/newsfirstlive-kannada/media/media_files/2025/08/29/bagalakot-2025-08-29-07-33-47.jpg)
ಬಾಗಲಕೋಟೆ: ಅಕ್ರಮವಾಗಿ ಸಂಗ್ರಹಿಸಿದ್ದ ಮಿನಿ ಸಿಲಿಂಡರ್ಗಳು ಬ್ಲಾಸ್ಟ್ ಆಗಿರೋ ಘಟನೆ ಬಾದಾಮಿಯ ಶಿವಾಜಿ ಸರ್ಕಲ್ ಬಳಿ ನಡೆದಿದೆ.
ಇದನ್ನೂ ಓದಿ:ಕೈಕೊಟ್ಟ ಬುರುಡೆ ಗ್ಯಾಂಗ್.. ಏಕಾಂಗಿಯಾದ ಸುಜಾತಾ ಭಟ್!
ದಾದಾಫಿರ್ ಜಮಾದಾರ್ ಎಂಬುವವರಿಗೆ ಸೇರಿದ ಅಂಗಡಿಯಲ್ಲಿ ಸಿಲಿಂಡರ್ಗಳು ಬ್ಲಾಸ್ಟ್ ಆಗಿವೆ. ಅಕ್ರಮವಾಗಿ ಮಿನಿ ಸಿಲಿಂಡರ್ಗಳನ್ನ ಸಂಗ್ರಹಿಸಲಾಗಿತ್ತು ಎಂಬ ಆರೋಪ ಕೇಳಿ ಬಂದಿದೆ. ಇನ್ನು, ಸಿಲಿಂಡರ್ಗಳು ಏಕಾಏಕಿ ಬ್ಲಾಸ್ಟ್ ಆಗುತ್ತಿದ್ದಂತೆ ದಟ್ಟವಾದ ಬೆಂಕಿ ಆವರಿಸಿಕೊಂಡಿದೆ.
ಬೆಂಕಿ ಕಾಣಿಸಿಕೊಳ್ಳುತ್ತಿದ್ದಂತೆ ಸ್ಥಳೀಯರು, ಹೋಮ್ ಗಾರ್ಡ್ಸ್ಗಳು ಸ್ಥಳದಿಂದ ಓಡಿ ಹೋಗಿದ್ದಾರೆ. ಅಲ್ಲದೇ 3 ರಿಂದ 4 ಮಂದಿಗೆ ಗಾಯಗಳಾಗಿವೆ. ಗಾಯಾಳುಗಳನ್ನು ಬಾದಾಮಿಯ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡುತ್ತಿದ್ದಾರೆ. ಸಿಲಿಂಡರ್ಗಳಸ್ಫೋಟದ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾಗಿದೆ. ಘಟನಾ ಸ್ಥಳಕ್ಕೆ ಬಾದಾಮಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ