ಗ್ರಾಮ ಪಂಚಾಯತಿ ಸದಸ್ಯನ ಮೇಲೆ ಗುಂಡಿನ ದಾಳಿ.. ಅಟ್ಯಾಕ್​ಗೆ ಕಾರಣವೇನು..?

ಈ ದಾಳಿಯಲ್ಲಿ ಸಲೀಂ ಕೈಗೆ ಗಂಭೀರ ಗಾಯವಾಗಿದ್ದು, ಕೂಡಲೇ ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು.

author-image
Bhimappa
BNG_NELAMANGALA
Advertisment

ಗ್ರಾಮ ಪಂಚಾಯತ್‌ ಸದಸ್ಯನ ಮೇಲೆ ಇಬ್ಬರು ಅಪರಿಚಿತರು ಗುಂಡಿನ‌ ದಾಳಿ ನಡೆಸಿದ ಘಟನೆ ನೆಲಮಂಗಲ ತಾಲೂಕಿನ ಇಸ್ಲಾಂಪುರ ಗ್ರಾಮದಲ್ಲಿ ನಡೆದಿದೆ. ಅಷ್ಟಕ್ಕೂ ಗ್ರಾಮ ಪಂಚಾಯ್ತಿ ಸದಸ್ಯ ಯಾರು..? ಅಟ್ಯಾಕ್ ಮಾಡೋಕೆ ಕಾರಣವಾದ್ರೂ ಏನು?.

BNG_NELAMANGALA_1

ನೆಲಮಂಗಲದ ಇಸ್ಲಾಂಪುರ ಗ್ರಾಮದಲ್ಲಿ ಘಟನೆ

ಗುಂಡಿನ ದಾಳಿಗೆ ಒಳಗಾಗಿರುವವರ ಹೆಸರು ಸಲೀಂ. ಸಂಬಂಧಿಯ ಅಂಗಡಿಯಲ್ಲಿ ಕುಳಿತು, ಮಾತನಾಡುತ್ತಿದ್ದ ವೇಳೆ ಅಲ್ಲಿಗೆ ಬಂದ ಇಬ್ಬರು ವ್ಯಕ್ತಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿ ಪರಾರಿಯಾಗಿದ್ದಾರೆ. ಈ ದಾಳಿಯಲ್ಲಿ ಸಲೀಂ ಕೈಗೆ ಗಂಭೀರ ಗಾಯವಾಗಿದ್ದು, ಕೂಡಲೇ ನೆಲಮಂಗಲ ನಗರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಸುದ್ದಿ ತಿಳಿದು ಸ್ಥಳಕ್ಕೆ ನೆಲಮಂಗಲ ಡಿವೈಎಸ್‌ಪಿ ಜಗದೀಶ್ ಭೇಟಿ ನೀಡಿ ಪರಿಶೀಲಿಸಿದರು. ಇನ್ನು ಖಾಸಗಿ ಆಸ್ಪತ್ರೆ ಬಳಿ ಪೊಲೀಸರು ಬಿಗಿ ಭದ್ರತೆಯನ್ನು ನಿಯೋಜಿಸಿದ್ದಾರೆ.

ರಾಜಕೀಯ ದ್ವೇಷಕ್ಕೆ ಗುಂಡಿನ ದಾಳಿ ನಡೆದಿರುವ ಶಂಕೆ

ಸಲೀಂ ಸಂಬಂಧಿಕರು ಇದು ರಾಜಕೀಯ ದುರುದ್ದೇಶದಿಂದ ನಡೆದಿರುವ ದಾಳಿ ಎಂದು ಆರೋಪಿಸಿದ್ದಾರೆ. ಇನ್ನು ಬೈಕ್​ನಲ್ಲಿ ಬಂದಿದ್ದ ಅಪರಿಚಿತರು, ಮುಬಾರಕ್ ಪಾಷಾ ಕಡೆಯವನು ಎಂದು ಪೈರಿಂಗ್​ ಮಾಡಿದ್ದಾನಂತೆ.

  • 2020ರಲ್ಲೂ ಸಲೀಂ ಮೇಲೆ ದಾಳಿ ಮಾಡಿದ್ದ ಮುಬಾರಕ್ ಪಾಷಾ 
  • ಗ್ರಾ.ಪಂ. ಚುನಾವಣೆ ಆದ ಮೂರೇ ತಿಂಗಳಿಗೆ ದಾಳಿ ಮಾಡಿದ್ದ
  • ಮುಬಾರಕ್ ಪಾಷಾ ಕಡೆಯವರನ್ನು ಸೋಲಿಸಿ ಗೆದ್ದಿದ್ದಕ್ಕೆ ಅಟ್ಯಾಕ್​
  • ಮುಬಾರಕ್ ಒಬ್ಬ ರೌಡಿ ಆಗಿದ್ದು ಆತನ ಮೇಲೆ ಕೊಲೆ ಕೇಸ್‌ಗಳಿವೆ
  • ಕೆಲ ತಿಂಗಳ ಹಿಂದೆ ಪೆರೋಲ್‌ ಮೇಲೆ ಮುಬಾರಕ್ ಪಾಷಾ ಬಿಡುಗಡೆ
  • ಸಲೀಂಗೆ ಶೂಟ್ ಮಾಡ್ತೀನಿ ಅಂತ ಹೇಳಿಕೊಂಡು ಓಡಾಡುತ್ತಿದ್ನಂತೆ
  • ಮುಬಾರಕ್‌, ಇಮ್ರಾನ್, ಚೋಟು ಸೇರಿ ಹಲವರ ಮೇಲೆ ಅನುಮಾನ
  • ಮುಬಾರಕ್​ನನ್ನು ಬಂಧಿಸಿ ತನಿಖೆ ನಡೆಸುವಂತೆ ಸಂಬಂಧಿಕರ ಆಗ್ರಹ

ಇದನ್ನೂ ಓದಿ: CM ಸಿದ್ದರಾಮಯ್ಯಗೂ ಮೊದಲೇ ಡಿಸಿಎಂ ಡಿ.ಕೆ ಶಿವಕುಮಾರ್ ದೆಹಲಿಗೆ ಹೋಗಿದ್ದು ಯಾಕೆ?

BNG_NELAMANGALA_2

ಗ್ರಾಮ ಪಂಚಾಯ್ತಿ ಸದ್ಯನ ಮೇಲೆ ನಡೆದಿರುವ ಗುಂಡಿನ ದಾಳಿಯಿಂದ ಇಡೀ ನೆಲಮಂಗಲ ತಾಲೂಕಿನ ಜನತೆ ಬೆಚ್ಚಿಬಿದ್ದಿದ್ದಾರೆ. ಸದ್ಯ ಗಾಯಗೊಂಡಿರುವ ಸಲೀಂನನ್ನು ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನ ಸ್ಪರ್ಶ್​ ಹಾಸ್ಪಿಟಲ್​ಗೆ ದಾಖಲಿಸಲಾಗಿದೆ. ಸದ್ಯ ಪೊಲೀಸರು ಸೂಕ್ತ ತನಿಖೆ ನಡೆಸುವ ಮೂಲಕ ಗುಂಡಿನ ದಾಳಿ ಹಿಂದಿನ ಅಸಲಿ ರಹಸ್ಯವನ್ನು ಪತ್ತೆ ಹಚ್ಚಬೇಕಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

News First Kannada News First Web
Advertisment