/newsfirstlive-kannada/media/media_files/2025/08/29/krishi-devobhava-3-2025-08-29-20-40-19.jpg)
ನಾಳೆ ಕುಂದಾನಗರಿ ಬೆಳಗಾವಿಯಲ್ಲಿ ಕಬ್ಬು ಬೆಳೆ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯಲಿದೆ. ಸಚಿವರಾದ ಸತೀಶ್ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳ್ಕರ್ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ. ಅದಕ್ಕಾಗಿಯೇ ಬೆಳಗಾವಿ ಕೆಎಲ್ಇ ಸಂಸ್ಥೆಯ ಜೀರಗಿ ಹಾಲ್ನಲ್ಲಿ ಬೃಹತ್ ವೇದಿಕೆ ಸಿದ್ಧವಾಗಿದೆ.
ಬೆಳಗಾವಿ.. ಕುಂದಾನಗರಿಯಾದ್ರೂ ಇಡೀ ರಾಜ್ಯದಲ್ಲೇ ಅತಿ ಹೆಚ್ಚು ಕಬ್ಬು ಬೆಳೆಯುವ ಜಿಲ್ಲೆ. 30ಕ್ಕೂ ಹೆಚ್ಚು ಸಕ್ಕರೆ ಕಾರ್ಖಾನೆಗಳಿದ್ರೂ ರೈತರು ಪ್ರತಿ ವರ್ಷ ಒಂದಲ್ಲ ಒಂದು ಸಂಕಷ್ಟಕ್ಕೆ ಕಂಗಾಲಾಗ್ತಾನೇ ಇದ್ದಾರೆ. ರೈತರ ಕಣ್ಣೀರು ಒರೆಸಲು, ಸಮಸ್ಯೆ ಪರಿಹಾರವಾಗಿ ನ್ಯೂಸ್ ಫಸ್ಟ್ ರಾಜ್ಯದಲ್ಲೇ ಪ್ರಪ್ರಥಮ ಕಾರ್ಯಕ್ರಮ ಹಮ್ಮಿಕೊಂಡಿದೆ.
ಇದನ್ನೂ ಓದಿ:ಅನುಶ್ರೀ ಅರಿಸಿಣ ಶಾಸ್ತ್ರ.. ವ್ಹಾವ್! ಎಷ್ಟು ಚೆನ್ನಾಗಿ ಕಾಣ್ತಾರೆ ನೋಡಿ - VIDEO
ಅಂದಾಗೆ ಗೊಣ್ಣೆ ಹುಳು ಬಾಧೆ ರೈತರ ಕಬ್ಬು ಇಳುವರಿಗೆ ಮಾರಕವಾಗಿ ಪರಿಣಮಿಸಿದೆ. ಇದನ್ನರಿತ ನ್ಯೂಸ್ ಫಸ್ಟ್ ರಾಜ್ಯದಲ್ಲೇ ಪ್ರಪ್ರಥಮ ಬಾರಿಗೆ ಕಬ್ಬು ಬೆಳಗಾರರಿಗಾಗಿ ವಿಶೇಷ ವಿಚಾರ ಸಂಕಿರಣ ಹಮ್ಮಿಕೊಂಡಿದೆ. ನಾಳೆ ಬೆಳಗಾವಿಯ ಕೆಎಲ್ಇ ಜೀರಗಿ ಹಾಲ್ನಲ್ಲಿ ಕೃಷಿ ದೇವೋಭವ ಹೆಸರಿನಡಿ ಕಬ್ಬು ಬೆಳಗಾರರ ವಿಚಾರ ಸಂಕಿರಣ ನಡೆಯಲಿದೆ.
ಕಬ್ಬು ಬೆಳಗಾರರಿಗೆ ವಿಶೇಷ ವಿಚಾರ ಸಂಕಿರಣ
- ನಾಳೆ ಬೆಳಿಗ್ಗೆ 11 ಗಂಟೆಗೆ ನ್ಯೂಸ್ ಫಸ್ಟ್ ವಿಶೇಷ ವಿಚಾರ ಸಂಕಿರಣ
- ಸಚಿವ ಸತೀಶ್ ಜಾರಕಿಹೊಳಿ, ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಚಾಲನೆ
- ರಾಜ್ಯದ ಬೇರೆ ಭಾಗಗಳ ಕೃಷಿ ವಿಜ್ಞಾನಿಗಳು, ತಜ್ಞರು ರೈತರಿಗೆ ಉಪನ್ಯಾಸ
- ಸರ್ಕಾರದ ಯೋಜನೆ, ಕಬ್ಬು ಬೆಳೆಗೆ ಮಣ್ಣಿನ ಆರೋಗ್ಯ ಕಾಪಾಡುವುದು ಹೇಗೆ?
- ಗೊಣ್ಣೆ ಹುಳು ಸಮಸ್ಯೆ ಪರಿಹಾರ, ಉತ್ತಮ ಇಳುವರಿಗೆ ಸುಧಾರಿತ ಕ್ರಮಗಳು
- ತಂತ್ರಜ್ಞಾನದ ಮೂಲಕ ಕಬ್ಬು ಬೆಳೆ ಇಳುವರಿ ಹೆಚ್ಚಿಸುವ ಕುರಿತು ಉಪನ್ಯಾಸ
ಇದನ್ನೂ ಓದಿ:ಸತ್ಯ ಬಿಟ್ಟು ನಾನು ಎಂದು ಹೋಗಿಲ್ಲ, ಹೋಗೋದೂ ಇಲ್ಲ -ವೀರೇಂದ್ರ ಹೆಗ್ಗಡೆ
ಈ ವಿಚಾರ ಸಂಕಿರಣದಲ್ಲಿ ಬೆಳಗಾವಿ ಜಿಲ್ಲೆಯ ಸಾವಿರಾರು ರೈತರು ಭಾಗವಹಿಸಲಿದ್ದಾರೆ. ಬಂದಂತಹ ರೈತರಿಗೆ ನ್ಯೂಸ್ ಫಸ್ಟ್ ಅಚ್ಚುಕಟ್ಟಾದ ವ್ಯವಸ್ಥೆ ಮಾಡಿದೆ. ಆಸಕ್ತ ರೈತರು ನೇರವಾಗಿ ಈ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ನಿಮ್ಮ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬಹುದು.
ಇದನ್ನೂ ಓದಿ:ಚೀನಾ ಮೀರಿಸಿದ ಭಾರತದ ಜಿಡಿಪಿ ಬೆಳವಣಿಗೆ ದರ, ಮೊದಲ ತ್ರೈಮಾಸಿಕದಲ್ಲಿ ದಾಖಲೆ ಬೆಳವಣಿಗೆ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್‌ಫಸ್ಟ್ ಚಾನೆಲ್ ಲಭ್ಯ