/newsfirstlive-kannada/media/media_files/2025/10/11/bng_bhuvana-2025-10-11-15-31-07.jpg)
ಬೆಂಗಳೂರು: ಶಾಲೆ ಮುಗಿಸಿಕೊಂಡು ಮನೆಗೆ ಹೋಗುತ್ತಿದ್ದ ಬಾಲಕಿ ಮೇಲೆ ಬಿಎಂಟಿಸಿ ಬಸ್ ಹರಿದಿರುವ ಘಟನೆ ಸಿಲಿಕಾನ್ ಸಿಟಿಯ ರಾಜಾಜಿನಗರದ 1ನೇ ಬ್ಲಾಕ್​ನ ಸಿಗ್ನಲ್​ನಲ್ಲಿ ನಡೆದಿದೆ. ಮಗಳನ್ನು ಕಳೆದುಕೊಂಡ ಪೋಷಕರ ಆಕ್ರಂದ ಮುಗಿಲು ಮುಟ್ಟಿದೆ.
ನಗರದ ಪಾಂಚಜನ್ಯ ಸ್ಕೂಲ್​ನ ವಿದ್ಯಾರ್ಥಿನಿ ಭುವನ (9) ಮೃತಪಟ್ಟ ಬಾಲಕಿ. ಶಾಲೆ ಮುಗಿದ ಮೇಲೆ ಬೇಕರಿಯಲ್ಲಿ ಬಿಸ್ಕೆತ್ ತಗೆದುಕೊಂಡು ಬಾಲಕಿ ರಸ್ತೆ ದಾಟುತ್ತಿದ್ದಳು. ಈ ವೇಳೆ ಬಿಎಂಟಿಸಿ ಬಸ್​ ಬಾಲಕಿಗೆ ಡಿಕ್ಕಿ ಹೊಡೆದಿದೆ. ಬಸ್​ ಡಿಕ್ಕಿ ಆಗುತ್ತಿದ್ದಂತೆ ಬಾಲಕಿ ಜೀವ ಬಿಟ್ಟಿದ್ದಾಳೆ. ಇತ್ತ ಡ್ರೈವರ್ ಸ್ಥಳದಿಂದ ಎಸ್ಕೇಪ್ ಆಗಿದ್ದಾನೆ.
ಈ ಬಾಲಕಿಯ ತಂದೆ-ತಾಯಿ ಜೀವನಕ್ಕಾಗಿ ಕಬಾಬ್ ಮಾರಾಟ ಮಾಡುತ್ತಿದ್ದರು. ಭುವನ ಅಜ್ಜಿಯ ಆರೈಕೆಯಲ್ಲಿ ಬೆಳೆದಿದ್ದಳು. ಅಜ್ಜಿ ಜೋಳ ಮಾರಾಟ ಮಾಡ್ತಾ ಇದ್ರೆ, ತಂದೆ ತಾಯಿ ಕಬಾಬ್ ಮಾರಾಟ ಮಾಡುತ್ತಿದ್ದರು. BMTC ಚಾಲಕನ ಅಜಾಗರೂಕತೆಯಿಂದ ಇವರ ಮಗು ಬಲಿಯಾಗಿದೆ. ಸದ್ಯ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಈ ಅಪಘಾತದ ಬೆನ್ನಲ್ಲೇ ಸಾರಿಗೆ ಇಲಾಖೆ ಚಾಲಕರಿಗೆ ಕಣ್ಣು ಟೆಸ್ಟ್ ಮಾಡಿಸಬೇಕು ಅಂತ ಆಗ್ರಹಿಸಲಾಗಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ