ಇವತ್ತು ಮನೆಯೇ ಇಲ್ಲ, ಸಮೀರ್ MD ಅಂದ್ರೆ ಬಾಡಿಗೆಗೆ ಮನೆ ಕೊಡ್ತಿಲ್ಲ -ಮೊದಲ ಪ್ರತಿಕ್ರಿಯೆ

ಧರ್ಮಸ್ಥಳ ಪ್ರಕರಣದಲ್ಲಿ ಎಸ್​ಐಟಿ ತನಿಖೆಗೆ ಒಳಗಾಗಿರುವ ಸಮೀರ್ ಎಂಡಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ನನಗೆ ವಿದೇಶದಿಂದ ಫಂಡ್​ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೊಂಡಿದ್ದಿದ್ರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು ಎಂದಿದ್ದಾರೆ.

author-image
Ganesh Kerekuli
Sameer MD
Advertisment

ಧರ್ಮಸ್ಥಳ ಪ್ರಕರಣದಲ್ಲಿ ಎಸ್​ಐಟಿ ತನಿಖೆಗೆ ಒಳಗಾಗಿರುವ ಸಮೀರ್ ಎಂಡಿ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ. ಯೂಟ್ಯೂಬ್ ವಿಡಿಯೋದಲ್ಲಿ ಮಾತನಾಡಿರುವ ಸಮೀರ್​.. ನನಗೆ ವಿದೇಶದಿಂದ ಫಂಡ್​ ಬಂದಿದೆ ಎಂದು ಆರೋಪ ಮಾಡುತ್ತಿದ್ದಾರೆ. ನನಗೆ ಯಾವುದೇ ಫಂಡ್ ಬಂದಿಲ್ಲ. ಹಣ ತಗೊಂಡಿದ್ದಿದ್ರೆ ತನಿಖೆಯಿಂದ ಎಲ್ಲಾ ಹೊರಗೆ ಬರ್ತಿತ್ತು. ಪೊಲೀಸರಿಗೆ ಎಲ್ಲಾ ಬ್ಯಾಂಕ್ ದಾಖಲೆ ನೀಡಿದ್ದೇನೆ. ಪೊಲೀಸರು ತನಿಖೆ ಮಾಡಲಿ, ನಾನು ಯಾವುದೇ ತಪ್ಪು ಮಾಡಿಲ್ಲ. ನನ್ನ ಮೇಲೆ ಸುಳ್ಳು ಆರೋಪ ಮಾಡುವವರನ್ನ ಯಾರೂ ಪ್ರಶ್ನೆ ಮಾಡಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸುಜಾತ ಭಟ್ ವಿಡಿಯೋ ಬಗ್ಗೆ ಪ್ರತಿಕ್ರಿಯಿಸಿ.. ಆ ತಾಯಿಯ ಕಣ್ಣೀರನ್ನ ನೋಡಿ ವಿಡಿಯೋ ಮಾಡಿದ್ದೆ. ಸುಜಾತ ಭಟ್​ರ ಇಂಟರ್​ವೀವ್ ನೋಡಿ ಕಣ್ಣೀರು ನೋಡಿ ಅದರ ಬಗ್ಗೆ ವಿಡಿಯೋ ಮಾಡಿದ್ದೆ. ಈಗ ಆ ಕಣ್ಣೀರೇ ಸುಳ್ಳು ಅಂದ್ರೆ ನಾನು ಏನು ಮಾಡಲಿ? ನನ್ನ ವಿಡಿಯೋ ಸುಳ್ಳು ಅಂತ ಹೇಳುತ್ತಿದ್ದಾರೆ. ಪೊಲೀಸರ ಯುಡಿಆರ್ ರಿಪೋರ್ಟ್​ ಸುಳ್ಳಾ? ಸೌಜನ್ಯಾ, ಪದ್ಮಾಲತಾರನ್ನ ಸಾಯಿಸಿದ್ದು ಯಾರು? ಎಂದು ಪ್ರಶ್ನೆ ಮಾಡಿದ್ದಾರೆ.

ಮನೆಯೇ ಇಲ್ಲ

ಯಾವಾಗಲೂ ಸ್ಟುಡಿಯೋದಲ್ಲಿ ಕ್ಯಾಮರಾ ಮುಂದೆ ಕೂತ್ಕೊಂಡು ವಿಡಿಯೋ ಮಾಡ್ತಿದೆ. ಇವತ್ತು ಕಾರಲ್ಲಿ ಕೂತ್ಕೊಂಡು ವಿಡಿಯೋ ಮಾಡ್ತಿದ್ದೇನೆ. ಪ್ರಮಾಣಿಕವಾಗಿ ನಾನು ಹೇಳ್ತಿದ್ದೇನೆ. ಇವತ್ತು ನನಗೆ ಮನೆ ಇಲ್ಲ. ಯಾವುದೋ ಒಂದು ಪುಟ್ಟ ಬಾಡಿಗೆ ಮನೆಯಲ್ಲಿ ಇದ್ವಿ. ಪೊಲೀಸರು ತನಿಖೆಗೆ ಅಂತಾ ಮನೆಗೆ ಬಂದರು. ಅದಾದ ನಂತರ ಮನೆಯ ಓವರ್​​ ನಮ್ಮನ್ನ ಮನೆಯಿಂದ ಖಾಲಿ ಮಾಡಿಸಿದ್ದಾರೆ. ಇವತ್ತು ಸಮೀರ್ ಎಂಡಿ ಅಂದರೆ ಯಾರೂ ಮನೆ ಕೊಡ್ತಿಲ್ಲ. ಸಮೀರ್ ಎಂಡಿ ಅಂದರೆ ಜನ ಹೆದರಿಕೊಳ್ತಿದ್ದಾರೆ.

ಕಳೆದು ಒಂದು ತಿಂಗಳಿನಿಂದ ನಾನು ನನ್ನ ತಾಯಿ, ಅಲೆದಾಡುತ್ತಿದ್ದೇವೆ ಎಂದಿದ್ದಾರೆ. ಇಲ್ಲಿ ಗಟ್ಟಿಯಾಗಿ ನ್ಯಾಯದ ಪರ ನಿಂತರೆ ಎಲ್ಲರಿಗೂ ಇದೇ ಪರಿಸ್ಥಿರಿ ಬರುತ್ತದೆ. ನಾನು ಸತ್ಯ, ನ್ಯಾಯದ ಪರವಾಗಿ ಹೋರಾಟ ಮಾಡಿದ್ದೀನಿ. ಹೆಣ್ಮಕ್ಕಳಿಗೆ ಆಗಿರುವ ಅನ್ಯಾಯಕ್ಕೆ ನ್ಯಾಯ ಸಿಗಲಿ ಎಂದು ಶಕ್ತಿ ಮೀರಿ ಪ್ರಯತ್ನ ಪಟ್ಟಿದ್ದೀನಿ. ಎಸ್​ಐಟಿ ರಚನೆ ಆದಾಗಲೇ ಅರ್ಧ ಕೆಲಸ ಆಗಿದೆ. ಎಸ್​ಐಟಿ ಇದೆ, ಆ ದೇವರು ಇದ್ದಾರೆ ಅಂತಾ ಹೇಳಿಕೆ ನೀಡಿದ್ದಾರೆ. 

ಇದನ್ನೂ ಓದಿ:ರಮ್ಯಾ ಮತ್ತೆ ಫೈರ್.. ಈ ಬಾರಿ ವಾರ್ನ್ ಮಾಡಿದ್ದು ಯಾರಿಗೆ..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Sameer MD
Advertisment