Advertisment

ರಸ್ತೆ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​.. ಅತ್ಯಾ*ರ ಸಂತ್ರಸ್ತೆ ಪರ ನಿಂತಿದ್ದೇ ತಪ್ಪಾಯ್ತು..

ಅಸುಂಡಿ ಗ್ರಾಮದಲ್ಲಿ ನಡೆದ ಅನುಮಾನಸ್ಪದ ರಸ್ತೆ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಅಕ್ಪೋಬರ್ 23 ರಂದು ರಾತ್ರಿ ರಸ್ತೆ ಅಪಘಾತದ ಹೆಸರಲ್ಲಿ ಪ್ರಿ ಪ್ಲಾನ್​ ಮಾಡಿ ರವಿ (30)ಯನ್ನು ಕೊ* ಮಾಡಿರೋದು ತನಿಖೆಯಿಂದ ತಿಳಿದುಬಂದಿದೆ.

author-image
Bhimappa
kpl 1
Advertisment

ಬಳ್ಳಾರಿ: ಅಸುಂಡಿ ಗ್ರಾಮದಲ್ಲಿ ನಡೆದ ಅನುಮಾನಸ್ಪದ ರಸ್ತೆ ಅಪಘಾತ ಪ್ರಕರಣಕ್ಕೆ ಬಿಗ್ ಟ್ವಿಸ್ಟ್​ ಸಿಕ್ಕಿದೆ. ಅಕ್ಪೋಬರ್ 23 ರಂದು ರಾತ್ರಿ ರಸ್ತೆ ಅಪಘಾತದ ಹೆಸರಲ್ಲಿ ಪ್ರಿ ಪ್ಲಾನ್​ ಮಾಡಿ ರವಿ (30)ಯನ್ನು ಕೊ* ಮಾಡಿರೋದು ತನಿಖೆಯಿಂದ ತಿಳಿದುಬಂದಿದೆ.

Advertisment

kpl

ಘಟನೆಯ ಹಿನ್ನಲೆ ಏನು..? 

ವಾರದ ಹಿಂದೆ ಅಸುಂಡಿ ಗ್ರಾಮದಲ್ಲಿ ಮಹಿಳೆಯ ಮೇಲೆ ಅತ್ಯಾ*ರವಾಗಿತ್ತು. ಸದ್ಯ ರವಿಯನ್ನು ಕೊ* ಮಾಡಿದ ಆರೋಪಿ ಹೊನ್ನೂರಸ್ವಾಮಿಯ ಸಹೋದರ ಈ ಕೃತ್ಯವನ್ನೆಸಗಿದ್ದ. ಅ*ಚಾರವಾದ ಸಂತ್ರಸ್ತೆ ಪರ ರವಿ ಮುಂದೆ ನಿಂತು ಕೇಸ್ ದಾಖಲಿಸಿ ಆರೋಪಿಗಳಿಗೆ ಜೈಲಿಗೆ ಹೋಗುವಂತೆ ಮಾಡಿದ್ದ. ಇದರ ಪರಿಣಾಮ ಅತ್ಯಾ*ರಿ ಕುಟುಂಬಸ್ಥರು ರವಿ ಮೇಲೆ ಕೆಂಡಕಾರುತ್ತಿದ್ದರು.

ಇದೇ ಸೇಡಿನ ಹಿನ್ನಲೆ ಕಳೆದ ವಾರ ಬೈಕ್​ನಲ್ಲಿ ಬರುತ್ತಿದ್ದ ರವಿಯನ್ನು A1 ಆರೋಪಿ ಹೊನ್ನೂರಸ್ವಾಮಿ, 10 ಆರೋಪಿಗಳೊಂದಿಗೆ ಪ್ರೀಪ್ಲ್ಯಾನ್ ಮಾಡಿ ಸುತ್ತಿಗೆಯಿಂದ ತೆಲೆಗೆ ಹಾಗು ಮುಖಕ್ಕೆ ಹೊಡೆದು ಕೊ*ಗೈದಿದ್ದಾರೆ. ಪಿಡಿಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅರೋಪಿಗಳಾದ ಹೊನ್ನೂರಸ್ವಾಮಿ, ಶೇಖರ್, ಸಣ್ಣ ಹೊನ್ನೂರಪ್ಪ, ದೊಡ್ಡ ಯೆರೆಪ್ಪ, ನಾಗರಾಜ, ಆಟೋ ಎರೀಸ್ವಾಮಿ, ಪ್ರಕಾಶ, ಸುರೇಂದ್ರ, ಹೊನ್ನೂರಸ್ವಾಮಿ, ಪ್ರಸಾದರನ್ನು ಬಂಧಿಸಿದ್ದಾರೆ. 

ಇದನ್ನೂ ಓದಿ: ಬಿಗ್​ಬಾಸ್​12: ಕಿಚ್ಚು ಹೊತ್ತಿಸಿದ ಪ್ರೀತಿ ಟಾಸ್ಕ್​.. ಅಷ್ಟಕ್ಕೂ ಏನಾಯ್ತು..?

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ. 

Kannada News Bellary
Advertisment
Advertisment
Advertisment