/newsfirstlive-kannada/media/media_files/2025/10/26/bng_women_tilak_nagar-2025-10-26-11-10-00.jpg)
ಬೆಂಗಳೂರು: ನಾಲ್ಕು ಮಕ್ಕಳ ತಾಯಿ ಸಲ್ಮಾ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಆರೋಪಿಗಳು ಸೇರಿ ಮಹಿಳೆಯ ಜೀವ ತೆಗೆದಿರುವ ಶಂಕೆ ವ್ಯಕ್ತಪಡಿಸಲಾಗುತ್ತಿದೆ. ಉದ್ಯಾನ ನಗರಿಯ ತಿಲಕನಗರದಲ್ಲಿ ನಡೆದ ಈ ಘಟನೆಯ ತನಿಖೆಯನ್ನು ಪೊಲೀಸರು ಚುರುಕುಗೊಳಿಸಿದ್ದಾರೆ.
ಮಹಿಳೆ ಸಲ್ಮಾಳ ಜೀವವನ್ನು ಸುಬ್ರಹ್ಮಣಿ ಹಾಗೂ ಸೆಂಥಿಲ್ ತೆಗೆದಿದ್ದಾರೆ. ಸಲ್ಮಾ ಜೊತೆ ಸುಬ್ರಹ್ಮಣಿ ಅನೈತಿಕ ಸಂಬಂಧ ಹೊಂದಿದ್ದನು. ಸೆಂಥಿಲ್ ಜೊತೆಗೂ ಸಲ್ಮಾ ಸಲುಗೆಯಿಂದ ಇರುತ್ತಿದ್ದಳು. ಆದರೆ ಈ ನಡುವೆ ಮಹಿಳೆ ಇಬ್ಬರನ್ನು ಬಿಟ್ಟು ಬೇರೊಬ್ಬನ ಜೊತೆಗೆ ಸಂಬಂಧ ಹೊಂದಿದ್ದಳು ಎನ್ನುವ ಅನುಮಾನ ಪಟ್ಟಿದ್ದರು. ಹೀಗಾಗಿಯೇ ಇಬ್ಬರು ಆರೋಪಿಗಳು ಸೇರಿ ಮಹಿಳೆನ ಮುಗಿಸಿದ್ದಾರೆ.
ಇದನ್ನೂ ಓದಿ:ರಕ್ಷಿತಾ ಪ್ರೇಮ್​​ ಶಾಕಿಂಗ್ ನ್ಯೂಸ್.. 9 ವರ್ಷದ ನಂಟಿಗೆ ಗುಡ್ ಬೈ, ಯಾಕೆ..?
/filters:format(webp)/newsfirstlive-kannada/media/media_files/2025/10/26/bng_women_1-2025-10-26-07-54-47.jpg)
ಮೊದಲು ಮನೆಯಲ್ಲಿ ಜೀವ ತೆಗೆದು ಮಧ್ಯರಾತ್ರಿ ಹೆಗಲ ಮೇಲೆ ಮೃತದೇಹ ಹೊತ್ತು ತಂದು ಆರೋಪಿಗಳು ಆಟೋದಲ್ಲಿ ಇಟ್ಟಿದ್ದರು. ಮೃತದೇಹ ಸಿಕ್ಕ 100 ಮೀಟರ್ ದೂರದಲ್ಲೇ ಮನೆ ಇದೆ. ರಾತ್ರಿ 1.30 ಸುಮಾರಿಗೆ ಮೃತದೇಹ ತಂದು ಆಟೋದಲ್ಲಿ ಹಾಕಿದ್ದಾರೆ. ಆಟೋ ಕಳೆದ ಎರಡು ವರ್ಷದಿಂದ ಅದೇ ಜಾಗದಲ್ಲಿದೆ. ಇನ್ನು ಸುಬ್ರಹ್ಮಣಿ ಪೇಂಟಿಂಗ್ ಕೆಲಸ ಮಾಡಿಕೊಂಡಿದ್ದು ಸೆಂಥಿಲ್ ಕೂಲಿ ಕೆಲಸ ಮಾಡಿಕೊಂಡಿದ್ದನು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us