/newsfirstlive-kannada/media/media_files/2025/09/12/bng_bus-2025-09-12-15-39-02.jpg)
ಬೆಂಗಳೂರು: 20 ವಿದ್ಯಾರ್ಥಿಗಳಿದ್ದ ಶಾಲಾ ಬಸ್ವೊಂದು ರಸ್ತೆ ಪಕ್ಕದ ಚರಂಡಿಗೆ ವಾಲಿದ್ದು ದೊಡ್ಡ ಅನಾಹುತ ಜಸ್ಟ್ ಮಿಸ್ ಆಗಿದೆ. ಈ ಎಲ್ಲ ಎಕ್ಸ್ ಕ್ಲೂಸಿವ್ ದೃಶ್ಯಗಳು ನ್ಯೂಸ್ಫಸ್ಟ್ನಲ್ಲಿ ಪ್ರಕಟವಾಗುತ್ತಿದ್ದಂತೆ ಪಣತ್ತೂರಲ್ಲಿ ರಸ್ತೆಯನ್ನು ಜೆಸಿಬಿ ಮೂಲಕ ಸರಿ ಪಡಿಸಲಾಗುತ್ತಿದೆ.
ಬೆಳಗೆರೆ- ಪಣತ್ತೂರು ರಸ್ತೆಯಲ್ಲಿ ಇಂದು ಬೆಳಗ್ಗೆ ನೀರು ನಿಂತಿದ್ದರಿಂದ ವಾಹನಗಳೆಲ್ಲ ನಿಧಾನವಾಗಿ ಚಲಿಸುತ್ತಿದ್ದವು. ಇದೇ ವೇಳೆ ಶಾಲಾ ಬಸ್ ಕೂಡ ಚಲಿಸುತ್ತಿರುವಾಗ ರಸ್ತೆ ಪಕ್ಕದ ಚರಂಡಿಗೆ ವಾಲಿದೆ. ರಸ್ತೆಯಲ್ಲಿ ಅಧಿಕ ಮಟ್ಟದ ನೀರು ಇದ್ದಿದ್ದರಿಂದ ಚಾಲಕನಿಗೆ ಮುಂದಿರುವುದು ಏನು ಗೊತ್ತಾಗಿಲ್ಲ. ಹೀಗಾಗಿ ಬಸ್ ಚಾಲನೆಯಲ್ಲಿರುವಾಗಲೇ ರಸ್ತೆ ಪಕ್ಕದ ಚರಂಡಿಗೆ ವಾಲಿದೆ.
ಇದನ್ನೂ ಓದಿ:ಇವತ್ತು ಮನೆಯೇ ಇಲ್ಲ, ಸಮೀರ್ MD ಅಂದ್ರೆ ಬಾಡಿಗೆಗೆ ಮನೆ ಕೊಡ್ತಿಲ್ಲ -ಮೊದಲ ಪ್ರತಿಕ್ರಿಯೆ
ಬಸ್ ಸಂಪೂರ್ಣವಾಗಿ ವಾಲುತ್ತಿದ್ದಂತೆ ಕೆಲ ಕಾಲ ಭಯದ ವಾತಾವರಣ ಸೃಷ್ಟಿಯಾಗಿತ್ತು. ಬಸ್ ಉರುಳಿ ಬೀಳುವ ಸಾಧ್ಯತೆ ಇದ್ದ ಕಾರಣ ಬಸ್ ಅನ್ನು ಸ್ಟಾಪ್ ಮಾಡಿ ಎಲ್ಲಾ ಮಕ್ಕಳನ್ನ ತುರ್ತು ನಿರ್ಗಮನದ ದ್ವಾರದ ಮೂಲಕ ಚಾಲಕ ಇಳಿಸಿದ್ದಾನೆ. ಇದರಿಂದ ಯಾವುದೇ ಮಗುವಿಗೆ ಹಾನಿಯಾಗಿಲ್ಲ. ಎಲ್ಲರೂ ಸುರಕ್ಷಿತವಾಗಿದ್ದಾರೆ. ಬೆಳಗ್ಗೆ 7:54 ರ ಸುಮಾರಿಗೆ ಬಸ್ ವಾಲುತ್ತಿರುವ ಎಕ್ಸ್ ಕ್ಲೂಸಿವ್ ದೃಶ್ಯ ನ್ಯೂಸ್ಫಸ್ಟ್ಗೆ ಲಭ್ಯವಾಗಿತ್ತು. ಈ ಸುದ್ದಿ ಪ್ರಕಟವಾಗುತ್ತಿದ್ದಂತೆ ಜಿಬಿಎಯಿಂದ ರಸ್ತೆಯ ಕೆಲಸ ಮಾಡಲಾಗುತ್ತಿದೆ.
ಪಣತ್ತೂರಲ್ಲಿ ರೋಡ್ ಅನ್ನು ಜೆಸಿಬಿ ಮೂಲಕ ಕೆಲಸ ಶುರು ಮಾಡಲಾಗಿದೆ. ರಸ್ತೆಯಲ್ಲಿ ನೀರು ನಿಂತಿದ್ದರಿಂದ ಈ ಅವಘಡ ಸಂಭವಿಸಿತ್ತು. ಇದೀಗ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡಲಾಗುತ್ತಿದೆ. ಗುಂಡಿಗಳಿಗೆ ಆರಂಭದಲ್ಲಿ ಮಣ್ಣು ಹಾಕಿ ಸಿಬ್ಬಂದಿ ಮುಚ್ಚಿದ್ದಾರೆ. ಅದೇ ಜಾಗದಲ್ಲಿ ಗೂಡ್ಸ್ ಆಟೋ ಪಲ್ಟಿಯಾಗೋದು ಜಸ್ಟ್ ಮಿಸ್ ಆಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ