Advertisment

ಚಿಂತೆ ಇಲ್ಲದವನಿಗೆ ಸಂತೆಯಲ್ಲೂ ನಿದ್ದೆ.. ನಡುರಸ್ತೆಯಲ್ಲೇ ಬೆಡ್ ಹಾಕಿ ಮಲಗಿದ ಭೂಪ

ಇತ್ತಿಚಿಗೆ ಕೆಲವು ವ್ಯಕ್ತಿಗಳು ಪಬ್ಲಿಸಿಟಿ ಗಿಮಿಕ್​ಗೊ, ಏನೋ ಯಾವುದಾದರೊಂದು ಹುಚ್ಚಾಟ ಮಾಡಿ ಪ್ರಚಾರ ಪಡೆಯುವ ಗುಂಗಿನಲ್ಲಿರುತ್ತಾರೆ. ಇದೇ ರೀತಿಯ ವ್ಯಕ್ತಿಯೊಬ್ಬ ರಸ್ತೆಯ ಮಧ್ಯೆ ಹಾಸಿಗೆ ಹಾಸಿಕೊಂಡು ಮಲಗಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

author-image
Bhimappa
BNG_ROAD_SLEEP
Advertisment

ಬೆಂಗಳೂರು: ಅದೇನೋ ಗೊತ್ತಿಲ್ಲ.. ಇತ್ತಿಚಿಗೆ ಕೆಲವು ವ್ಯಕ್ತಿಗಳು ಪಬ್ಲಿಸಿಟಿ ಗಿಮಿಕ್​ಗೊ ಏನೋ ಯಾವುದಾದರೊಂದು ಹುಚ್ಚಾಟ ಮಾಡಿ ಪ್ರಚಾರ ಪಡೆಯುವ ಗುಂಗಿನಲ್ಲಿರುತ್ತಾರೆ. ಇದೇ ರೀತಿಯ ವ್ಯಕ್ತಿಯೊಬ್ಬ ರಸ್ತೆಯ ಮಧ್ಯೆ ಹಾಸಿಗೆ ಹಾಸಿಕೊಂಡು ಮಲಗಿರುವ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ.

Advertisment

ರಾಜಧಾನಿ ಬೆಂಗಳೂರಿನ ಹಲಸೂರು ಠಾಣಾ ವ್ಯಾಪ್ತಿಯ ಬಿಜಿಎಸ್​ ರಸ್ತೆಯಲ್ಲಿ ವ್ಯಕ್ತಿಯೊಬ್ಬ ರಸ್ತೆ ಮಧ್ಯೆ ಹಾಸಿಗೆ ಹಾಕಿ ಮಲಗುವುದರ ಮೂಲಕ ಹುಚ್ಚಾಟ ಮೆರೆದಿದ್ದಾನೆ. ಇದು ರೀಲ್ ಹುಚ್ಚೋ, ಪಬ್ಲಿಸಿಟಿ ಗಿಮ್ಮಿಕ್ಕೋ ಅಥವಾ ಕುಡಿದಿದ್ದನೊ ಎನ್ನುವುದರ ಬಗ್ಗೆ ಗೊತ್ತಿಲ್ಲ. ವ್ಯಕ್ತಿಯ ಈ ಹುಚ್ಚಾಟದಿಂದ ಕೆಲ ಕಾಲ ಟ್ರಾಫಿಕ್ ಸಮಸ್ಯೆ ಉಂಟಾಗಿದೆ. ಈ ಘಟನೆಯಿಂದ ಅನೇಕ ಜನರು ತೊಂದರೆ ಅನುಭವಿಸಿದ್ದಾರೆ. 

ಇದನ್ನೂ ಓದಿ:MS ಧೋನಿ ಕ್ಯಾಪ್ಟನ್ಸಿಯಲ್ಲಿ ಅನ್ಯಾಯ..ಅನ್ಯಾಯ.. ಹುಕ್ಕಾ ಗ್ಯಾಂಗ್​​ಗೆ ತಂಡದಲ್ಲಿ ಸ್ಥಾನ..!

ಈ ಕುರಿತು ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ವ್ಯಕ್ತಿಯು ಪಾನಮತ್ತನಾಗಿರಲಿ ಅಥವಾ ಮಾನಸಿಕ ಅಸ್ವಸ್ಥನಾಗಿರಲಿ ಈ ರೀತಿ ವರ್ತಿಸುವುದು ಖಂಡನೀಯ ಎಂದು ನೆಟ್ಟಿಗರು ಆಕ್ರೋಶ ಹೊರಹಾಕಿದ್ದಾರೆ. ದಿನದಿಂದ ದಿನಕ್ಕೆ ಕೆಲವರ ಹುಚ್ಚಾಟಕ್ಕೆ ಸಾರ್ವಜನಿಕರು ಹೈರಾಣಾಗಿದ್ದಾರೆ. ಪೊಲೀಸರು ಈ ರೀತಿಯ ಹುಚ್ಚಾಟಳಿಗೆ ಶೀಘ್ರದಲ್ಲಿ ಕಡಿವಾಣ ಹಾಕುವಂತೆ ಜನರು ಆಗ್ರಹಿಸಿದ್ದಾರೆ.    

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Kannada News Bangalore
Advertisment
Advertisment
Advertisment