ಯೂಟ್ಯೂಬರ್ ಹೆಸರು ರಿವೀಲ್ ಮಾಡಿದ್ದ ಸುಜಾತಾ ಭಟ್..!

ಮಗಳು ಅನನ್ಯಾ ಭಟ್ ನಾಪತ್ತೆ ಕಥೆಯನ್ನು ಹೆಣೆದು ಸೊಗಸಾಗಿ ಪೋಣಿಸಿದ್ದ ಮ್ಯಾಜಿಕ್ ಸುಜಾತ ಭಟ್​​ ಸದ್ಯ ಸಂಕಟಕ್ಕೆ ಸಿಲುಕಿದ್ದಾರೆ. ಎಸ್​ಐಟಿ ಅಧಿಕಾರಿಗಳ ವಿಚಾರಣೆಯ ವ್ಯೂಹ ಅವರನ್ನ ಸಂಕಷ್ಟಕ್ಕೆ ದೂಡಿದೆ. ಬಂಧನದ ಭೀತಿಯಲ್ಲಿರುವ ಸುಜಾತಾ ಸದ್ಯ ಮತ್ತೋರ್ವ ಯೂಟ್ಯೂಬರ್ ಹೆಸರೇಳಿದ್ದಾಳೆ ಎನ್ನಲಾಗಿದೆ.

author-image
Ganesh Kerekuli
Dharmasthala Sujata bhat

ಸುಜಾತಾ ಭಟ್

Advertisment

ಮಗಳು ಅನನ್ಯಾ ಭಟ್ ನಾಪತ್ತೆ ಕಥೆಯನ್ನು ಹೆಣೆದು ಸೊಗಸಾಗಿ ಪೋಣಿಸಿದ್ದ ಮ್ಯಾಜಿಕ್ ಸುಜಾತ ಭಟ್​​ ಸದ್ಯ ಸಂಕಟಕ್ಕೆ ಸಿಲುಕಿದ್ದಾರೆ. ಎಸ್​ಐಟಿ ಅಧಿಕಾರಿಗಳ ವಿಚಾರಣೆಯ ವ್ಯೂಹ ಅವರನ್ನ ಸಂಕಷ್ಟಕ್ಕೆ ದೂಡಿದೆ. ಬಂಧನದ ಭೀತಿಯಲ್ಲಿರುವ ಸುಜಾತಾ ಸದ್ಯ ಮತ್ತೋರ್ವ ಯೂಟ್ಯೂಬರ್ ಹೆಸರೇಳಿದ್ದಾಳೆ ಎನ್ನಲಾಗಿದೆ.

ಧರ್ಮಸ್ಥಳದಲ್ಲಿ ಅನನ್ಯಾ ಭಟ್ ನಾಪತ್ತೆ ಪ್ರಕರಣ ಕಪೋಲಕಲ್ಪಿತ ಅಂತ ಅರಿವಾದ್ಮೇಲೆ ಇದೊಂದು ಭೂವಿವಾದ ಕೇಸ್ ಅಂತ ಎಸ್​ಐಟಿ ನಿರ್ಧರಿಸಿದೆ. ಧರ್ಮ ರಹಸ್ಯ ಬಯಲಾಗ್ತಿದ್ದಂತೆ ನನ್ನನ್ನು ಬಿಟ್ಟುಬಿಡಿ ಅಂತ ಕಣ್ಣೀರಾಕಿದ್ದ ಸುಜಾತಾ ಭಟ್​​​​ಗೆ ಎಸ್​ಐಟಿ ಕಚೇರಿಯಲ್ಲಿ ಸುದೀರ್ಘ ವಿಚಾರಣೆ ನಡೀತಿದೆ. ಸುಜಾತಾ ಭಟ್​​ಗೆ ಬಂಧನದ ಭೀತಿ ಎದುರಾಗಿದ್ದು ಮತ್ತೊಬ್ಬ ಯೂಟ್ಯೂಬರ್ ಹೆಸರನ್ನು ಬಾಯ್ಬಿಟ್ಟಿದ್ದಾಳೆ.

ಅಜ್ಜಿ ಬಾಯಲ್ಲಿ ಯೂಟ್ಯೂಬರ್!

ವಿಚಾರಣೆ ವೇಳೆ ಸುಜಾತ ಭಟ್ ಯೂಟ್ಯೂಬರ್ ಒಬ್ಬನ ಹೆಸರು ಬಾಯ್ಬಿಟ್ಟಿದ್ದಾರೆ. ಯುನೈಟೆಡ್ ಮೀಡಿಯಾ ಯೂಟ್ಯೂಬರ್ ಅಭಿಷೇಕ್ ಹೆಸರು ಹೇಳಿದ್ದಾಳೆ. 4-5 ತಿಂಗಳ ಹಿಂದೆಯೇ ಯೂಟ್ಯೂಬರ್ ಅಭಿಷೇಕ್, ಸುಜಾತಾ ಭಟ್​ರ ಸಂದರ್ಶನ ಮಾಡಿದ್ದ.. ಬಯಲಾದ ಧರ್ಮಸ್ಥಳದ ಮತ್ತೊಂದು ಕರ್ಮಕಾಂಡ ಹೆಸರಿನಲ್ಲಿ ಸಂದರ್ಶನ ನಡೆಸಿದ್ದ.. ಯೂಟ್ಯೂಬರ್ ಮೂಲಕ ಬುರುಡೆ ಗ್ಯಾಂಗ್​​ಗೆ ಸುಜಾತಾ ಸಂಪರ್ಕಿಸಲಾಗಿತ್ತು.. ಬಳಿಕ ಬುರುಡೆ ಸ್ಟೋರಿಗೆ ಬುರುಡೆ ಗ್ಯಾಂಗ್ ಸುಜಾತಾ ಭಟ್​ಗಳನ್ನು ಬಳಸಿಕೊಂಡಿತ್ತು.. ಆ ಮೂಲಕ ಧರ್ಮಸ್ಥಳ ಪ್ರಕರಣವನ್ನ ಮತ್ತಷ್ಟು ಗಂಭೀರವಾಗಿಸಲು ಷಡ್ಯಂತ್ರ ರೂಪಿಸಲಾಗಿತ್ತು.. ಇನ್ನು ಯೂಟ್ಯೂಬ್​​ನಲ್ಲಿ ಧರ್ಮಸ್ಥಳದ ಸುದ್ದಿ ಹಾಕಿದ್ದ ಅಭಿಷೇಕ ಲಕ್ಷಾಂತರ ವೀವ್ಸ್ ಪಡೆದಿದ್ದ ಎನ್ನಲಾಗಿದೆ. 

ಇದನ್ನೂ ಓದಿ: ಅನ್ನದಾತರಿಗಾಗಿ ನ್ಯೂಸ್​ಫಸ್ಟ್​ ವಿಶೇಷ ಕಾರ್ಯಕ್ರಮ; ನಾಳೆ ಬೆಳಗಾವಿಯಲ್ಲಿ ‘ಕೃಷಿ ದೇವೋಭವ’ ವಿಚಾರ ಸಂಕಿರಣ

ಅಜ್ಜಿ ಹೇಳಿದ ಕಥೆಯಲ್ಲಿ ಹೆಚ್ಚಿನವರು ಬದುಕಿಯೇ ಇಲ್ಲ!

ಎಸ್​ಐಟಿ ವಿಚಾರಣೆಯ ವೇಳೆ ಹಲವು ವಿಚಾರಗಳು ಪ್ರಸ್ತಾಪ ಆಗಿವೆ.. ಮ್ಯಾಜಿಕ್ ಅಜ್ಜಿ ಹೇಳಿದ ಕಥೆಗಳನ್ನು ಆಧರಿಸಿ ಎಸ್​ಐಟಿ ಅಧಿಕಾರಿಗಳು ತನಿಖೆ ನಡೆಸೋದೇ ದೊಡ್ಡ ಸವಾಲಾಗಿದೆ.. ಯಾಕಂದ್ರೆ  ಮಿಸ್ಟ್ರಿ ಗಿರಾಕಿ ಹೇಳಿದ ಹಿಸ್ಟ್ರಿಯಲ್ಲಿ ಹಲವರು ಬದುಕಿಲ್ಲ ಅನ್ನೋದು ಈಗಿರುವ ಪ್ರಶ್ನೆ. 

ಸತ್ತವರ ಕಥೆ ಹೇಳಿರುವ ಅಜ್ಜಿ!

ಅನಿಲ್​ಭಟ್​ರನ್ನು ಮದ್ವೆಯಾಗಿದ್ದೆ ಅಂತ ಸುಜಾತಾ ಭಟ್ ಹೇಳಿದ್ದಾರೆ, ಆದ್ರೆ ಅನನ್ಯಾ ತಂದೆ ಹಾಗೂ ಸುಜಾತ ಗಂಡ ಅನಿಲ್​ ಭಟ್ ಈಗ ಬದುಕಿಲ್ಲ. ಇನ್ನು ಅನನ್ಯಾಳನ್ನು ಸಾಕಿ, ಸಲುಹಿದ್ದ ಅರುಣ್-ವಿಮಲಾ ದಂಪತಿಯೂ ಈಗ ಬದುಕಿಲ್ಲ.. ಇನ್ನು ಅನ್ಯನ್ಯಾಳಿಗೆ ವಿದ್ಯಾಭ್ಯಾಸ ಕೊಡಿಸಿದ್ದ ಕೋಲ್ಕತ್ತಾ ಸೇಟು ಕೂಡ ಬದುಕಿಲ್ಲ, ಇನ್ನು ರಿಪ್ಪನ್​ಪೇಟೆಯಲ್ಲಿ ಆಶ್ರಯ ನೀಡಿದ್ದ ಪ್ರಭಾಕರ್ ಬಾಳಿಗ ಕೂಡ ಜೀವಂತ ಇಲ್ಲ, ಲಿವಿಂಗ್ ಟುಗೆದರ್​​ನಲ್ಲಿದ್ದೆ ಅಂತ ಹೇಳಿದ್ದ ಬೆಂಗಳೂರಿನ ರಂಗಪ್ರಸಾದ್ ಕೂಡ ಮೃತರಾಗಿದ್ದಾರೆ.. ಇನ್ನು ರಂಗಪ್ರಸಾದ್ ಮಗ ಹಾಗೂ ಸೊಸೆ ವಾಸಂತಿ ಕೂಡ ಮೃತಪಟ್ಟಿದ್ದಾರೆ.. ಅತ್ತ ಧರ್ಮಸ್ಥಳಕ್ಕೆ ಕೊಟ್ಟಿದ್ದ ಆಸ್ತಿ ನಮ್ಮ ಅಜ್ಜನದ್ದು ಅಂತ ಹೇಳಿರುವ ಆ ಅಜ್ಜ ಕೂಡ ಈಗ ಬದುಕಿಲ್ಲ. 

ಒಟ್ಟಾರೆ, ಅನನ್ಯಾ ಭಟ್ ಮಿಸ್ಸಿಂಗ್ ಪ್ರಕರಣದ ದೂರು ಕೊಟ್ಟು ತಗಲಾಕಿಕೊಂಡ ಸುಜಾತಾ ಭಟ್ ತಗ್ಲಾಕಿಕೊಂಡಿದ್ದಾರೆ.. ಇಳಿ ವಯಸ್ಸಿನಲ್ಲಿ ಕಾನೂನು ಸಂಕೋಲೆಯಲ್ಲಿ ಬಂಧಿಯಾಗಿರುವ ಸುಜಾತಾ ಭಟ್ ಭವಿಷ್ಯ ಏನಾಗಲಿದೆ ಅನ್ನೋದನ್ನು ಕಾದು ನೋಡಬೇಕಿದೆ.

ಇದನ್ನೂ ಓದಿ: ಗಣೇಶ ವಿಸರ್ಜನೆ ವೇಳೆ ಅವಘಡ.. ಓರ್ವ ಬಾಲಕ ದುರಂತ ಅಂತ್ಯ, ಐವರು ಗಂಭೀರ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment