/newsfirstlive-kannada/media/media_files/2025/08/25/mysore-case-2025-08-25-21-29-46.jpg)
ಈ ಕಾಲದಲ್ಲಿ ಯಾರನ್ನ ನಂಬಬೇಕೋ ಅರ್ಥಾನೇ ಆಗಲ್ಲ. ನಿನ್ನೆ ಮೊನ್ನೆಯೆಲ್ಲಾ ಚಿನ್ನ, ರನ್ನ ಅಂತಿದ್ದೋರು ಟೈಂ ಕರಾಬ್ ಆದ್ರೆ, ಕುತ್ತಿಗೆಗೆ ಕೈ ಹಾಕ್ತಾರೆ. ಈ ಕಥೆಯಲ್ಲೂ ಅಷ್ಟೇ. ಮದುವೆಯಾಗಿದ್ದ ಗೃಹಿಣಿ ಜೊತೆ ಕುಚ್ ಕುಚ್ ನಡೆಸ್ತಿದ್ದ ಅಸಾಮಿ, ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ. ಹೊಗಿದ್ದು ಇಬ್ಬರೇ, ಆದ್ರೆ ಹೊರಗೆ ಬಂದಿದ್ದು ಮಾತ್ರ ಒಬ್ಬರೇ.
ಹೌದು, ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಜೀವ ತೆಗೆದಿರುವ ಘಟನೆ ಮೈಸೂರು ಜಿಲ್ಲೆಯ ಸಾಲಿಗ್ರಾಮ ತಾಲೂಕಿನ ಬೇರ್ಯ ಗ್ರಾಮದಲ್ಲಿ ನಡೆದಿದೆ. ಹುಣಸೂರು ತಾಲೂಕಿನ ಗೆರಸನಹಳ್ಳಿ ಗ್ರಾಮದ ದರ್ಶಿತಾ (20) ಜೀವ ಕಳೆದುಕೊಂಡ ಮಹಿಳೆ. ಪಿರಿಯಾಪಟ್ಟಣದ ಬಿಳಿಕೆರೆ ಗ್ರಾಮದ ಸಿದ್ದರಾಜು ಎಂಬಾತನಿಂದ ಈ ಕೃತ್ಯ ನಡೆದಿದೆ. ಕೇರಳ ಮೂಲದ ವ್ಯಕ್ತಿಯನ್ನ ವಿವಾಹವಾಗಿದ್ದ ದರ್ಶಿತಾ, ಸಿದ್ದರಾಜು ಜೊತೆ ಅನೈತಿಕ ಸಂಬಂಧ ಇಟ್ಟುಕೊಂಡಿದ್ದಳು. ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಸಿದ್ದರಾಜು ಆಕೆಯನ್ನು ಕರೆ ತಂದಿದ್ದ.
ಇದನ್ನೂ ಓದಿ:ಐವರು ಸಾಧಕರಿಗೆ ಪ್ರತಿಷ್ಠಿತ ‘ನಮ್ಮ ಬೆಂಗಳೂರು ಪ್ರಶಸ್ತಿ’ ಪ್ರದಾನ
ಲಾಡ್ಜ್ ಕರೆದ.. ‘ಆ’ ಮಾತು ಹೇಳಿದ್ದ!
ಕಪ್ಪಡಿ ಕ್ಷೇತ್ರಕ್ಕೆ ಹೋಗೋಣ ಅಂತ ಕರೆದಿದ್ದ ಸಿದ್ದರಾಜು, ದರ್ಶಿತಾಳನ್ನ ಒಂದ್ ಲಾಡ್ಜ್ಗೆ ಕರೆದುಕೊಂಡು ಹೋಗಿದ್ದ. ಬಳಿಕ ಗಂಡನನ್ನ ಬಿಟ್ಟು ನನ್ನನ್ನ ಮದುವೆಯಾಗು ಅಂತ ಸಿದ್ದರಾಜು ಟಾರ್ಚರ್ ಕೊಟ್ಟಿದ್ನಂತೆ. ಇದೇ ವಿಚಾರಕ್ಕೆ ಜಗಳ ಆಗಿ ಅದು ವಿಕೋಪಕ್ಕೆ ಹೋಗಿದೆ. ಬಳಿಕ ಉಸಿರುಗಟ್ಟಿಸಿ ಆಕೆ ಕಥೆಯನ್ನ ಮುಗಿಸಿ ಬಿಟ್ಟಿದ್ದಾನೆ.
ಲಾಡ್ಜ್ ಸಿಬ್ಬಂದಿಗೆ ಡೌಟ್
ಅದ್ಯಾವಾಗ ದರ್ಶಿತಾ ಸತ್ತೋದ್ಲು ಅಂತ ಗೊತ್ತಾಯ್ತು. ಗಾಬರಿಯಾದ ಸಿದ್ದರಾಜು. ಜಿಲೆಟಿನ್ ಕಡ್ಡಿಯನ್ನ ಆಕೆ ಬಾಯಿಗೆ ಹಾಕಿ ಸ್ಫೋಟಿಸಿದ್ದಾನೆ. ಬಳಿಕ ಊಟ ತರಲು ಹೋದವನು ಏನು ಆಗಿಲ್ಲವಂತೆ ನಾಟಕವಾಡಿದ್ದಾನೆ. ಆಮೇಲೆ ಅಯ್ಯೋ ಬ್ಲಾಸ್ಟ್ ಆಗಿ ಸತ್ತೋದ್ಲು ಅಂತ ರಂಗು ರಂಗಿನ ಕಥೆ ಕಟ್ಟಿದ್ದಾನೆ.
ಇದನ್ನೂ ಓದಿ: ಸರ್ಕಾರದ ವಿರುದ್ಧ ಬಿಜೆಪಿ ಧರ್ಮ ರಕ್ಷಣಾ ಯಾತ್ರೆ.
ಬಳಿಕ ಮೊಬೈಲ್ ಎಲ್ಲಿ ಅಂದ್ದಿದ್ದಕ್ಕೆ ಹೊರಗೆ ಬಿಸಾಡಿದ್ದೆ ಅಂತ ಪುಂಗಿ ಬಿಟ್ಟಿದ್ದಾನೆ. ಆಗ ಅನುಮಾನ ಬಂದು ಸಾಲಿಗ್ರಾಮದ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಬಳಿಕ ಅಸಲಿ ವಿಚಾರವನ್ನ ಬಾಯ್ಬಿಟ್ಟಿದ್ದಾನೆ.
ಏನೇ ಹೇಳಿ.. ಮದುವೆಯಾಗಿದೆ ಅಂತ ಗೊತ್ತಿದ್ರು ಆಕೆ ಜೊತೆ ಅನೈತಿಕ ಸಂಬಂಧ ಇಟ್ಕೊಂಡಿದ್ದು ತಪ್ಪು.. ಸಂಬಂಧಕ್ಕೆ ಬೆಲೆ ಕೊಡದೇ ಇಬ್ಬರು ಗಳಿಸಿದ್ದಾದ್ರು ಏನು? ಒಬ್ಬಾಕೆ ಮಸಣ ಸೇರಿದ್ರೆ, ಮತ್ತೊಬ್ಬ ಅತಿಯಾದ ಮೋಹಕ್ಕೆ ಬಿದ್ದು ಜೈಲು ಸೇರಿದ.
ಇದನ್ನೂ ಓದಿ: ಲಾಡ್ಜ್ಗೆ ಜೊತೆಯಲ್ಲಿ ಬಂದಿದ್ದ ಮಹಿಳೆ ಜೀವ ತೆಗೆದ ಪ್ರಿಯಕರ ಕಿರಾತಕ..
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ