ಮಂಗಳೂರು: ಧರ್ಮಸ್ಥಳ ಪ್ರಕರಣದ ತನಿಖೆಯನ್ನು ಎಸ್ಐಟಿ (SIT) ನಡೆಸ್ತಿದೆ. ಇತ್ತ, ಶ್ರೀಕ್ಷೇತ್ರ ಹಾಗೂ ಹೆಗ್ಗಡೆ ಕುಟುಂಬಕ್ಕೆ ಜೈನ ಸಮುದಾಯದಿಂದ ದೊಡ್ಡ ಮಟ್ಟದಲ್ಲಿ ಬೆಂಬಲ ಸಿಕ್ಕಿದೆ. ಇವತ್ತು ರಾಜ್ಯ ಹಾಗೂ ಹೊರ ರಾಜ್ಯಗಳ ಜೈನ ಸಮುದಾಯದಿಂದ ಬೃಹತ್ ಜಾಥಾ ನಡೆಯಿತು.
ವೀರೇಂದ್ರ ಹೆಗ್ಗಡೆಯವರಿಗೆ ಬೆಂಬಲ ಘೋಷಿಸಿ ನಡೆದ ಜಾಥಾವು ಮಹಾದ್ವಾರದಿಂದ ದೇವಸ್ಥಾನದವರೆಗೆ ಸಾಗಿಬಂತು. ರಾಜ್ಯದ ವಿವಿಧ ಮೂಲೆಗಳಿಂದ ಭಟ್ಟಾರಕ ಮಹಾಸ್ವಾಮಿಗಳು ಆಗಮಿಸಿದ್ದರು. 15ಕ್ಕೂ ಅಧಿಕ ಜೈನ ಭಟ್ಟಾರಕ ಸ್ವಾಮಿಗಳು ಈ ವೇಳೆ ಇದ್ದರು.
ಇದನ್ನೂ ಓದಿ:ಸಮಯ ಬಂದಾಗ ಮಾತಾಡ್ತೀನಿ.. ಅಣ್ಣಪ್ಪ ಸ್ವಾಮಿಗೆ ಒಪ್ಪಿಸ್ತೀನಿ -ಡಾ.ವೀರೇಂದ್ರ ಹೆಗ್ಗಡೆ
ಇದೇ ವೇಳೆ ಮಾತನಾಡಿದ ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆ.. ಇವತ್ತು ಕ್ಷೇತ್ರಕ್ಕೆ ಕಳೆ ಬಂದಿದೆ. ಭಟ್ಟಾಚಾರ್ಯರು ಬಂದಿರುವುದು ದೊಡ್ಡ ವಿಷಯ. ಎಲ್ಲಾ ಜೈನ ಸ್ವಾಮಿಗಳು ನಿಮ್ಮ ಜೊತೆಗೆ ಇದ್ದೇವೆ ಎಂದಿದ್ದಾರೆ. ಎಸ್ಐಟಿ ತನಿಖೆ ಆಗುತ್ತಿದೆ, ಹೆಚ್ಚು ಮಾತನಾಡಬಾರದು ಎಂದು ಆದೇಶ ಆಗಿದೆ. ಹೆಣ್ಣು ಮಕ್ಕಳು ಕಣ್ಣೀರು ಹಾಕುತ್ತಿದ್ದಾರೆ. ವೇದನೆ ಪಡುತ್ತಿದ್ದಾರೆ ಎಂದು ಭಕ್ತರು ಹೇಳುತ್ತಾರೆ. ಜನ ನಮಗೆ ನೆಮ್ಮದಿ ಇಲ್ಲ ಎಂದು ಹೇಳುತ್ತಿದ್ದಾರೆ. ಹೆಣ್ಮಕ್ಕಳು ಕೂಡ ಪ್ರತಿಭಟನೆಗೆ ತಯಾರಾಗಿದ್ದಾರೆ. ಆದರೆ ಎಲ್ಲರೂ ಸಂಯಂಮದಿಂದ ಇರಿ ಅಂತಾ ಕರೆ ನೀಡಿದ್ದಾರೆ.
ಇದನ್ನೂ ಓದಿ: ಮಾಸ್ಕ್ ಮ್ಯಾನ್ ಚಿನ್ನಯ್ಯ ಬಂಧನ, ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ
ಈಗ ನಮಗೆ ಫಲ ಸಿಗುತ್ತಿದೆ. ಸತ್ಯ ಬಿಟ್ಟು ನಾನು ಎಂದು ಹೋಗಿಲ್ಲ, ಹೋಗುವುದೂ ಇಲ್ಲ. ಶಾಂತತೆಯನ್ನು ಎಲ್ಲರೂ ಕಾಪಾಡಬೇಕು, ತಾಳ್ಮೆಯಿಂದ ಇರಬೇಕು. ವಿವೇಕಾನಂದರು ದಶ ಲಕ್ಷಣದ ಎಲ್ಲಾ ಗುಣಗಳನ್ನು ಪಾಲಿಸಿದ್ದಾರೆ. ಆದರೆ ಅವರು ಜೈನ ಧರ್ಮದ ಬಗ್ಗೆ ಹೇಳಿಲ್ಲ. ಸತ್ಯ ಅನ್ನುವುದು ಒಂದೇ. ಎಲ್ಲರೂ ಕೂಡ ದಶ ಧರ್ಮಗಳನ್ನು ಪಾಲಿಸಲೇಬೇಕು.
ಪೂಜ್ಯರು ಬಂದಿರುವುದು ವಿಶ್ವಾಸ ಮಾಡಿದೆ. ತಮಿಳುನಾಡಿನಿಂದ ಸ್ವಾಮೀಜಿಗಳು ಬಂದಿದ್ದಾರೆ. ಅವರ ಸನ್ನೆ ಕೊಟ್ಟರೆ ಸಾಕು ಸಾವಿರಾರು ಜನ ಸೇರುತ್ತಾರೆ. ಎಲ್ಲರಿಗೂ ನನ್ನ ಧನ್ಯವಾದಗಳು. ಸಂಯಮ ಅತ್ಯಂತ ಶ್ರೇಷ್ಠವಾದದ್ದು ಎಂದಿದ್ದಾರೆ.
ಇದನ್ನೂ ಓದಿ:ಧರ್ಮಸ್ಥಳ ಕೇಸ್ ಬಗ್ಗೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಮೊದಲ ಪ್ರತಿಕ್ರಿಯೆ, ಹೇಳಿದ್ದೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ