/newsfirstlive-kannada/media/media_files/2025/08/23/dharmasthala-case10-2025-08-23-22-51-07.jpg)
ಧರ್ಮಸ್ಥಳದ ಬುರುಡೆ ಕೇಸ್.. ಒಂದ್ಕಡೆ ತನಿಖೆ ಆಗ್ತಿದೆ.. ಇದೇ ವಿಚಾರ ರಾಜ್ಯ ರಾಜಕೀಯಕ್ಕೆ ಹಾಟ್ ಟಾಪಿಕ್ ಆಗಿದೆ. ಬಿಜೆಪಿಗೆ ಇದೇ ಬ್ರಹ್ಮಾಸ್ತ್ರವಾಗಿದ್ದು, ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋಗೆ ಬಿಜೆಪಿ ಕರೆ ಕೊಟ್ಟಿದೆ.
ಬಿಜೆಪಿ ಧರ್ಮ ರಕ್ಷಣಾ ಯಾತ್ರೆ
ಧರ್ಮಸ್ಥಳ.. ಸತ್ಯ-ನ್ಯಾಯವನ್ನೇ ತಕ್ಕಡಿಯಲ್ಲಿ ತೂಗುವ ಪುಣ್ಯಕ್ಷೇತ್ರ.. ಇಲ್ಲಿನ ಮಣ್ಣಿನ ಕಣ ಕಣವೂ ಶಿವಾಷ್ಟೋತ್ತರ ಶತನಾಮ ಸ್ತೋತ್ರಂ ಪಠಿಸುವ ಪುಣ್ಯದ ಧಾಮ. ಅಂತಹ ಕ್ಷೇತ್ರದ ಮೇಲೆ ಅಪವಾದಕ್ಕೆ ಎಸ್ಐಟಿ ಮುಕ್ತಿ ಕೊಡುವ ನಿಟ್ಟಿನಲ್ಲಿ ನಿರತವಾಗಿದೆ. ಆದ್ರೆ, ಬಿಜೆಪಿಗೆ ರಾಜ್ಯ ಸರ್ಕಾರದ ನ್ಯಾಯದ ಮೇಲೆ ನಂಬಿಕೆ ಇಲ್ಲ.. ಆ ಕಾರಣಕ್ಕೆ ಷಡ್ಯಂತ್ರದ ತನಿಖೆಯನ್ನ NIAಗೆ ಒಪ್ಪಿಸುವಂತೆ ಕರೆ ಕೊಟ್ಟಿದೆ. ಸೆಪ್ಟೆಂಬರ್ 1 ರಂದು ಧರ್ಮಸ್ಥಳ ಚಲೋಗೆ ಕರೆ ಕೊಟ್ಟಿದೆ. ಅಲ್ಲದೆ ಧರ್ಮಸಂರಕ್ಷಣಾ ಸಮಾವೇಶಕ್ಕೆ ಪ್ಲಾನ್ ಮಾಡಿದೆ. ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಮತ್ತು ಬಿಜೆಪಿಯ ಧರ್ಮಸ್ಥಳ ಚಲೋಗೆ ಕರೆ ಕೊಡುವ ಹಿಂದೆ ಕೆಲ ಕಾರಣಗಳಿವೆ.. ಅದಕ್ಕೆ ದೊಡ್ಡ ಆರೋಪ ಪಟ್ಟಿಯನ್ನೂ ಸಹ ಸಿದ್ಧಪಡಿಸಿದೆ.
ಬಿಜೆಪಿಯ ಆರೋಪ ಏನು?
ಸಿಎಂ ಸಿದ್ದರಾಮಯ್ಯರಿಗೆ ದೇವರ ಮೇಲೆ ನಂಬಿಕೆ ಅಷ್ಟಕ್ಕಷ್ಟೆ.. ಧರ್ಮಸ್ಥಳದ ಅಣ್ಣಪ್ಪನ ಮೇಲೆ ಅವರಿಗೆ ಎಷ್ಟು ಭಕ್ತಿ ಇದೆ? ಗೊತ್ತಿಲ್ಲ. ಧರ್ಮಸ್ಥಳದ ಅಣ್ಣಪ್ಪನಿಗೆ ಕೋಟಿ ಕೋಟಿ ಭಕ್ತರಿದ್ದಾರೆ. ಕೋಟಿ ಕೋಟಿ ಭಕ್ತರಿಗೆ ಧರ್ಮಸ್ಥಳ ಒಂದು ಪುಣ್ಯಕ್ಷೇತ್ರ. ಧರ್ಮಸ್ಥಳ ಕೇವಲ ಒಂದು ಮಂದಿರ ಅಲ್ಲ. ಅದು ಭಾವನೆ. ಹಲವಾರು ದಶಕಗಳಿಂದ ಅದನ್ನೇ ಉಳಿಸಿಕೊಂಡು ಬರಲಾಗಿದೆ. ಇಂತಹ ಕ್ಷೇತ್ರದ ಮೇಲೆ ಯಾರೋ ಒಬ್ಬ ವ್ಯಕ್ತಿ ಬುರುಡೆ ಹಿಡಿದುಕೊಂಡು ಬಂದು ಬುರುಡೆ ಬಿಟ್ಟಿದ್ದಾನೆ.. ಆ ವ್ಯಕ್ತಿ ಯಾರು? ಆತನ ಹಿಂದೆ ಯಾರಿದ್ದಾರೆ? ಆತನಿಗೆ ಬೆಂಬಲಿಸಿದ್ಯಾರು? ಇಂತಹ ವಿಚಾರಗಳನ್ನು ಪರಿಶೀಲಿಸಿ ನಿರ್ಧಾರ ಕೈಗೊಳ್ಳಬೇಕಿತ್ತು.. ಆದ್ರೆ, ಸಿಎಂ ಆತುರ ಪಟ್ಟು ನಿರ್ಧಾರ ತಗೊಂಡು ಜನ ಸಮುದಾಯದಲ್ಲಿ ಕ್ಷೇತ್ರದ ಮೇಲೆ ಅನುಮಾನ ಬರೋ ರೀತಿ ನಡೆದುಕೊಂಡ್ರು ಅನ್ನೋದು ಬಿಜೆಪಿ ಮಾಡ್ತಿರೋ ಆರೋಪ.
ಇದನ್ನೂ ಓದಿ:ದಸರಾ ಉದ್ಘಾಟನೆಗೆ ತಕರಾರು; ಬಾನು ಮುಷ್ತಾಕ್ ಹೇಳಿದ್ದೇನು..?
ಸೆಪ್ಟೆಂಬರ್ 1ರಂದು ಧರ್ಮಸ್ಥಳ ಚಲೋ ಹಮ್ಮಿಕೊಳ್ಳಲಾಗಿದೆ. ರಾಜ್ಯ ಬಿಜೆಪಿ ನಾಯಕರ ಪ್ರತ್ಯೇಕ ಯಾತ್ರೆಗಳು ಮುಂದುವರಿದಿವೆ.. ಇವತ್ತು ಬಿಜೆಪಿಯ ಬೆಂಗಳೂರು ದಕ್ಷಿಣ ಜಿಲ್ಲೆಯಿಂದ ಧರ್ಮಸ್ಥಳ ರಕ್ಷಣಾ ಯಾತ್ರೆ ತೆರಳಿದೆ. ಧರ್ಮದ ಉಳಿವಿಗಾಗಿ ಧರ್ಮಯುದ್ಧ ಎಂಬ ಘೋಷಣೆ ಮೊಳಗಿಸಿದೆ. ಜಯನಗರ, ಬಿಟಿಎಂ, ವಿಜಯನಗರ ಮತ್ತು ಗೋವಿಂದರಾಜ ನಗರ ವಿಧಾನಸಭಾ ಕ್ಷೇತ್ರದಿಂದ ಸುಮಾರು 400 ಕಾರುಗಳು ಯಾತ್ರೆಯ ಭಾಗವಾಗಿವೆ.
ಇದನ್ನೂ ಓದಿ:ಆನ್ ಲೈನ್ ಗೇಮಿಂಗ್ ಬ್ಯಾನ್: ಡ್ರೀಮ್ 11 ನಿಂದ ಪ್ರಾಯೋಜಕತ್ವ ಅಂತ್ಯ ಮಾಡಿದ ಬಿಸಿಸಿಐ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ