/newsfirstlive-kannada/media/media_files/2025/10/28/bgk-death-1-2025-10-28-08-51-52.jpg)
ಬಾಗಲಕೋಟೆ: ಬಾಗಲಕೋಟೆಯ ಗದ್ದಲಕೇರಿಯ ಬೆಂಕಿ ಅವಘಡ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಯಗೊಂಡಿದ್ದ ಯುವತಿ ಸ್ನೇಹಾ ಶಂಕರ ಮೇದಾರ (22) ಸಾವನ್ನಪ್ಪಿದ್ದಾರೆ. ಕಳೆದ ಆಕ್ಟೋಬರ್ 11 ರಂದು ಗದ್ದನಕೇರಿ ಗ್ರಾಮದಲ್ಲಿ ಮನೆಮುಂದೆ ಹಚ್ಚಿದ ದೀಪದಿಂದ ಈ ಅವಘಡ ಸಂಭವಿಸಿತ್ತು.
/filters:format(webp)/newsfirstlive-kannada/media/media_files/2025/10/28/bgk-death-2025-10-28-08-56-59.jpg)
ಘಟನೆಯ ಹಿನ್ನಲೆ ಏನು..?
ಕಳೆದ ಅಕ್ಟೋಬರ್ 19 ರಂದು ದೀಪಾವಳಿ ಸಂದರ್ಭದಲ್ಲಿ ಮನೆಯ ಮುಂದೆ ಹಚ್ಚಿದ್ದ ದೀಪದಿಂದಾಗಿ ಬೆಂಕಿ ಆವರಿಸಿದ ಪರಿಣಾಮ ಮನೆಯ ಹೊರಗಿಟ್ಟಿದ್ದ ಸಿಲಿಂಡರ್ ಸ್ಪೋಟಗೊಂಡಿತ್ತು. ಈ ದುರ್ಘಟನೆಯಿಂದಾಗಿ ಮನೆಯ ಕಟ್ಟಡಲ್ಲಿದ್ದ 8 ಜನ ಗಾಯಗೊಂಡಿದ್ದರು. ಅದರಲ್ಲಿ ಗಂಭೀರ ಗಾಯಗೊಂಡಿದ್ದ ಯುವತಿ ಸ್ನೇಹಾ ನಿನ್ನೆ ಸಂಜೆ ಬೆಳಗಾವಿಯ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾರೆ. ಕಲಾದಗಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us