Advertisment

ತವರಿಗೆ ಹೊರಟಿದ್ದ ಹೆಂಡತಿಗೆ ಹೊಡೆದು, ಕೊಳವೆ ಬಾವಿಯಲ್ಲಿ ಹೂತು ಹಾಕಿದ್ದ ಪಾಪಿ ಗಂಡ

ಒಂದೂವರೆ ತಿಂಗಳ ಹಿಂದೆ ತವರಿಗೆ ಹೊರಟಿದ್ದ ಹೆಂಡತಿ ಜೊತೆ ಗಂಡ ವಿಜಯ್ ಗಲಾಟೆ ಮಾಡಿದ್ದಾನೆ. ಈ ಗಲಾಟೆಯಲ್ಲಿ ಹೆಂಡತಿಯ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಗಂಡ ಹೊಡೆಯುತ್ತಿದ್ದಂತೆ ಪತ್ನಿ ಭಾರತಿ ಜೀವ ಬಿಟ್ಟಿದ್ದಾಳೆ.

author-image
Bhimappa
CKM_WIFE_HUSBAND
Advertisment

ಚಿಕ್ಕಮಗಳೂರು: ತವರಿಗೆ ಹೋಗುತ್ತಿದ್ದ ಹೆಂಡತಿಗೆ ಗಂಡ ಜೀವ ಹೋಗುವಂತೆ ಹೊಡೆದು ಕೊಳವೆ ಬಾವಿಯಲ್ಲಿ ಹೂತು ಹಾಕಿರುವುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಘಟನೆಯು ಕಡೂರು ತಾಲೂಕಿನ ಆಲಘಟ್ಟ ಗ್ರಾಮದಲ್ಲಿ ನಡೆದಿದೆ.

Advertisment

ತಾಲೂಕಿನ ಆಲಘಟ್ಟ ಗ್ರಾಮದ ಭಾರತಿ (28) ಮೃತ ದುರ್ದೈವಿ. ಒಂದೂವರೆ ತಿಂಗಳ ಹಿಂದೆ ತವರಿಗೆ ಹೊರಟಿದ್ದ ಹೆಂಡತಿ ಜೊತೆ ಗಂಡ ವಿಜಯ್ ಗಲಾಟೆ ಮಾಡಿದ್ದಾನೆ. ಈ ಗಲಾಟೆಯಲ್ಲಿ ಹೆಂಡತಿಯ ಕೆನ್ನೆಗೆ ಜೋರಾಗಿ ಹೊಡೆದಿದ್ದಾನೆ. ಗಂಡ ಹೊಡೆಯುತ್ತಿದ್ದಂತೆ ಪತ್ನಿ ಭಾರತಿ ಜೀವ ಬಿಟ್ಟಿದ್ದಾಳೆ. ಪೊಲೀಸರು ಬಂಧಿಸುತ್ತಾರೆ ಎಂದು ಪತ್ನಿಯನ್ನ ತಮ್ಮ ತೋಟದಲ್ಲಿನ ಕೊಳವೆ ಬಾವಿಯಲ್ಲಿ ಕಿರಾತಕ ಗಂಡ ಹೂತು ಹಾಕಿದ್ದನು. 

ಇದನ್ನೂ ಓದಿ: ಅಧಿಕ ರಕ್ತದೊತ್ತಡ ಸುಲಭವಾಗಿ ನಿಯಂತ್ರಣ ಮಾಡಬಹುದು.. ಆದ್ರೆ ಈ ಟಿಪ್ಸ್​ ನಿಮ್ಗೆ ಗೊತ್ತಿರಬೇಕು!

CKM_WIFE

ಕೊಳವೆ ಬಾವಿಯಲ್ಲಿ ಹೂತು ಹಾಕಿದ ಮೇಲೆ ಕಡೂರು ಠಾಣೆಯಲ್ಲಿ ಪತ್ನಿ ನಾಪತ್ತೆ ಆಗಿದ್ದಾಳೆ ಎಂದು ಆರೋಪಿ ವಿಜಯ್ ದೂರು ನೀಡಿದ್ದನು. ಈ ಸಂಬಂಧ ತನಿಖೆ ಕೈಗೊಂಡಿದ್ದ ಪೊಲೀಸರು ಕೊನೆಗೂ ಸತ್ಯವನ್ನು ಕಂಡು ಹಿಡಿದಿದ್ದಾರೆ. ಒಂದೂವರೆ ತಿಂಗಳ ನಡೆದ ಪೊಲೀಸರ ತನಿಖೆಯಲ್ಲಿ ಗಂಡ ವಿಜಯ್​ನೇ ಹಂತಕ ಎಂಬುದು ಗೊತ್ತಾಗಿದೆ. 

Advertisment

ಈ ಪ್ರಕರಣದ ಸಂಬಂಧ ಕಡೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿತ್ತು. ಸದ್ಯ ಪೊಲೀಸರು ಆಕೆಯ ಗಂಡ ವಿಜಯ್, ಅತ್ತೆ ತಾಯಮ್ಮ, ಮಾವ ಗೋವಿಂದಪ್ಪನನ್ನು ಅರೆಸ್ಟ್ ಮಾಡಿದ್ದಾರೆ. ತನಿಖೆಯಲ್ಲಿ ಸತ್ಯ ಹೊರ ಬಂದಾಗ ಪೊಲೀಸರೇ ಶಾಕ್ ಆಗಿದ್ದಂತು ನಿಜ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Chikkamagaluru case Chikkamagaluru news
Advertisment
Advertisment
Advertisment