು ಆಪರೇಷನ್ ಸಿಂಧೂರ್ ಸಮಯದಲ್ಲಿ ಹಾನಿಗೆ ಒಳಗಾಗಿವೆ. ಇದರಿಂದ ಪಾಕಿಸ್ತಾನ ದೊಡ್ಡ ನಷ್ಟ ಅನುಭವಿಸಿದೆ ಎಂದು ಹೇಳಿದ್ದಾರೆ.
ELINT ಏರ್ಕ್ರಾಫ್ಟ್ ಅಥವಾ AWACS (Airborne Warning and Control System) ಸೇರಿದ ದೊಡ್ಡ ವಿಮಾನವನ್ನು ಕೇವಲ 300 ಕಿಲೋ ಮೀಟರ್ ದೂರದಿಂದಲೇ ಹೊಡೆದುರುಳಿಸಲಾಗಿದೆ. ಭೂಮಿಯಿಂದ ಗಾಳಿಯಲ್ಲಿ ಹೊಡೆದುರಳಿಸಿದಂತಹ ದೊಡ್ಡ ವಿಮಾನ ಅಂತ ಇದು ದಾಖಲಾಗಿದೆ ಎಂದು ಏರ್ಚೀಫ್ ಮಾರ್ಷಲ್ ಎಪಿ ಸಿಂಗ್ ಹೇಳಿದ್ದಾರೆ.
ಇದನ್ನೂ ಓದಿ:‘ಜೀವ ಇಲ್ಲದಿದ್ದವರು ವೋಟ್ ಹಾಕಿದ್ರೆ ಜವಾಬ್ದಾರರು ಯಾರು?’- ಸಿಎಂ ಸಿದ್ದರಾಮಯ್ಯ
ಆಪರೇಷನ್ ಸಿಂಧೂರನಲ್ಲಿ ಭಾರತದ ಆರ್ಮಿಯಲ್ಲಿ ಎಸ್-400 ಡಿಫೆನ್ಸ್ ಸಿಸ್ಟಮ್ ಅತ್ಯುತ್ತಮ ಕೆಲಸ ಮಾಡಿದೆ. ಹೀಗಾಗಿಯೇ ಎಸ್-400 ಡಿಫೆನ್ಸ್ ಸಿಸ್ಟಮ್ ಅನ್ನು ಸೇನೆಯಲ್ಲಿ ಗೇಮ್ ಚೈಂಜರ್ ಎನ್ನಲಾಗುತ್ತಿದೆ. ಪಾಕಿಸ್ತಾನದವರು ಯಾವುದೇ ಬಾಂಬ್ಗಳನ್ನು ಬಳಸುವುದಕ್ಕೆ ಸಾಧ್ಯವಾಗಿಲ್ಲ. ನಮ್ಮ ಸೇನೆಯ ಬಲ ಭೇದಿಸಲು ಸಾಧ್ಯವಾಗದ ಕಾರಣ ಯಾವುದನ್ನು ಅವರು ಬಳಕೆ ಮಾಡಲಿಲ್ಲ ಎಂದು ಹೇಳಿದ್ದಾರೆ.
ನಾವು ದಾಳಿ ಮಾಡುವಾಗ ಪಾಕಿಸ್ತಾನದ ಮುರಿಡ್ಕೆಯಲ್ಲಿರುವ ಲಷ್ಕರ್-ಇ-ತೊಯ್ಬಾದ ಕೇಂದ್ರ ಕಚೇರಿ ಮೇಲೆ ಅಟ್ಯಾಕ್ ಮಾಡಲಾಗಿದೆ. ನಾವು ಕೇವಲ ಸ್ಯಾಟಲೈಟ್ ಫೋಟೋಗಳನ್ನು ತೋರಿಸುತ್ತಿಲ್ಲ. ಅಲ್ಲಿನ ಸ್ಥಳೀಯ ಮಾಧ್ಯಗಳ ಮೇಲೆ ಗಮನ ಹರಿಸಿದರೆ ಎಲ್ಲ ಮಾಹಿತಿ ಸಿಗುತ್ತವೆ. ಇನ್ನು ಇದೇ ವೇಳೆ ಲಷ್ಕರ್-ಇ-ತೊಯ್ಬಾದ ಕೇಂದ್ರ ಕಚೇರಿ ಮೇಲೆ ಅಟ್ಯಾಕ್ ಮಾಡಿರುವ ಫೋಟೋವನ್ನು ಕೂಡ ಏರ್ಚೀಫ್ ಮಾರ್ಷಲ್ ಎಪಿ ಸಿಂಗ್ ತೋರಿಸಿದರು ಎನ್ನಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ