77ನೇ ಗಣರಾಜ್ಯೋತ್ಸವ ಸಂಭ್ರಮ; ರಾಜ್ಯಪಾಲರ ಭಾಷಣದ ಮೇಲೆ ಭಾರೀ ಕುತೂಹಲ..!

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ರಾಜ್ಯಪಾಲರ ಭಾಷಣದ ಮೇಲಿದೆ. ಕಳೆದ ಬಾರಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಟೀಕೆಗಳಿದ್ದ ಕಾರಣ, ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದದೆ ಕೇವಲ ಒಂದೆರಡು ಸಾಲು ಓದಿ ಮುಕ್ತಾಯಗೊಳಿಸಿದ್ದರು.

author-image
Ganesh Kerekuli
Manekshaw Parade Ground (2)
Advertisment

ಬೆಂಗಳೂರು: ಇಂದು ದೇಶಾದ್ಯಂತ 77ನೇ ಗಣರಾಜ್ಯೋತ್ಸವದ ಸಂಭ್ರಮ ಮನೆ ಮಾಡಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಮಾಣಿಕ್ ಶಾ ಪರೇಡ್ ಮೈದಾನದಲ್ಲಿ ರಾಜ್ಯ ಮಟ್ಟದ ಗಣರಾಜ್ಯೋತ್ಸವ ಆಚರಣೆಗೆ ಕ್ಷಣಗಣನೆ ಆರಂಭವಾಗಿದ್ದು, ಕೇಸರಿ-ಬಿಳಿ-ಹಸಿರು ಬಣ್ಣಗಳ ಅಲಂಕಾರದೊಂದಿಗೆ ಮೈದಾನ ಕಂಗೊಳಿಸುತ್ತಿದೆ.

ಬೆಳಗ್ಗೆ ಧ್ವಜಾರೋಹಣ

ಬೆಳಿಗ್ಗೆ ಸರಿಯಾಗಿ 10.30ಕ್ಕೆ ಗೌರವಾನ್ವಿತ ರಾಜ್ಯಪಾಲರಾದ ಥಾವರ್ ಚಂದ್ ಗೆಹಲೋಥ್ ಅವರು ಧ್ವಜಾರೋಹಣ ನೆರವೇರಿಸಲಿದ್ದಾರೆ. ಧ್ವಜಾರೋಹಣದ ನಂತರ ಅವರು ವಿವಿಧ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಲಿದ್ದಾರೆ. ಬಳಿಕ ನಾಡಿನ ಜನತೆಯನ್ನುದ್ದೇಶಿಸಿ ಗಣರಾಜ್ಯೋತ್ಸವದ ಸಂದೇಶ ನೀಡಲಿದ್ದಾರೆ. ಈ ಐತಿಹಾಸಿಕ ಕ್ಷಣಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಚಿವರು, ಶಾಸಕರು ಹಾಗೂ ಹಿರಿಯ ಅಧಿಕಾರಿಗಳು ಸಾಕ್ಷಿಯಾಗಲಿದ್ದಾರೆ.

ಆಕರ್ಷಕ ಪಥಸಂಚಲನ ಮತ್ತು ಸಾಂಸ್ಕೃತಿಕ ವೈಭವ:

ಈ ಬಾರಿಯ ಪಥಸಂಚಲನದಲ್ಲಿ ಆರ್ಮಿ, ಏರ್‌ಫೋರ್ಸ್, ಸಿಆರ್‌ಪಿಎಫ್ ಮಹಿಳಾ ಪಡೆ ಹಾಗೂ ವಿಶೇಷ ಆಕರ್ಷಣೆಯಾಗಿ ನೆರೆರಾಜ್ಯ ತಮಿಳುನಾಡಿನ ಪೊಲೀಸ್ ಪಡೆ ಪಾಲ್ಗೊಳ್ಳುತ್ತಿದೆ. ಇದರೊಂದಿಗೆ ಸ್ಕೌಟ್ಸ್, ಗೈಡ್ಸ್, ಎನ್‌ಸಿಸಿ, ಸೇವಾದಳ ಹಾಗೂ ವಿವಿಧ ಶಾಲೆಗಳ ಮಕ್ಕಳು ಸೇರಿದಂತೆ ಒಟ್ಟು 37 ತುಕಡಿಗಳಲ್ಲಿ ಸುಮಾರು 1,100 ಮಂದಿ ಕವಾಯತು ನಡೆಸಲಿದ್ದಾರೆ.

ಇದನ್ನೂ ಓದಿ: ಅಕ್ಷರ ಬ್ರಹ್ಮ ಶತಾವಧಾನಿ ಡಾ.ಆರ್.ಗಣೇಶ್​ಗೆ ‘ಪದ್ಮಭೂಷಣ’ ಗೌರವ! ಅವಧಾನ ಕಲೆಗೆ ಸಂದ ರಾಷ್ಟ್ರಮಟ್ಟದ ಮನ್ನಣೆ

Manekshaw Parade Ground (1)

ಪಥಸಂಚಲನದ ನಂತರ ಸುಮಾರು 1,400 ಶಾಲಾ ಮಕ್ಕಳಿಂದ ಎರಡು ಅದ್ಭುತ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನಗೊಳ್ಳಲಿವೆ. ಬ್ಯಾಂಡ್ ಸೆಟ್‌ನ ಸುಮಧುರ ಸಂಗೀತ ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಲಿದೆ.

ಬಿಗಿ ಪೊಲೀಸ್ ಬಂದೋಬಸ್ತ್:

  • ಕಾರ್ಯಕ್ರಮಕ್ಕೆ ಯಾವುದೇ ಅಡ್ಡಿಯಾಗದಂತೆ ನಗರ ಪೊಲೀಸರು ಬಿಗಿ ಭದ್ರತೆ ಕೈಗೊಂಡಿದ್ದಾರೆ.
  • 2,000ಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿಗಳ ನಿಯೋಜನೆ.
  • ಮೈದಾನದ ಸುತ್ತಮುತ್ತ 100ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳ ಅಳವಡಿಕೆ.
  • ಪ್ರವೇಶ ದ್ವಾರಗಳಲ್ಲಿ 4 ಬ್ಯಾಗೇಜ್ ಸ್ಕ್ಯಾನರ್‌ಗಳ ಮೂಲಕ ತಪಾಸಣೆ.

ರಾಜ್ಯಪಾಲರ ಭಾಷಣದ ಮೇಲೆ ಕುತೂಹಲ

ಈ ಬಾರಿಯ ಗಣರಾಜ್ಯೋತ್ಸವದಲ್ಲಿ ಎಲ್ಲರ ಗಮನ ರಾಜ್ಯಪಾಲರ ಭಾಷಣದ ಮೇಲಿದೆ. ಕಳೆದ ಬಾರಿ ವಿಧಾನಮಂಡಲದ ಜಂಟಿ ಅಧಿವೇಶನದಲ್ಲಿ ಕೇಂದ್ರ ಸರ್ಕಾರದ ನರೇಗಾ ಯೋಜನೆಯ ಟೀಕೆಗಳಿದ್ದ ಕಾರಣ, ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಪೂರ್ಣವಾಗಿ ಓದದೆ ಕೇವಲ ಒಂದೆರಡು ಸಾಲು ಓದಿ ಮುಕ್ತಾಯಗೊಳಿಸಿದ್ದರು. ಇದು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ದೊಡ್ಡ ಜಟಾಪಟಿಗೆ ಕಾರಣವಾಗಿತ್ತು.

ಇದನ್ನೂ ಓದಿ: ದೇಶದಲ್ಲಿ 77ನೇ ಗಣರಾಜ್ಯೋತ್ಸವದ ಸಂಭ್ರಮ; 'ಕರ್ತವ್ಯ ಪಥ'ದಲ್ಲಿ ಅದ್ಧೂರಿ ಪೆರೇಡ್‌ಗೆ ಕ್ಷಣಗಣನೆ..!

Manekshaw Parade Ground

ಆದರೆ, ಈ ಬಾರಿಯ ಗಣರಾಜ್ಯೋತ್ಸವ ಭಾಷಣದಲ್ಲಿ ಕೇಂದ್ರದ ವಿರುದ್ಧ ಯಾವುದೇ ಟೀಕೆಯ ಅಂಶಗಳಿಲ್ಲದ ಕಾರಣ ಮತ್ತು ಈಗಾಗಲೇ ರಾಜ್ಯಪಾಲರು ಭಾಷಣದ ಪ್ರತಿ ಪ್ರತಿಯನ್ನು ಪರಿಶೀಲಿಸಿ ಒಪ್ಪಿಗೆ ನೀಡಿರುವುದರಿಂದ, ಅವರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನೇ ಯಥಾವತ್ತಾಗಿ ಓದುತ್ತಾರೆ ಎಂಬ ನಿರೀಕ್ಷೆ ಇದೆ.

ಒಟ್ಟಾರೆಯಾಗಿ, ರಾಜಧಾನಿಯಲ್ಲಿ ಗಣರಾಜ್ಯೋತ್ಸವದ ಸಡಗರ ಮನೆ ಮಾಡಿದ್ದು, ಸಂವಿಧಾನದ ಆಶಯಗಳನ್ನು ಸ್ಮರಿಸುವ ದಿನಕ್ಕೆ ಕ್ಷಣಗಣನೆ ಆರಂಭವಾಗಿದೆ.

ಇದನ್ನೂ ಓದಿ: ಸಂಕಷ್ಟಕ್ಕೆ ಸಿಲುಕಿದ ಜಡೇಜಾ ಕರಿಯರ್.. ಮತ್ತೊಬ್ಬ ಸ್ಟಾರ್​ಗೆ ಒಲಿದ ಅದೃಷ್ಟ..!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

thawar chand gehlot republic day tableau Republic Day 2026 Republic Day Parade Manekshaw Parade Ground
Advertisment