ಮೈಸೂರು- ಬೆಂಗಳೂರು ಎಕ್ಸ್​ಪ್ರೆಸ್ ವೇನಲ್ಲಿ ಭೀಕರ ಅಪಘಾತ; ಉಸಿರು ಚೆಲ್ಲಿದ ದಂಪತಿ

ಘಟನೆಯಲ್ಲಿ ಮಗ ಪವನ್​ಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುಟುಂಬದವರು ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಎಕ್ಸ್​ಪ್ರೆಸ್ ವೇನಲ್ಲಿ ನಿಂತಿದ್ದ ಟ್ರಕ್​ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ.

author-image
Bhimappa
RMG_CAR_ACCIDENT
Advertisment

ರಾಮನಗರ: ಮೈಸೂರು- ಬೆಂಗಳೂರು ಎಕ್ಸ್​ಪ್ರೆಸ್ ವೇನಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಗಂಡ ಹೆಂಡತಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಚನ್ನಪಟ್ಟಣ ಬಳಿಯ ದೇವರಹೊಸಹಳ್ಳಿ ಬಳಿ ಈ ಘಟನೆ ನಡೆದಿದೆ.

ಕೊಡಗು ಮೂಲದ ಸೋಮಯ್ಯ (73) ಹಾಗೂ ಸರಸ್ವತಿ ( 65) ಸ್ಥಳದಲ್ಲೇ ಜೀವಬಿಟ್ಟಿದ್ದಾರೆ. ಇನ್ನು, ಘಟನೆಯಲ್ಲಿ ಮಗ ಪವನ್​ಗೆ ಗಂಭೀರವಾದ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಕುಟುಂಬದವರು ಕಾರಿನಲ್ಲಿ ಮೈಸೂರಿನಿಂದ ಬೆಂಗಳೂರಿಗೆ ಹೋಗುತ್ತಿದ್ದರು. ಈ ವೇಳೆ ಎಕ್ಸ್​ಪ್ರೆಸ್ ವೇನಲ್ಲಿ   ನಿಂತಿದ್ದ ಟ್ರಕ್​ಗೆ ಹಿಂಬದಿಯಿಂದ ಕಾರು ಡಿಕ್ಕಿಯಾಗಿದೆ.

ಇದನ್ನೂ ಓದಿ: Asia Cup; ಹ್ಯಾಂಡ್​ಶೇಕ್ ಮಾಡದ ಪಾಕ್ ಕ್ಯಾಪ್ಟನ್​.. ಆದ್ರೆ ಸೂರ್ಯಕುಮಾರ್​ನ ಮೆಚ್ಚಲೇಬೇಕು!

RMG_CAR_ACCIDENT_1

ಈ ಭೀಕರ ಘಟನೆಯಲ್ಲಿ ಗಂಡ ಹೆಂಡತಿ ಸ್ಥಳದಲ್ಲೇ ಉಸಿರು ಚೆಲ್ಲಿದ್ದಾರೆ. ಇವರ ಮಗ ಪವನ್​ ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ. ಡಿಕ್ಕಿ ರಭಸಕ್ಕೆ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Accident NEWS road accident
Advertisment