/newsfirstlive-kannada/media/media_files/2025/08/07/raghanna-2025-08-07-11-21-59.jpg)
ಬೆಂಗಳೂರು: ಕೆಲ ವರ್ಷಗಳಿಂದ ಸರ್ಕಾರ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಶೀಘ್ರವೇ ಹೊಸ ನೇಮಕಾತಿ ಆರಂಭಿಸಬೇಕು ಎಂದು ಹಿರಿಯ ನಟ ರಾಘವೇಂದ್ರ ರಾಜ್ ಕುಮಾರ್ ಅವರು ಆಗ್ರಹಿಸಿದ್ದಾರೆ.
ಸರ್ಕಾರಿ ಉದ್ಯೋಗಗಳ ಆಕಾಂಕ್ಷಿಗಳಿಗೆ ತೊಂದರೆ ಆಗುತ್ತಿದೆ. ಯುವಕರು ಕಾಲೇಜು, ಯುನಿವರ್ಸಿಟಿಗಳಲ್ಲಿ ಸಾಕಷ್ಟು ಓದಿ ಮನೆಯಲ್ಲಿ ಇರುವಂತೆ ಆಗಿದೆ. ಹೀಗಾಗಿ ಸರ್ಕಾರ ಕೂಡಲೇ ಹೊಸ ನೇಮಕಾತಿ ಆರಂಭ ಮಾಡಬೇಕು. ಸುಮಾರು ವರ್ಷಗಳಿಂದ ಯಾವುದೇ ನೇಮಕಾತಿ ಮಾಡುತ್ತಿಲ್ಲ. ಹಾಗಾಗಿ, ಶೀಘ್ರದಲ್ಲೇ ನೇಮಕಾತಿಗಳನ್ನ ಆರಂಭಿಸಿ ಎಂದು ರಾಘವೇಂದ್ರ ರಾಜ್ ಕುಮಾರ್ ಅವರು ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಘರ್ಷಣೆ; ಸ್ಥಳದಲ್ಲಿ ನಡೆದ ಘಟನೆ ಬಗ್ಗೆ ಸತ್ಯ ಬಿಚ್ಚಿಟ್ಟ ಬಿಗ್ಬಾಸ್ ಸ್ಪರ್ಧಿ ರಜತ್
ಹೊಸ ನೇಮಕಾತಿಗೆ ಸಂಬಂಧಿಸಿದಂತೆ ಉದ್ಯೋಗಕಾಂಕ್ಷಿಗಳು ಆಗಸ್ಟ್ 11 ರಂದು ಫ್ರೀಡಂ ಪಾರ್ಕ್ನಲ್ಲಿ ಪ್ರತಿಭಟನೆ ನಡೆಸಲಿದ್ದಾರೆ. ಈ ಪ್ರತಿಭಟನೆಗೆ ಹಿರಿಯ ನಟ ರಾಘಣ್ಣ ಅವರು ಬೆಂಬಲ ಸೂಚಿಸಲಿದ್ದಾರೆ. ಉದ್ಯೋಗಕಾಂಕ್ಷಿಗಳಿಗೆ ಸಪೋರ್ಟ್ ಮಾಡಲಿದ್ದಾರೆ. ಅಭ್ಯರ್ಥಿಗಳಲ್ಲಿ ಗೊಂದಲ ಏರ್ಪಟ್ಟಿದ್ದು ಮುಂದೆ ಏನು ಮಾಡೋದು ಅಂತ ಯೋಜನೆಯಲ್ಲಿದ್ದಾರೆ. ಅಕಾಡೆಮಿಗಳು ಮುಚ್ಚಲಾಗುತ್ತಿದೆ. ಜನಗಳು ವಾಪಸ್ ಊರುಗಳಿಗೆ ಹೋಗಲು ಆಗದೇ ಬೆಂಗಳೂರಲ್ಲೇ ಇದ್ದಾರೆ. ಸರ್ಕಾರ ಆದಷ್ಟೂ ಬೇಗ ಹೊಸ ನೇಮಕಾತಿಗಳನ್ನ ಆರಂಭಿಸಬೇಕು ಅಂತ ಒತ್ತಾಯಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ