/newsfirstlive-kannada/media/media_files/2025/08/30/sujatha-bhat5-2025-08-30-12-06-49.jpg)
ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ದೂರುದಾರೆ ಸುಜಾತಾ ಭಟ್​ ಎಸ್​ಐಟಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ಇದನ್ನೂ ಓದಿ: ಯೂಟ್ಯೂಬರ್ ಹೆಸರು ರಿವೀಲ್ ಮಾಡಿದ್ದ ಸುಜಾತಾ ಭಟ್..!
SIT ತನಿಖಾಧಿಕಾರಿ ಗುಣಪಾಲ ಜೆ ಪಶ್ನೆಗಳಿಗೆ ದಾಖಲೆ ಒದಗಿಸಲಾಗದೆ ಸುಜಾತಾ ಭಟ್ ತಪ್ಪೊಪ್ಪಿಕೊಂಡಿದ್ದಾಳೆ. ನಾನು ಹೇಳಿದ ಕತೆ ಶೇಕಡ 80 % ರಷ್ಟು ಸುಳ್ಳು ಎಲ್ಲಾ ಕಾಲ್ಪನಿಕ ಪಾತ್ರಗಳು ಎಂದು ಸುಜಾತಾ ಭಟ್​ ಹೇಳಿದ್ದಾಳಂತೆ. ಭೂ ವಿವಾದವಿರುವುದು ಸತ್ಯ, ಬೇರೆ ಎಲ್ಲಾ ಕಾಲ್ಪನಿಕ ಎಂದು ಹೇಳಿದ್ದಾಳಂತೆ. ತನ್ನಿಂದ ಒತ್ತಾಯ ಪೂರ್ವಕವಾಗಿ ಈ ಕತೆ ಹೇಳಿಸಲಾಗಿದೆ. ಷಡ್ಯಂತ್ರ, ಪಿತೂರಿಯಲ್ಲಿ ಸಿಲುಕಿಸಲಾಗಿದೆ ಎಂದು ಸುಜಾತಾ ಭಟ್​ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾಳೆ.
/filters:format(webp)/newsfirstlive-kannada/media/media_files/2025/08/29/sujatha2-2025-08-29-07-52-58.jpg)
ಆದ್ರೆ ಇದೀಗ ಸುಜಾತಾ ಕಟ್ಟಿದ್ದ ಕಟ್ಟು ಕಥೆಗೆ ಮೇಜರ್ ಟ್ವಿಸ್ಟ್​ ಸಿಕ್ಕಿದೆ. ಕಥೆಯಲ್ಲಿ ಸತ್ತಿದ್ದ ವಾಸಂತಿ ಶ್ರೀವತ್ಸ ಇನ್ನೂ ಜೀವಂತವಾಗಿದ್ದಾಳೆ ಎಂದು ಸುಜಾತಾ ಭಟ್​ ಎಸ್​ಐಟಿ ಮುಂದೆ ಹೇಳಿದ್ದಾಳೆ. ವಾಸಂತಿಯ ಶವ ಅಂತ ಸಿಕ್ಕಿದ್ದು ನದಿಯಲ್ಲಿ ಕೊಳೆತ ಶವ. ಅದು ವಾಸಂತಿಯ ಶವ ಆಗಿರಲಿಲ್ಲ, ಕೊಳೆತ ಶವ ವಾಸಂತಿಯದ್ದು ಎಂದು ಹೇಗೆ ನಂಬಿದ್ರಿ? ಎಂದು ಸುಜಾತಾ ಹೇಳಿದ್ದಾಳೆ. ಸುಜಾತಾ ಭಟ್ ನೀಡಿರುವ ಮಾಹಿತಿ ಆಧಾರದಲ್ಲಿ SIT ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.
/filters:format(webp)/newsfirstlive-kannada/media/media_files/2025/08/22/sujata-bhatt-2025-08-22-21-21-47.jpg)
ಆರಂಭದಲ್ಲಿ ನನ್ನ ಮಗಳು ನಾಪತ್ತೆಯಾಗಿದ್ದಾಳೆ. ಆಕೆಯ ಅಸ್ತಿಯನ್ನ ಹುಡುಕಿಕೊಡಿ ಅಂತ ಸುಜಾತ ಭಟ್​ ಕಾರಿನಲ್ಲಿ ಬಂದು ದೂರು ಕೊಟ್ಟಿದ್ದರು. ನಂತರ ಸುಳ್ಳು ವಾಸಂತಿಯ ಫೋಟೋ ತೋರಿಸಿ ಸಿಕ್ಕಿಹಾಕಿಕೊಂಡಿದ್ದರು. ಮಾಧ್ಯಮ ಹಾಗೂ ಬುರುಡೆ ಗ್ಯಾಂಗ್​ ಮುಂದೆ ದಿನಕ್ಕೊಂದು ಹೇಳಿಕೆ ನೀಡುತ್ತಿದ್ದರು. ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣ ಕಾಲ್ಪನಿಕ ಸೃಷ್ಟಿ ಎಂದು ದೂರುದಾರೆ ಸುಜಾತಾ ಭಟ್​ ಎಸ್​ಐಟಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾಳೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us