/newsfirstlive-kannada/media/media_files/2025/10/27/suburban_railway_bng-2025-10-27-10-33-43.jpg)
ಬೆಂಗಳೂರಿನ ಡ್ರೀಮ್ ಪ್ರಾಜೆಕ್ಟ್ ಅಂದ್ರೆ ಅದು ಸಬ್ ಅರ್ಬನ್ ರೈಲು. ಆದ್ರೆ ಈ ಡ್ರಿಮ್​ ಕಮ್​ ಟ್ರೂ ಆಗೋ ಯಾವ ಲಕ್ಷಣಾನೂ ಕಾಣಿಸ್ತಿಲ್ಲ. ಯಾಕಂದ್ರೆ ಈ ಯೋಜನೆ ಹಳ್ಳ ಹಿಡಿದಿದೆ. ಪಿಎಂ ಮೋದಿ ಕೊಟ್ಟಿದ್ದ ಡೆಡ್ಲೈನ್ ಕೊನೆಗೊಂಡಿದೆ. ಗುತ್ತಿಗೆ ಸಂಸ್ಥೆಯೂ ಹಿಂದಕ್ಕೆ ಸರಿದಿದೆ. ಹಾಗಾದ್ರೆ, ಸಿಲಿಕಾನ್ ಸಿಟಿ ಪಾಲಿಗೆ ವರದಾನ ಆಗಬೇಕಿದ್ದ ಯೋಜನೆಯ ಮುಂದಿನ ಹಾದಿ ಏನು?.
ಡೆಡ್ಲೈನ್ ಮುಗಿದರೂ ಕಾಮಗಾರಿ ಮುಗಿದಿಲ್ಲ... ಗುತ್ತಿಗೆದಾರರು ಹಿಂದಕ್ಕೆ..!
ಎಲ್ಲಾ ಅಂದುಕೊಂಡಂತೆ ಆಗಿದ್ದರೇ ಈಗ ಬೆಂಗಳೂರಿನಲ್ಲಿ ಸಬ್ ಅರ್ಬನ್ ರೈಲು ಸಂಚಾರ ಆರಂಭವಾಗಬೇಕಿತ್ತು. ನಾಲ್ಕು ಕಾರಿಡಾರ್ಗಳ ಪೈಕಿ ಬೈಯಪ್ಪನಹಳ್ಳಿ ಟು ಚಿಕ್ಕಬಾಣಾವರದ ಹಾಗೂ ಹೀಲಲ್ಲಿಗೆಯಿಂದ ರಾಜಾನುಕುಂಟೆಯ 2025ರ ಅಕ್ಟೋಬರ್ ರೊಳಗೆ ಸಂಚಾರಕ್ಕೆ ಶರವೇಗ ಸಿಗಬೇಕಿತ್ತು. ಆದರೆ, ಯೋಜನೆಗೆ ಬೇಕಾದ ಭೂಮಿಯನ್ನ ಕೊಡುವಲ್ಲಿ ಕೆ-ರೈಡ್ ಹಾಗೂ ರಾಜ್ಯ ಸರ್ಕಾರ ವಿಫಲವಾದ ಪರಿಣಾಮ ಬಹುನಿರೀಕ್ಷಿತ ಯೋಜನೆಗೆ ಬ್ರೇಕ್ ಬಿದ್ದಿದೆ.
/filters:format(webp)/newsfirstlive-kannada/media/post_attachments/wp-content/uploads/2025/01/JOB_Railway-3.jpg)
ಸಬ್​ ಅರ್ಬನ್ ರೈಲಿಗಿಲ್ಲ ಭಾಗ್ಯ
- 2022ರಲ್ಲಿ ಪ್ರಧಾನಿಯಿಂದ ಸಬ್ ಅರ್ಬನ್ ಪ್ರಾಜೆಕ್ಟ್​​ಗೆ ಶಂಕು ಸ್ಥಾಪನೆ
- 40 ತಿಂಗಳೊಳಗೆ ಕಾಮಗಾರಿ ಮುಗಿಯುತ್ತೆ ಅಂತ ಡೆಡ್​ಲೈನ್ ಫಿಕ್ಸ್​
- ಡೆಡ್​ಲೈನ್ ಮುಗಿದರೂ ಅರ್ಧದಷ್ಟು ಕೆಲಸವೂ ಪೂರ್ಣವಾಗಿಲ್ಲ
- ಯೋಜನೆಗೆ ಬೇಕಾದ ಭೂಮಿ ಸಿಗದ ಹಿನ್ನಲೆ ಪ್ರಾಜೆಕ್ಟ್​​ ಅಪೂರ್ಣ
- 2 ಕಾರಿಡಾರ್​ ಗುತ್ತಿಗೆ ಪಡೆದ L &Tಕಂಪನಿಯಿಂದ ಆರೋಪ
- ಯೋಜನೆಗೆ ಭೂಮಿ ಸ್ವಾಧೀನಕ್ಕೆ ಪಡೆದಿದ್ದ ಕೆ-ರೈಡ್ & ಸರ್ಕಾರ
- L &Tಕಂಪನಿಗೆ ಈ ಭೂಮಿ ಈವರೆಗೂ ಹಸ್ತಾಂತರವಾಗಿಲ್ಲ
- ಬಂಡವಾಳ ಹಾಕಿ ನಷ್ಟ ಅನುಭವಿಸಿದ್ದ ಗುತ್ತಿಗೆ L &Tಕಂಪನಿ
- ಈ ಬೆನ್ನಲೆ ಗುತ್ತಿಗೆಯಿಂದ ಹಿಂದೆ ಸರಿದ ಎಲ್ ಅಂಡ್ ಟಿ ಕಂಪನಿ
- ಇದುವರೆಗೂ ₹600 ಕೋಟಿ ನಷ್ಟವಾಗಿದೆ ಎಂದ L &Tಕಂಪನಿ
- ನಷ್ಟ ಭರಿಸಿಕೊಡುಬೇಕು ಅಂತ ನ್ಯಾಯಾಲಯದಲ್ಲಿ ಮೊಕದ್ದಮೆ
- ಇದರೊಂದಿಗೆ ಸಬ್ ಅರ್ಬನ್ ಕಾಮಗಾರಿ ಸಂಪೂರ್ಣ ಸ್ಥಗಿತ
ಒಟ್ಟು 148 ಕಿ.ಮೀಟರ್ ಉದ್ದದ ಸಬ್ ಅರ್ಬನ್ ರೈಲು ಯೋಜನೆಯಿಂದ ಬೆಂಗಳೂರು ಟ್ರಾಫಿಕ್ ಸಮಸ್ಯೆ ಕಡಿಮೆಯಾಗುವ ನಿರೀಕ್ಷೆ ಇದೆ. ಬೆಂಗಳೂರಿನಿಂದ ಹೊರ ಹೋಗುವ ಹಾಗೂ ಒಳಬರುವ ಜನರಿಗೂ ಸಾಕಷ್ಟು ಅನುಕೂಲ ಆಗುವ ಲೆಕ್ಕಾಚಾರ ಇದೆ. ನಮ್ಮ ಮೆಟ್ರೋ ಮಾದರಿಯಲ್ಲೇ ಸಬ್ ಅರ್ಬನ್ ರೈಲು ನಗರದ ಜನರಿಗೆ ಸಹಕಾರಿಯಾಗುವ ಭರವಸೆಯೂ ಇದೆ. ಆದರೀಗ, ಕೆ-ರೈಡ್ ಮತ್ತು ಸರ್ಕಾರದ ನಿರ್ಲಕ್ಷ್ಯದಿಂದ ಕನಸಿನ ಪ್ರಾಜೆಕ್ಟ್ ಹಳ್ಳ ಹಿಡಿಯುವತ್ತ ಸಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಎನಿ ವೇ, ಎಲ್ ಅಂಡ್ ಟಿ ಕಂಪನಿ ಹಿಂದೆ ಸರಿದಿರುವುದರಿಂದ, ಕೆ-ರೈಡ್ ಮರು ಟೆಂಡರ್​ಗೆ ಸಿದ್ಧತೆ ಮಾಡಿಕೊಳ್ಳುತ್ತಿದೆ. ಸಬ್ ಅರ್ಬನ್ ಯೋಜನೆ ಪೂರ್ಣಗೊಳಿಸಲು ಮತ್ತೊಮ್ಮೆ ಟೆಂಡರ್ ಆಹ್ವಾನಿಸಲು ತಯಾರಿ ನಡೆಸಿದ್ದು, ಹೊಸ ಟೆಂಡರ್ ಪ್ರಕ್ರಿಯೆ ಮುಗಿದು ಸ್ಥಗಿತಗೊಂಡಿರುವ ಕಾಮಗಾರಿ ಆರಂಭವಾಗೋದು ಇನ್ನಷ್ಟು ವಿಳಂಬವಾಗಬಹುದು. ಹಾಗಾಗಿ, ಸದ್ಯಕ್ಕೆ ಸಬ್ ಅರ್ಬನ್ ಪ್ರಾಜೆಕ್ಟ್ ಮುಗಿಯದ ಅಧ್ಯಾಯ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us