ಹೋಗೋ, ಬಾರೋ ಅಂತ ಮಾತಾಡಿಸಿದ್ದಕ್ಕೆ ರೌಡಿಶೀಟರ್​ನನ್ನೇ ಎತ್ತಿ ಬಿಟ್ಟ ಕಿಲಾಡಿಗಳು

ಆಗ ತಾನೆ ಪರಿಚಯವಾಗಿ ಹೋಗೋ, ಬಾರೋ ಎಂದು ಮಾತನಾಡಿಸಿದ್ದಕ್ಕೆ ರೌಡಿಶೀಟರೊಬ್ಬನ ಜೀವ ತೆಗೆದಿರುವ ಘಟನೆ ಸೋಲದೇವನಹಳ್ಳಿ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮನೆಗೆ ಹೋಗಿದ್ದವರು ವಾಪಸ್ ಬೈಕ್​ನಲ್ಲಿ ಬಂದು ಈ ಕೃತ್ಯ ಎಸಗಿದ್ದಾರೆ.

author-image
Bhimappa
BNG_ROWDYSHEETER
Advertisment

ಬೆಂಗಳೂರು: ಆಗ ತಾನೆ ಪರಿಚಯವಾಗಿ ಹೋಗೋ, ಬಾರೋ ಎಂದು ಮಾತನಾಡಿಸಿದ್ದಕ್ಕೆ ರೌಡಿಶೀಟರೊಬ್ಬನ ಜೀವ ತೆಗೆದಿರುವ ಘಟನೆ ಸೋಲದೇವನಹಳ್ಳಿ ಠಾಣೆ ವ್ಯಾಪ್ತಿಯ ಚಿಕ್ಕಬಾಣಾವರದ ಮಾರುತಿನಗರ ಬಳಿ ನಡೆದಿದೆ. 

ಚಿಕ್ಕಬಾಣಾವರದ ನಿವಾಸಿ ಪ್ರತಾಪ್​ ಜೀವ ಕಳೆದುಕೊಂಡವರು. ಈ ಸಂಬಂಧ ಕೆಬ್ಬೆಪಾಳ್ಯದ ನಿವಾಸಿಗಳಾದ ಅಕ್ಷಯ್ ಅಲಿಯಾಸ್ ಕುಮಾರಿ, ತೇಜಸ್ ಹಾಗೂ ಲಿಖಿತ್ ಎನ್ನುವವರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಚಿಕ್ಕಬಾಣಾವರದ ಮಾರುತಿನಗರ ಬಳಿ ತಡರಾತ್ರಿ 12 ಗಂಟೆಗೆ ಸುಮಾರಿಗೆ ಪ್ರತಾಪ್​ಗೆ ಡ್ರ್ಯಾಗರ್​ನಿಂದ ಇರಿದು ಜೀವ ತೆಗೆಯಲಾಗಿದೆ. 

ಇದನ್ನೂ ಓದಿ:6, 6, 6, 6, 6, 6, 6, 6, 6; ಸಿಡಿಲಬ್ಬರದ ಸೆಂಚುರಿ ಸಿಡಿಸಿದ ಪ್ರಿಯಾಂಶ್ ಆರ್ಯ.. DPLನಲ್ಲಿ ಮಹತ್ವದ ದಾಖಲೆ

BNG_ROWDYSHEETER_1

ರೌಡಿಶೀಟರ್​ ಪ್ರತಾಪ್ ಹಾಗೂ ಈ ಮೂವರು ನಡುವೆ ನಿನ್ನೆ ಗುರುಕೃಪಾ ಬಾರ್​ ಬಳಿ ಪರಿಚಯವಾಗಿದೆ. ಬಾರ್ ಮುಚ್ಚಿದ್ದರಿಂದ ಹೋಗ್ರೋ, ಬಾರೋ ಎಂದು ಕ್ಲೋಸ್ ಆಗಿಯೇ ಮಾತನಾಡಿದ್ದಾರೆ. ಈ ವೇಳೆ ಮಾತಿಗೆ ಮಾತು ಬೆಳೆದು ಜಗಳವಾಗಿ, ಅಲ್ಲಿಂದ ಎಲ್ಲರೂ ಹೋಗಿದ್ದರು. ಆದರೆ ಮನೆಗೆ ಹೋಗಿದ್ದ ಆರೋಪಿಗಳು ಡ್ರ್ಯಾಗರ್ ತಂದಿದ್ದರು.

ಪ್ರತಾಪ್ ನಡೆದುಕೊಂಡು ಹೋಗುವಾಗ ಬೈಕ್​ನಲ್ಲಿ ಬಂದ ಆರೋಪಿಗಳು ಡ್ರ್ಯಾಗರ್ ನಿಂದ ಇರಿದಿದ್ದಾರೆ. ಚಾಲನೆಯಲ್ಲಿದ್ದ ಬೈಕ್​​ನಿಂದಲೇ ಪ್ರತಾಪ್​ಗೆ ಇರಿದಿದ್ದರು. ಬೈಕ್​ ವೇಗ ಇದ್ದಿದ್ದರಿಂದ ಡ್ರ್ಯಾಗರ್ ಹೊಟ್ಟೆ ಸೀಳಿತ್ತು. ಇದರಿಂದ ರಕ್ತದ ಮಡುವಿನಲ್ಲೇ ಪ್ರತಾಪ್ ಉಸಿರು ಚೆಲ್ಲಿದ್ದಾನೆ. ಇನ್ನು ಈ ಘಟನೆ ಸಂಬಂಧ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಆಗಿದ್ದು ಮೂವರು ಆರೋಪಿಗಳನ್ನ ಪೊಲೀಸರು ಬಂಧಿಸಿದ್ದಾರೆ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Bangalore
Advertisment