/newsfirstlive-kannada/media/media_files/2025/08/16/fire-on-shop3-2025-08-16-11-50-13.jpg)
ಬೆಂಗಳೂರು: ಬೆಳಗ್ಗಿನ ಜಾವ 3 ಗಂಟೆ ಸುಮಾರಿಗೆ ನಗರತ್ ಪೇಟೆಯಲ್ಲಿ ಬೆಂಕಿ ಅವಘಡ ಸಂಭವಿಸಿ 5 ಮೃತಪಟ್ಟಿದ್ದಾರೆ. ಇಬ್ಬರು ಮಕ್ಕಳು ಬೆಂಕಿಯ ಕೆನ್ನಾಲಿಗೆಗೆ ಬಲಿಯಾಗಿದ್ದಾರೆ. ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ. ಇನ್ನೂ, ಬೆಂಕಿಯ ಕೆನ್ನಾಲಿಗೆಗೆ ಮದನ್ ಸಿಂಗ್, ಪತ್ನಿ ಸಂಗೀತ ಸೇರಿ ಐದು ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ.
/filters:format(webp)/newsfirstlive-kannada/media/media_files/2025/08/16/fire-on-shop-2025-08-16-11-16-54.jpg)
ಇದನ್ನೂ ಓದಿ:ಭರ್ಜರಿ ಬ್ಯಾಚುಲರ್ಸ್ 2 ಮುಕ್ತಾಯದ ಬೆನ್ನಲ್ಲೇ ಪ್ರವೀಣ್​ ಜೈನ್ ಮನೆಗೆ ಹೊಸ ಅತಿಥಿ ಆಗಮನ.. ಏನದು..?
ಸದ್ಯ ಘಟನಾ ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿ ಬೆಂಕಿ ನಂದಿಸುತ್ತಿದ್ದಾರೆ. ಇನ್ನೂ, ಬೆಂಕಿಯ ಕೆನ್ನಾಲಿಗೆಗೆ ಮದನ್ ಸಿಂಗ್, ಪತ್ನಿ ಸಂಗೀತ ಸೇರಿ ಐದು ಜನ ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಮದನ್​ ಕುಟಂಬ ಎರಡನೇ ಮಹಡಿಯಲ್ಲಿದ್ದ ವಾಸವಿತ್ತು. ಈಗ ಅಗ್ನಿಶಾಮಕ ದಳ ಎರಡು ಮೃತದೇಹಗಳನ್ನು ಹೊರತೆಗೆದಿದ್ದಾರೆ.
/filters:format(webp)/newsfirstlive-kannada/media/media_files/2025/08/16/fire-on-shop2-2025-08-16-11-30-01.jpg)
ಇನ್ನೂ, ಮದನ್ ಮಾಡಿದ ಎಡವಟ್ಟಿಗೆ ಇಡೀ ಕುಟುಂಬ ಬಲಿಯಾಯ್ತಾ ಎಂಬ ಅನುಮಾನ ಶುರುವಾಗಿದೆ. ಮೊದಲನೇ ಪ್ಲೋರ್​ನಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಆಗ ಸುಟ್ಟ ವಾಸನೆ ಬರ್ತಿದೆ ಅಂತ ಮದನ್ ಕೆಳಗೆ ಬಂದಿದ್ದ. ಆದ್ರೆ, ಮದನ್​ ಕೆಳಗೆ ಬರುವಾಗ ಮನೆಗೆ ಬೀಗ ಹಾಕಿ ಹೊರ ಬಂದಿದ್ದ. ಮನೆಯಲ್ಲಿ ಮದನ್ ಕುಮಾರ್ ಹೆಂಡ್ತಿ ಮಕ್ಕಳು ಒಳಗಡೆಯೇ ಇದ್ದರಂತೆ. ಹೊರಗಡೆ ಬಂದ ಮದನ್ ಸಿಂಗ್ ಬೆಂಕಿಯ ಕೆನ್ನಾಲಿಗೆ ಸುಟ್ಟು ಕರಕಲು ಆಗಿದ್ದ. ಮನೆಯಲ್ಲಿದ್ದ ಹೆಂಡ್ತಿ ಮಕ್ಕಳು ಹೊರ ಬರಲಾಗದೇ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಐವರ ಸಾವಿನ ಬಗ್ಗೆ ಪೊಲೀಸರಿಂದ ಮಾಹಿತಿ ಆಚೆ ಬರಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us