/newsfirstlive-kannada/media/media_files/2025/08/29/chikkaballapura-2025-08-29-22-12-49.jpg)
ದೊಡ್ಡಬಳ್ಳಾಪುರ: ಗಣೇಶ ವಿಸರ್ಜನೆ ವೇಳೆ ಪಟಾಕಿ ಅವಘಡ ಸಂಭವಿಸಿ ಓರ್ವ ಜೀವ ಕಳೆದುಕೊಂಡಿರುವ ಘಟನೆ ಮುತ್ತೂರಿನಲ್ಲಿ ನಡೆದಿದೆ. ದುರ್ಘಟನೆಯಲ್ಲಿ ಪೊಲೀಸ್ ಪೇದೆ ಸೇರಿ ಐವರಿಗೆ ತೀವ್ರತರ ಗಾಯವಾಗಿದೆ.
ತನುಶ್ ರಾವ್ (15) ಮೃತ ದುರ್ದೈವಿ. ಗಣೇಶ್, ಯೋಗೀಶ್, ಮುನಿರಾಜು, ಚಾಲಕ ನಾಗರಾಜ್, ಚೇತನ್ ಗಾಯಗೊಂಡಿದ್ದಾರೆ. ಘಟನೆಯಲ್ಲಿ ಪೊಲೀಸ್ ಪೇದೆ ಜಾಕಿರ್ ಹುಸೇನ್ಗೆ ಗಾಯವಾಗಿದೆ. ಗಾಯಾಳುಗಳನ್ನ ದೊಡ್ಡಬಳ್ಳಾಪುರದ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಗಾಯಾಳುಗಳ ಯೋಗ ಕ್ಷೇಮವನ್ನು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಎಸ್ಪಿ ಸಿಕೆ ಬಾಬಾ ವಿಚಾರಿಸಿದ್ದಾರೆ. ಶ್ರೀ ಪ್ರೆಂಡ್ಸ್ ಯುವಕರ ತಂಡದಿಂದ ಗಣಪತಿ ವಿಸರ್ಜನೆ ನಡೆಯುತ್ತಿತ್ತು. ಯುವಕರು ಗಣೇಶ ಮೂರ್ತಿಯಿಟ್ಟ ವಾಹನದಲ್ಲಿ ಪಟಾಕಿ ಇಟ್ಟಿದ್ದರು. ವಾಹನದ ಶಾಕಕ್ಕೆ ಏಕಾಏಕಿ ಪಟಾಕಿ ಸ್ಫೋಟಗೊಂಡಿದೆ. ಸ್ಥಳಕ್ಕೆ ದೊಡ್ಡಬಳ್ಳಾಪುರ ಗ್ರಾಮಾಂತರ ಪೊಲೀಸರು ಭೇಟಿ ನೀಡಿದ್ದಾರೆ.
ಇದನ್ನೂ ಓದಿ: ಅನ್ನದಾತರಿಗಾಗಿ ನ್ಯೂಸ್ಫಸ್ಟ್ ವಿಶೇಷ ಕಾರ್ಯಕ್ರಮ; ನಾಳೆ ಬೆಳಗಾವಿಯಲ್ಲಿ ‘ಕೃಷಿ ದೇವೋಭವ’ ವಿಚಾರ ಸಂಕಿರಣ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ