/newsfirstlive-kannada/media/media_files/2025/08/05/ola-bmtc-2025-08-05-08-31-07.jpg)
ಬೆಂಗಳೂರು: ಒಂದು ಕಡೆ ಸಾರಿಗೆ ನೌಕರರ ಮುಷ್ಕರ, ಮತ್ತೊಂದು ಕಡೆ ಪ್ರಯಾಣಿಕರಿಂದ ದುಪ್ಪಟ್ಟು ಹಣ ವಸೂಲಿಗೆ ಆಟೋ ಚಾಲಕರ ಮುಂದಾಗಿದ್ದಾರೆ.
ಇದನ್ನೂ ಓದಿ:ಬೆಳಗ್ಗೆ 6 ಗಂಟೆಯಿಂದ ಮುಷ್ಕರ.. ಬಸ್ ಡಿಪೋ ಕಡೆಗೆ ಹೋಗಬೇಡಿ, ಮನೆಯಲ್ಲಿ ಇರಿ; ಅನಂತ
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಇಂದು ಸಾರಿಗೆ ನೌಕರರ ಜಂಟಿ ಕ್ರಿಯಾ ಸಮಿತಿ ಅಧ್ಯಕ್ಷ ಅನಂತ ಸುಬ್ಬರಾವ್ ಬಂದ್ಗೆ ಕರೆ ನೀಡಿದ್ದಾರೆ. ಕೆಲವು ಕಡೆಗಳಲ್ಲಿ ಬಸ್ಗಳ ಸಂಚಾರ ಸಂಪೂರ್ಣ ಬಂದ್ ಆಗಿದೆ. ಹೀಗಾಗಿ ಪ್ರಯಾಣಿಕರು ಱಪಿಡೋ, ಓಲಾ, ಉಬರ್ಗಳ ಮೊರೆ ಹೋಗಿದ್ದಾರೆ.
ಆದ್ರೆ, ಇದೇ ಸಮಯ ನೋಡಿಕೊಂಡು ಆಟೋ ರಿಕ್ಷಾಗಳು ಹಗಲು ದರೋಡೆಗೆ ಇಳಿದಿವೆ. ಜಸ್ಟ್ 1.7 ಕಿಲೋಮೀಟರ್ಗೆ ₹90 ರೂಪಾಯಿ ದುಡ್ಡು ಪಡೆಯುತ್ತಿವೆ. ದರ ನಿಗದಿ ಮಾಡಿದ್ದಾರೆ. ಓಲಾ ಌಪ್ನಲ್ಲಿ ಮೆಜೆಸ್ಟಿಕ್ನಿಂದ ಟೌನ್ ಹಾಲ್ಗೆ ಬರೋಬ್ಬರಿ ₹108 ರೂಪಾಯಿ ತೊರಿಸುತ್ತಿದೆ. ಹೀಗಾಗಿ ಪ್ರಯಾಣಿಕರಿಗೆ ಸಾರಿಗೆ ನೌಕರರ ಮುಷ್ಕರದ ಬಿಸಿ ತಟ್ಟಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ