/newsfirstlive-kannada/media/media_files/2025/09/12/bng_uttarahalli_2-2025-09-12-19-41-44.jpg)
ಬೆಂಗಳೂರು: ಹೈಕೋರ್ಟ್ ಕೇಸ್ ನಂಬರ್ ಫೋರ್ಜರಿ ಮಾಡಿ ನಗರದ ಉತ್ತರಹಳ್ಳಿಯಲ್ಲಿ ಅತಿ ದೊಡ್ಡ ಭೂ ಹಗರಣ ಆರೋಪ ಮಾಡಲಾಗಿದೆ. ಇದರಲ್ಲಿ 100, 500 ಅಲ್ಲ ಬರೋಬ್ಬರಿ 800 ಕೋಟಿ ರೂಪಾಯಿ ಗೋಲ್ ಮಾಲ್ ಆರೋಪ ಕೇಳಿ ಬಂದಿದೆ.
ಇದು ಭೂಮಿ ಹೋಗಿ ಕೆರೆಯಾದ ಕಥೆ ಆಗಿದೆ. ಉತ್ತರಹಳ್ಳಿಯ ಸರ್ವೇ ನಂಬರ್ 120 ರಲ್ಲಿ ಭಾರೀ ಭೂ ಹಗರಣ ನಡೆದಿದೆ ಎನ್ನಲಾಗಿದೆ. 2012ರ ವರೆಗೆ ಸಾಗುವಳಿ ಭೂಮಿ ಇದ್ದಿದ್ದನ್ನ, 2013ರ ವೇಳೆಗೆ ಅದನ್ನು 24 ಎಕರೆ ಕೆರೆ ಎಂದು ಬದಲಾವಣೆ ಆಗಿದೆ. ಇದರಲ್ಲಿ ಕಳ್ಳಾಟ ಮಾಡಿ ಐಎಎಸ್ ಅಧಿಕಾರಿ ಜೆ ಸಿ ಪ್ರಕಾಶ್ ಅವರು ಸಾಗುವಳಿ ಭೂಮಿನ ಕೆರೆ ಎಂದು ಘೋಷಣೆ ಮಾಡಿದ್ರಾ ಎನ್ನುವ ಪ್ರಶ್ನೆ ಎದ್ದಿದೆ. ಜೊತೆಗೆ ಕನಕ ಹೌಸಿಂಗ್ ಸೊಸೈಟಿಗೆ ಭೂಮಿ ನೀಡಲು ಕಾನೂನು ಬಾಹಿರವಾಗಿ ಸರ್ವೇ ನಂಬರ್ ಬದಲಾಯಿಸಿರುವ ಆರೋಪ ಕೂಡ ಇದೆ.
ಕನಕ ಹೌಸಿಂಗ್ ಸೊಸೈಟಿಗೆ ಜಮೀನು ನೀಡಲು ಭಾರೀ ಕಳ್ಳಾಟ ನಡೆಯಿತಾ?, ವಿರೋಧ ಪಕ್ಷದ ನಾಯಕ ಆರ್ ಅಶೋಕ್ ಆಪ್ತನಿಗೆ ಸರ್ಕಾರಿ ಜಮೀನು ಅನ್ನು ಐಎಎಸ್ ಅಧಿಕಾರಿ ನೀಡಿದ್ರಾ? ಎನ್ನುವ ಪ್ರಶ್ನೆಗಳು ಎದ್ದಿವೆ. ತಹಶೀಲ್ದಾರ್ ವರದಿ ನೀಡುವ ಮುನ್ನವೇ ಉತ್ತರಹಳ್ಳಿ ಸರ್ವೇ ನಂಬರ್ 120 ಅನ್ನ ಕೆರೆ ಎಂದು ಐಎಎಸ್ ಅಧಿಕಾರಿ ಜೆಸಿ ಪ್ರಕಾಶ್ ಘೋಷಿಸಿದ್ದರು. ಈ ವೇಳೆ ಕನಕ ಹೌಸಿಂಗ್ ಸೊಸೈಟಿಗಾಗಿ ಸರ್ವೇ ನಂಬರ್ ಬದಲಾಯಿಸಲಾಗಿದೆ. ಆರ್ ಅಶೋಕ್ ಆಪ್ತ ಗಿರಿಯಪ್ಪ ವಿರುದ್ಧ ಆರೋಪಿಸಲಾಗಿದೆ.
ಉತ್ತರಹಳ್ಳಿ ಸರ್ವೇ ನಂಬರ್ 120 ಇದು ಈ ಮೊದಲು ಅಂದರೆ 2013ರ ವರೆಗೆ ಸಾಗುವಳಿ ಭೂಮಿ ಎಂದಿತ್ತು. ಇದೇ ಭೂಮಿಯನ್ನು ಸ್ವತಃ ಜಿಲ್ಲಾಡಳಿತ ಭೂಪರಿವರ್ತನೆ ಮಾಡಿಕೊಟ್ಟಿದೆ. ಆದ್ರೆ ಇದೇ ಸರ್ವೇ ನಂಬರ್ 120 ಅನ್ನು 2013 ರಲ್ಲಿ 24 ಎಕರೆ ಕೆರೆ ಎಂದು ಘೋಷಿಸಲಾಗಿತ್ತು. ಸದ್ಯ ವಾಸ್ತವವಾಗಿ ಈಗ ಅಲ್ಲಿರೋದು 4 ರಿಂದ 6 ಎಕರೆ ಕೆರೆ ಮಾತ್ರ. ಬರೋಬ್ಬರಿ 7 ಎಕರೆ ಜಾಗ ಲಪಟಾಯಿಸಿದ್ದಾರೆ ಎನ್ನಲಾಗಿದೆ. ಇಲ್ಲಿಯ ಒಂದು ಎಕರೆ ಭೂಮಿ ಕನಿಷ್ಠ 50 ಕೋಟಿ ರೂಪಾಯಿಗೆ ಬೆಲೆ ಬಾಳುತ್ತದೆ.
ಇದನ್ನೂ ಓದಿ: ನನ್ನ ಮಗನನ್ನ ಲವ್ ಮಾಡು ಅಂತ ನಾನು ಹೇಳಿದ್ನಾ.. ಸೊಸೆ ಬಗ್ಗೆ ಎಸ್ ನಾರಾಯಣ್ ಹೇಳಿದ್ದೇನು?
ಆಗಿನ ಬೆಂಗಳೂರು ನಗರ ಡಿಸಿ ಜೆಸಿ ಪ್ರಕಾಶ್ ಹೈಕೋರ್ಟ್ ಕೇಸ್ ನಂಬರ್ ಅನ್ನೇ ಫೋರ್ಜರಿ ಮಾಡಿ ಸಾಗುವಳಿ ಭೂಮಿಯನ್ನ ಕೆರೆ ಎಂದು ಬದಲಾವಣೆ ಮಾಡಿದ್ದರು. 4 ಎಕರೆ ಕೆರೆಯನ್ನ 24 ಎಕರೆ ಕೆರೆ ಅಂತಾ ಘೋಷಣೆ ಆಗಿದೆ. ಆದ್ರೆ ಇದೇ ಸರ್ವೇ ನಂಬರ್ನಲ್ಲಿ ಈಗಾಗಲೇ ಸಾವಿರಾರು ಮನೆಗಳಿವೆ. ಈಗಲೂ ಖಾತಾ ಮಾಡಿಸಿದರೆ ಸರ್ವೇ ನಂಬರ್ 120 ಎಂದು ಬರುತ್ತದೆ. ಇವತ್ತು ಈ ಏರಿಯಾದಲ್ಲಿ 1 ಚದರಡಿಗೆ 18 ಸಾವಿರ ರೂಪಾಯಿ ಬೆಲೆ ಇದೆ. ಏನಿಲ್ಲಾ ಅಂದ್ರು ಬರೋಬ್ಬರಿ 800 ಕೋಟಿ ರೂಪಾಯಿ ಹಗರಣ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ.
ವಾಸ್ತವದಲ್ಲಿ ಹೈಕೋರ್ಟ್ನ ಕೇಸ್ ನಂಬರ್ ಆದೇಶಕ್ಕೂ ಸುಬ್ರಮಣ್ಯಪುರ ಕೆರೆಗೂ ಯಾವುದೇ ಸಂಬಂಧ ಇಲ್ಲ. ಇದು ಒಬ್ಬ ಖಾಸಗಿ ಬಿಲ್ಡರ್ ಮತ್ತು ಆತನ ಜಾಗದಲ್ಲಿ ಅನಧಿಕೃತವಾಗಿ ನಿರ್ಮಿಸಿದ್ದ ಶೆಡ್ ಗಳ ತೆರವಿಗೆ ಕೋರ್ಟ್ ನೀಡಿದ ಆದೇಶವಾಗಿದೆ. ಕೋರ್ಟ್ ಆದೇಶಗಳನ್ನೇ ತಪ್ಪಾಗಿ ಉಲ್ಲೇಖಿಸಿ ಭೂಗಳ್ಳರಿಗೆ ಸಹಾಯ ಮಾಡಲು ಸರ್ಕಾರಿ ಜಮೀನು ಲಪಟಾಯಿಸಲಾಗಿದೆ. ಸದ್ಯ ಈ ಕುರಿತು ಲೋಕಾಯುಕ್ತಕ್ಕೆ ದೂರು ನೀಡಲು ಸಾಮಾಜಿಕ ಕಾರ್ಯಕರ್ತ ನಾರಾಯಣಪ್ಪ ಮುಂದಾಗಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ