Advertisment

2ನೇ ಮಹಡಿಯಿಂದ ಬಿದ್ದು ಸೆಕೆಂಡ್​ PUC ವಿದ್ಯಾರ್ಥಿ ನಿಧನ.. ಕಾರಣವೇನು?

ಇವತ್ತು ಬೆಳಗಿನ ಸಮಯದ 8:20ರ ಸುಮಾರಿಗೆ ರಿಚರ್ಡ್ಸ್ ಟೌನ್​ನಲ್ಲಿರುವ ಖಾಸಗಿ ಶಾಲೆ ಕ್ಲಾರೆನ್ಸ್ ಹೈ ಸ್ಕೂಲ್​ನಲ್ಲಿ ಎಂದಿನಂತೆ ವಿದ್ಯಾರ್ಥಿಗಳು, ಶಿಕ್ಷಕರು ಪ್ರಾರ್ಥನೆ ಮಾಡುತ್ತಿದ್ದರು. ಇದೇ ವೇಳೆ ಶಾಲೆಯ ಎರಡನೇ ಮಹಡಿಯಿಂದ ದಿಢೀರ್ ಎಂದು ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ.

author-image
Bhimappa
BNG_STUDENT_NEW
Advertisment

ಬೆಂಗಳೂರು: ಬೆಳಗ್ಗೆ ಪ್ರಾರ್ಥನೆ ಮಾಡುವಾಗ ಶಾಲೆಯ ಕಟ್ಟಡದಿಂದ ವಿದ್ಯಾರ್ಥಿ ಬಿದ್ದು ಜೀವ ಬಿಟ್ಟಿರುವ ಘಟನೆ ಸಿಲಿಕಾನ್ ಸಿಟಿಯ ರಿಚರ್ಡ್ಸ್ ಟೌನ್​ನಲ್ಲಿರುವ ಖಾಸಗಿ ಸ್ಕೂಲ್​ನಲ್ಲಿ ನಡೆದಿದೆ.    
   
ಸೆಕೆಂಡ್​​ ಪಿಯುಸಿ ಓದುತ್ತಿದ್ದ ಆರ್ಯನ್ ಮೊಸೆಸ್ ವ್ಯಾಸ್ ಕಟ್ಟಡದಿಂದ ಜಿಗಿದ ವಿದ್ಯಾರ್ಥಿ. ಇವತ್ತು ಬೆಳಗಿನ ಸಮಯದ 8:20ರ ಸುಮಾರಿಗೆ ರಿಚರ್ಡ್ಸ್ ಟೌನ್​ನಲ್ಲಿರುವ ಖಾಸಗಿ ಶಾಲೆ ಕ್ಲಾರೆನ್ಸ್ ಹೈ ಸ್ಕೂಲ್​ನಲ್ಲಿ ಎಂದಿನಂತೆ ವಿದ್ಯಾರ್ಥಿಗಳು, ಶಿಕ್ಷಕರು ಪ್ರಾರ್ಥನೆ ಮಾಡುತ್ತಿದ್ದರು. ಇದೇ ವೇಳೆ ಶಾಲೆಯ ಎರಡನೇ ಮಹಡಿಯಿಂದ ದಿಢೀರ್ ಎಂದು ವಿದ್ಯಾರ್ಥಿ ಕೆಳಗೆ ಬಿದ್ದಿದ್ದಾನೆ. ಇದರಿಂದ ಏನು ಬಿತ್ತು ಎಂದು ಒಂದು ಕ್ಷಣ ಎಲ್ಲರೂ ಗಾಬರಿಯಾಗಿದ್ದರು. 

Advertisment

ಇದನ್ನೂ ಓದಿ:ತವರಿಗೆ ಹೊರಟಿದ್ದ ಹೆಂಡತಿಗೆ ಹೊಡೆದು, ಕೊಳವೆ ಬಾವಿಯಲ್ಲಿ ಹೂತು ಹಾಕಿದ್ದ ಪಾಪಿ ಗಂಡ

ಆರ್ಯನ್ ಮೋಸೆಸ್ ಮೇಲಿನಿಂದ ಬಿದ್ದ ರಭಸಕ್ಕೆ ಜೀವ ಕಳೆದುಕೊಂಡಿದ್ದಾನೆ. ಲಭ್ಯವಾದ ಮಾಹಿತಿ ಪ್ರಕಾರ ಆತ್ಮಹತ್ಯೆ ಎಂದು ಹೇಳಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನು ಸ್ಪಷ್ಟನೆ ಇಲ್ಲ. ಈ ಸಂಬಂಧ ಪುಲಿಕೇಶಿ ನಗರದ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲು ಮಾಡಲಾಗಿದೆ. ಇನ್ನು ವಿದ್ಯಾರ್ಥಿ ಜೀವ ಬಿಟ್ಟಿದ್ದರಿಂದ ಶಾಲಾ ಆಡಳಿತ ಮಂಡಳಿ ಇವತ್ತು ಕ್ಲಾರೆನ್ಸ್ ಹೈ ಸ್ಕೂಲ್​ಗೆ ರಜೆ ಘೋಷಣೆ ಮಾಡಿತ್ತು.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Indian student Bangalore
Advertisment
Advertisment
Advertisment