‘ಧರ್ಮಸ್ಥಳ ಚಲೋ’ ಸಭೆಯಲ್ಲಿ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಮಾತನಾಡಿದರು. ನಮ್ಮ ಕ್ಷೇತ್ರದ ಬಗ್ಗೆ ಭಕ್ತರಿಗೆ ಅಪಾರ ಅಭಿಮಾನವಿದೆ. ಮನಸಾರೆ ಗೌರವಿಸೋರು ಇದ್ದೀರಿ. ಮನಸಾರೆ ಪ್ರೀತಿಸೋರಿದ್ದೀರಿ. ಆದರೆ ನಾನು ಯಾರ ಬಗ್ಗೆಯೂ ಮಾತನಾಡಲು ಹೋಗಲ್ಲ.
ವ್ಯವಸ್ಥಿತವಾಗಿ ಕಾರ್ಯಕ್ರಮ ನಡೆಸಿಕೊಂಡು ಬಂದಿದ್ದೀರಿ. ನಿನ್ನೆ, ಮೊನ್ನೆಯಿಂದ ಬಹಳ ಜನ ಬಂದಿದ್ದೀರಿ. ಬೆಂಗಳೂರು, ಬೇರೆ ಬೇರೆ ಜಿಲ್ಲೆಗಳಿಂದ, ಬೇರೆ ಬೇರೆ ತಾಲೂಕುಗಳಿಂದ 200-309 ಕಾರುಗಳಲ್ಲಿ ಬಂದಿದ್ದರು. ಆ ಅಭಿಮಾನವನ್ನು ನಾನು ಹೊರಲಾರೆ.
ಇದನ್ನು ನಾನು ಸ್ವಾಮಿಗೆ ಒಪ್ಪಿಸಿದ್ದೇನೆ. ನಿಮ್ಮ ಪ್ರೀತಿಯನ್ನು ನಾನು ಹೊರಲಾರೆ. ಅಣ್ಣಪ್ಪ ಸ್ವಾಮಿಗೆ ಒಪ್ಪಿಸುತ್ತೇನೆ. ಸಮಯ ಬಂದಾಗ ಮಾತನಾಡ್ತೇನೆ. ಈಗ ಜಾಸ್ತಿ ಮಾತನಾಡಲ್ಲ. ಮಂಜುನಾಥ ಸ್ವಾಮಿ ನಿಮಗೆ ಆಶೀರ್ವಾದ ಮಾಡಲಿ ಎಂದಿದ್ದಾರೆ.
ಇದನ್ನೂ ಓದಿ: ‘ಗಂಡನ ಬಿಟ್ಟು ಬರಲ್ಲ ಅಂದಳು..’ ಜಿಲೆಟಿನ್ ಕಡ್ಡಿ ಬಾಯಿಗೆ ಹಾಕಿ ಸ್ಫೋಟಿಸಿ ಜೀವ ತೆಗೆದ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ