/newsfirstlive-kannada/media/media_files/2025/08/03/darmasthal-case-jayan-2025-08-03-08-25-30.jpg)
ಧರ್ಮಸ್ಥಳದಲ್ಲಿ ಸುಮಾರು ಎರಡು ದಶಕಗಳಿಂದ ನೂರಾರು ಶ*ವಗಳನ್ನು ಹೂಳಲಾಗಿದೆ ಸರ್. ಬನ್ನಿ ಸರ್.. ನಾನು ಜಾಗ ತೋರಿಸ್ತೀನಿ ಅಂತ ಅನಾಮಧೇಯ ವ್ಯಕ್ತಿ ಪೊಲೀಸರನ್ನ ಕರ್ಕೊಂಡು.. ಸರ್ ಅಲ್ಲಿ.. ಸರ್ ಇಲ್ಲಿ ಅಂತ ಹೂತಿಟ್ಟ ಜಾಗವನ್ನ ತೋರಿಸಿದ್ದ.. ಇದ್ರ ನಡುವೆ ಎಸ್‌ಐಟಿ ಮುಂದೆ ಮತ್ತೋರ್ವ ಹಾಜರಾಗಿರೋದ ಇಡೀ ಪ್ರಕರಣಕ್ಕೆ ಬಿಗ್ ಬಿಗ್ ಟ್ವಿಸ್ಟ್ ಕೊಟ್ಟಿದೆ.
ಎಸ್‌ಐಟಿ ಮುಂದೆ ಹೊಸ ಸಾಕ್ಷಿ
ಅನಾಮಧೇಯ ವ್ಯಕ್ತಿಯನ್ನ ಜೊತೆನಲ್ಲಿ ಹಾಕ್ಕೊಂಡು ಕಾಡುಮೇಡು.. ಅಂತ ನೋಡದೆ ಜೆಸಿಬಿ.. ಹಿಟಾಚಿ.. ದಿನಗೂಲಿನಗಳನ್ನ ಕರೆದುಕೊಂಡು.. ಎಸ್‌ಐಟಿ ತಂಡ 13 ಜಾಗಗಳ ಪೈಕಿ 9 ಪಾಯಿಂಟ್ನಲ್ಲಿ ಶೋಧ ಕಾರ್ಯಗಳನ್ನ ಪೂರ್ಣಗೊಳಿಸಿದೆ. ಮೊದಲ ಐದು ಸೈಟ್‌ಗಳಲ್ಲಿ ಮನುಷ್ಯರ ಯಾವುದೇ ಅವಶೇಷಗಳು ದೊರೆತಿರಲಿಲ್ಲ. ಆದರೆ, ಆರನೇ ಸೈಟ್‌ನಲ್ಲಿ ವ್ಯಕ್ತಿಯೊಬ್ಬನ ಅಸ್ಥಿಪಂಜರದ ತುಣುಕುಗಳು ಸಿಕ್ಕಿದೆ. ಇದು ಪ್ರಕರಣಕ್ಕೆ ಹೊಸ ತಿರುವು ನೀಡಿದ್ದರೆ, ನಿನ್ನೆ ಸಂಜೆ ಬೆಳ್ತಂಗಡಿಯಲ್ಲಿ ಹೊಸ ಸಾಕ್ಷಿಯೊಬ್ಬರು ವಿಶೇಷ ತನಿಖಾ ತಂಡದ ಮುಂದೆ ಹಾಜರಾಗಿ ಹೊಸ ಕಥೆ ಹೇಳಿದ್ದಾರೆ.
ಸರ್, ನನ್ನ ಜೀವನದಲ್ಲಿ ಆಗಿರುವ ಕಹಿ ಅನುಭವ. ಆ ನೋವು, ಅದು ಯಾರೋ, ಏನೋ ನಮಗೆ ಗೊತ್ತಿಲ್ಲ. ಅದರ ಬಗ್ಗೆ ಹೆಚ್ಚು ಮಾಹಿತಿ ಇಲ್ಲ. ಅದು ತನಿಖೆ ಆಗಬೇಕು. ಎಸ್‌ಐಟಿ ಮೇಲೆ ಒಂದು ನಂಬಿಕೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿ ಇಲ್ಲಿಗೆ ಬಂದಿದ್ದೇನೆ. ಒಂದು ಪದ್ಮಲತಾ, ಇವತ್ತಿಗೂ ನ್ಯಾಯ ಸಿಗಲಿಲ್ಲ. ಅದರ ಬಗ್ಗೆಯೂ ನಾವು ದೂರು ನೀಡುತ್ತಿದ್ದೇವೆ. ಅದೇ ರೀತಿ ಸಂತೋಷ್, ಚಾರ್ಮಾಡಿಯಲ್ಲಿ. ಅದು ಕೂಡ ನನ್ನ ಕುಟುಂಬದವರೇ, ಅದಕ್ಕೂ ನ್ಯಾಯ ಸಿಗಲಿಲ್ಲ. ಇದಕ್ಕಾದರೂ ಸಿಗಬಹುದಾ ಅಂತಾ ನೋಡುತ್ತಿದ್ದೇನೆ -ಜಯನ್, ದೂರುದಾರ
ಸಾಮಾಜಿಕ ಹೋರಾಟಗಾರ ಇಚಿಲಂಪಾಡಿ ನಿವಾಸಿ ಜಯನ್ 15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾ*ವನ್ನಪ್ಪಿರೋ ಬಗ್ಗೆ ಹೇಳಿಕೆ ನೀಡಿದ್ದಾರೆ. ಏನಿದು ಪ್ರಕರಣ ಅನ್ನೋ ವಿವರ ಇಲ್ಲಿದೆ.
‘ಧರ್ಮ’ ಸಾಕ್ಷಿ!
15 ವರ್ಷಗಳ ಹಿಂದೆ ಹೆಣ್ಣು ಮಗಳ ಅನುಮಾನಾಸ್ಪದ ಸಾ*ವಿನ ಬಗ್ಗೆ ಸಾಮಾಜಿಕ ಹೋರಾಟಗಾರ ಜಯನ್ ಟಿ. ದೂರು ನೀಡಲು ಬಂದಿದ್ದರು. ಸಾ*ವಿಗೀಡಾದ 15 ವರ್ಷದ ಬಾಲಕಿಯನ್ನ ಕಾನೂನು ಪ್ರಕ್ರಿಯೆ ನಡೆಸದೇ ಹೂತು ಹಾಕಲಾಗಿದೆ. ಸೌಜನ್ಯ ಹೋರಾಟದಲ್ಲಿ ಗುರುತಿಸಿಕೊಂಡಿದ್ದ ದೂರುದಾರ ಜಯನ್ ಟಿ, ತನಿಖಾಧಿಕಾರಿಗಳಿಗೆ ಜಾಗ ತೋರಿಸಲು ಸಿದ್ಧ ಎಂದು ಮುಂದೆ ಬಂದಿದ್ದಾರೆ. ಹೆಣ್ಣು ಮಗಳ ಶ*ವವನ್ನ ಧರ್ಮಸ್ಥಳ ಗ್ರಾಮದಲ್ಲಿ ಹೂಳಲಾಗಿದೆ, ಜಾಗ ಗೊತ್ತಿದೆ, ನಾನು ಅದಕ್ಕೆ ಪ್ರತ್ಯಕ್ಷದರ್ಶಿ ಎಂದಿದ್ದಾರೆ. ದೂರು ಕೊಟ್ಟು SIT ಅಧಿಕಾರಿಗಳಿಗೆ ಎಲ್ಲಾ ರೀತಿಯಲ್ಲಿ ಸಹಕಾರ ನೀಡ್ತೀನಿ ನ್ಯಾಯದ ನಂಬಿಕೆ ಇದೆ ಎಂದು ದೂರುದಾರ ಹೇಳಿದ್ದಾರೆ.
ಇದನ್ನೂ ಓದಿ: ಧರ್ಮಸ್ಥಳ ಗ್ರಾಮದಲ್ಲಿ ತುಂಬಾ ಜೀವಗಳನ್ನ ತೆಗೆಯಲಾಗಿದೆ- ದೂರು ಕೊಡಲು ಬಂದ ಜಯಂತ್ ಏನೇನು ಹೇಳಿದ್ರು?
ದೂರು ನೀಡಿದ ಬಳಿಕ ನ್ಯೂಸ್ ಫಸ್ಟ್ ಜೊತೆ ಮಾತನಾಡಿದ ಜಯನ್, ನನ್ನ ಕುಟುಂಬದ ಪದ್ಮಲತಾ ಕೊ*ಲೆಯಾದಾಗ ನ್ಯಾಯ ಸಿಕ್ಕಿಲ್ಲ. ಇದರಲ್ಲಾದರೂ ನ್ಯಾಯ ಸಿಗಲಿ ಅನ್ನೋ ಹೋರಾಟ ನನ್ನದು. ಅಧಿಕಾರಿಗಳು ಸೋಮವಾರ ಬರಲಿಕ್ಕೆ ಹೇಳಿದ್ದಾರೆ. ಪರದರ್ಶಕ ತನಿಖೆ ಆಗುತ್ತೆ ಎಂಬ ನಂಬಿಕೆ ಅಂದ್ರು.
ಧರ್ಮಸ್ಥಳ ಗ್ರಾಮದಲ್ಲಿ ಶ*ವಗಳನ್ನು ಹೂತಿಟ್ಟ ಪರಿಶೋಧನೆ ಕಾರ್ಯಾಚರಣೆಗೆ ಇಂದು ಬ್ರೇಕ್ ಕೊಡಲಾಗಿದೆ. ಇಂದು ಭಾನುವಾರ.. ಸರ್ಕಾರಿ ರಜಾ ದಿನ ಆದ ಕಾರಣ ಇಲಾಖಾ ಅಧಿಕಾರಿಗಳಿಗೆ ರೆಸ್ಟ್ ನೀಡಲಾಗಿದೆ. ಸೋಮವಾರದಿಂದ ಪರಿಶೋಧನೆ ಪ್ರಕ್ರಿಯೆ ಮುಂದುವರಿಯಲಿದೆ. ಇತ್ತ, ಹೊಸ ಸಾಕ್ಷಿಯ ದೂರು.. ಮತ್ತು ಹೇಳಿಕೆಗಳನ್ನ ದಾಖಲಿಸಿಕೊಳ್ಳಲಿದೆ.
ವಿಶೇಷ ವರದಿ: ಕಿರಣ್, ನ್ಯೂಸ್ಫಸ್ಟ್, ಮಂಗಳೂರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ