/newsfirstlive-kannada/media/media_files/2025/08/29/anushree-1-2025-08-29-19-33-44.jpg)
ಕನ್ನಡದ ಸ್ಟಾರ್ ನಿರೂಪಕಿ ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ನಟಿ, ನಿರೂಪಕಿ ಆಗಿರೋ ಅನುಶ್ರೀ ಪ್ರೀತಿಸಿದ ಹುಡುಗ ರೋಷನ್ ಜೊತೆ ನಿನ್ನೆಯ ದಿನ ಶುಭು ಮುಹೂರ್ತದಲ್ಲಿ ಲಗ್ನ ಆಗಿದ್ದಾರೆ.
ಇದನ್ನೂ ಓದಿ: ನಿರೂಪಕಿ ಅನುಶ್ರೀ ಅಭಿಮಾನಕ್ಕೆ ಫ್ಯಾನ್ಸ್ ಭಾವುಕ.. ಅದ್ಧೂರಿ ಮದುವೆ ಮಂಟಪದಲ್ಲಿ ಅಪ್ಪು ಫೋಟೋ
ಅಂದ್ಹಾಗೆ ಆ್ಯಂಕರ್ ಅನುಶ್ರೀ ಯಾವ ಊರಿಗೆ ಹೋದರೂ, ಯಾವ ಸ್ಟೇಜಿಗೆ ಹೋದರೂ ಸೋಷಿಯಲ್ ಮೀಡಿಯಾದಲ್ಲಿ ಕಾಣಿಸಿಕೊಂಡರೂ ಅದೊಂದೇ ಪ್ರಶ್ನೆ ಎದುರಾಗ್ತಿತ್ತು. ಅನುಶ್ರೀ ಮದುವೆ ಯಾವಾಗ? ಅನ್ನೋ ಪ್ರಶ್ನೆ ಆಗಿಂದಾಗೇ ಕೇಳಿ ಬರ್ತಿತ್ತು. ಈ ಪ್ರಶ್ನೆಗೀಗ ಉತ್ತರ ಸಿಕ್ಕಿದ್ದು, ಪ್ರೀತಿಸಿದ ಹುಡುಗನ ಜೊತೆಗೆ ಸಪ್ತಪದಿ ತುಳಿದಿದ್ದಾರೆ.
ಇದನ್ನೂ ಓದಿ: ಹುಟ್ಟು ಹಬ್ಬದ ದಿನವೇ ನಿಶ್ಚಿತಾರ್ಥ ಮಾಡಿಕೊಂಡ ಸ್ಟಾರ್ ನಟ ವಿಶಾಲ್; ಫೋಟೋಸ್ ಇಲ್ಲಿವೆ!
ಪ್ರೀತಿಯ ಗೆಳೆಯ ರೋಷನ್ ಜೊತೆಗೆ ಅನುಶ್ರೀ ನಿನ್ನೆ ಹಸೆಮಣೆ ಏರಿದ್ದಾರೆ. ಕನಕಪುರ ರಸ್ತೆಯ ಕಗ್ಗಲಿಪುರ ಬಳಿಯ ಖಾಸಗಿ ಸ್ಥಳದಲ್ಲಿ ಮದುವೆ ಸಮಾರಂಭ ಅದ್ದೂರಿಯಾಗಿ ನೆರವೇರಿತು. ಈ ಮದುವೆಗೆ ಅನುಶ್ರೀ ಆಪ್ತರು, ಕುಟುಂಬಸ್ಥರು ಹಾಗೂ ಸ್ಯಾಂಡಲ್ವುಡ್ ತಾರೆಯರು ಭಾಗಿಯಾಗಿದ್ದರು.
ಇದನ್ನೂ ಓದಿ: ಚೆನ್ನಾಗಿ ಅಡುಗೆ ಮಾಡ್ತೀನಿ, ಅನು ಚೆನ್ನಾಗಿ ತಿಂತಾಳೆ -ಅನುಶ್ರೀ ಬಗ್ಗೆ ಪತಿ ಹೇಳಿದ್ದೇನು?
ಅನುಶ್ರೀಯನ್ನು ನಿರೂಪಕಿ ಅನ್ನೋದಕ್ಕಿಂತ ಹೆಚ್ಚಾಗಿ, ಸ್ನೇಹಿತೆಯಂತೆ ಕಂಡವರು ಜಾಸ್ತಿ. ಹೀಗಾಗಿಯೇ ಮದುವೆಗೆ ಸ್ಯಾಂಡಲ್ವುಡ್ ತಾರೆಯರು ಕುಟುಂಬಸ್ಥರಾಗಿ ಆಗಮಿಸಿದ್ರು. ಶಿವಣ್ಣ, ಡಾಲಿ ಧನಂಜಯ, ರಚಿತಾ ರಾಮ್, ರಾಜ್ ಬಿ ಶೆಟ್ಟಿ, ತರುಣ್ ಸುಧೀರ್, ಶರಣ್, ಪ್ರೇಮ್, ವಿಜಯ್ ರಾಘವೇಂದ್ರ. ಹೀಗೆ ಸಾಲು ಸಾಲು ಸೆಲೆಬ್ರಿಟಿಗಳು ಮದುವೆಯಲ್ಲಿ ಭಾಗಿಯಾಗಿದ್ದರು.
ಇದನ್ನೂ ಓದಿ:ಅನುಶ್ರೀ ಕಲ್ಯಾಣ -ಲೇಟೆಸ್ಟ್ ಫೋಟೋಗಳು
ಇನ್ನು ಅನುಶ್ರೀ ಮದುವೆಯ ಹಳದಿ ಶಾಸ್ತ್ರ ಕೂಡ ಉದ್ದೂರಿಯಾಗಿ ನಡೆದಿದೆ. ಹಳದಿ ಶಾಸ್ತ್ರದ ವಿಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಅದರ ಝಲಕ್ ಇಲ್ಲಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ