/newsfirstlive-kannada/media/media_files/2025/10/19/bng_wife-1-2025-10-19-07-13-40.jpg)
ಬೆಂಗಳೂರು: ತನ್ನ ಹೆಂಡತಿ ಜೀವ ತೆಗೆದು, ಕರೆಂಟ್ ಶಾಕ್​ನಿಂದ ಸಾವನ್ನಪ್ಪಿದ್ದಾಳೆ ಎಂದು ಸುಳ್ಳು ಹೇಳಿ ಕಥೆ ಕಟ್ಟಿದ್ದ ಗಂಡನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಘಟನೆಯು ಬೆಂಗಳೂರಿನ ಶಿಕಾರಿಪಾಳ್ಯದ ಓಂ ಶಕ್ತಿ ಲೇಔಟ್​ನಲ್ಲಿ ನಡೆದಿದೆ.
ನಗರದ ಶಿಕಾರಿಪಾಳ್ಯದ ಓಂ ಶಕ್ತಿ ಲೇಔಟ್ ನಿವಾಸಿ, ರೇಷ್ಮಾ (32) ಪ್ರಾಣ ಕಳೆದುಕೊಂಡ ಮಹಿಳೆ. ಸದ್ಯ ಈಕೆಯ ಪತಿ ಪ್ರಶಾಂತ್ ಕುಮಾರ್​ನನ್ನು ಪೊಲೀಸರು ಬಂಧಿಸಿದ್ದಾರೆ.​ ರೇಷ್ಮಾ ತನ್ನ 15 ವರ್ಷದ ಮಗಳೊಂದಿಗೆ ವಾಸ ಮಾಡತ್ತಿದ್ದಳು. ಈ ವೇಳೆ ಇನ್ಸ್​​ಸ್ಟಾಗ್ರಾಂನಲ್ಲಿ ಪ್ರಶಾಂತ್​ ಪರಿಚಯವಾಗಿದ್ದನು. ಈ ಪರಿಚಯ ಪ್ರೀತಿಯಾಗಿ ಬದಲಾಗಿತ್ತು. ಹೀಗಾಗಿ ಈ ಇಬ್ಬರು 9 ತಿಂಗಳ ಹಿಂದೆಯಷ್ಟೇ ಮದುವೆ ಆಗಿದ್ದರು.
ಇದನ್ನೂ ಓದಿ: ಇಂದು IND vs AUS ಮೊದಲ ಏಕದಿನ ಪಂದ್ಯ.. ಪರ್ತ್​​ನಲ್ಲಿ ಸಾರಥಿ ಯಾರ್ ಆಗ್ತಾರೆ?
ಮದುವೆಯಾದ ಮೇಲೆ ಪ್ರಶಾಂತ್ ಪದೇ ಪದೇ ಪತ್ನಿ ಶೀಲ ಶಂಕಿಸುತ್ತಿದ್ದನು. ಇದರಿಂದ ಹೆಂಡತಿಗೆ ಬೇಸರ ಆಗಿತ್ತು. ಕಳೆದ 15ನೇ ತಾರೀಖಿನಂದು ಪ್ರಶಾಂತ್ ತನ್ನ ಕೈನಿಂದಲೇ ಹೊಡೆದು, ನಂತರ ಹೆಂಡತಿಯ ಕತ್ತು ಹಿಸುಕಿ ಜೀವ ತೆಗೆದಿದ್ದನು. ಬಳಿಕ ಅನುಮಾನ ಬಾರದಂತೆ ಬಾತ್​ರೂಮ್​ನಲ್ಲಿ ಮೃತದೇಹ ಹಾಕಿ, ವಾಟರ್ ಹೀಟರ್ ಸ್ವೀಚ್ ಅನ್ ಮಾಡಿ ಅಲ್ಲಿಂದ ಎಸ್ಕೇಪ್ ಆಗಿದ್ದನು.
ಈ ವೇಳೆ ಮನೆಗೆ ಬಂದಿದ್ದ ಮೃತ ರೇಷ್ಮಾ ಮಗಳು ಬಾತ್​ರೂಮ್​ನಲ್ಲಿ ತಾಯಿನ ನೋಡಿ ಭಯ ಬಿದ್ದಿದ್ದಳು. ಆದರೆ ಬಾತ್​ರೂಮ್ ಬಾಗಿಲು ಚಿಲಕ ಹೊರಗಿನಿಂದ ಲಾಕ್ ಮಾಡಿದ್ದರಿಂದ ಅನುಮಾನಗೊಂಡ ಮಗಳು, ಈ ಸಂಬಂಧ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದಳು. ಈ ಬಗ್ಗೆ ತನಿಖೆ ಮಾಡಿದ ಪೊಲೀಸರು ಸತ್ಯವನ್ನು ಬಯಲಿಗೆ ಎಳೆದಿದ್ದು, ಪ್ರಶಾಂತ್​ನನ್ನ ಅರೆಸ್ಟ್​ ಮಾಡಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ