/newsfirstlive-kannada/media/media_files/2025/11/02/bng_accident_1-2025-11-02-07-21-33.jpg)
ಬೆಂಗಳೂರು: ಖಾಲಿ ಆ್ಯಂಬುಲೆನ್ಸ್ ವೇಗವಾಗಿ ಬಂದು ಹಿಂಬದಿಯಿಂದ ಮೂರು ಬೈಕ್​ಗಳಿಗೆ ಡಿಕ್ಕಿ ಹೊಡೆದು ಎಳೆದೊಯ್ದ ಪರಿಣಾಮ ಗಂಡ-ಹೆಂಡತಿ ಇಬ್ಬರು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ. ಈ ಘಟನೆಯು ಸಿಲಿಕಾನ್ ಸಿಟಿಯ ಶಾಂತಿನಗರದ ಡಬಲ್ ರೋಡ್ ಸಂಗೀತ ಸಿಗ್ನಲ್ ಬಳಿ ನಡೆದಿದೆ.
ಸಿಗ್ನಲ್​ನಲ್ಲಿ ಬೈಕ್​ನಲ್ಲಿದ್ದ ಇಸ್ಮಾಯಿಲ್ ಹಾಗೂ ಅವರ ಪತ್ನಿ ಸಮೀನ್ ಬಾನು ಸ್ಥಳದಲ್ಲೇ ಪ್ರಾಣ ಬಿಟ್ಟಿದ್ದಾರೆ. ಡಬಲ್ ರೋಡ್ ಸಂಗೀತ ಬಳಿ ರೆಡ್​ ಸಿಗ್ನಲ್​ ಬಿದ್ದ ಕಾರಣ ಬೈಕ್​ಗಳು ನಿಂತುಕೊಂಡಿದ್ದವು. ಪತ್ನಿಯನ್ನು ಕೂರಿಸಿಕೊಂಡು ಇಸ್ಮಾಯಿಲ್ ಬೈಕ್​ನಲ್ಲಿ ನಿಂತುಕೊಂಡಿದ್ದನು. ಇದೇ ವೇಳೆ ರಿಚ್ಮಂಡ್ ಸರ್ಕಲ್ ಕಡೆಯಿಂದ ವೇಗವಾಗಿ ಬಂದ ಆ್ಯಂಬುಲೆನ್ಸ್ ಬೈಕ್​ಗಳಿಗೆ ಭಯಾನಕವಾಗಿ ಡಿಕ್ಕಿ ಹೊಡೆದಿದೆ.
/filters:format(webp)/newsfirstlive-kannada/media/media_files/2025/11/02/bng_accident-2025-11-02-07-21-45.jpg)
ಆ್ಯಂಬುಲೆನ್ಸ್ ಡಿಕ್ಕಿ ಹೊಡೆದ ರಭಸಕ್ಕೆ ಇಸ್ಮಾಯಿಲ್ ಮತ್ತು ಪತ್ನಿ ಸಮೀನ್ ಬಾನು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಮೂರು ಬೈಕ್‌ಗೆ ಏಕಾಏಕಿ ಗುದ್ದಿ ಎಳೆದೊಯ್ದಿದ್ದ ಪರಿಣಾಮ ಮತ್ತೊಬ್ಬ ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ. ಗಾಯಾಳುವನ್ನು ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರ ಬಗ್ಗೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us