/newsfirstlive-kannada/media/media_files/2025/08/18/bng_wilson_garden-2025-08-18-18-58-34.jpg)
ಬೆಂಗಳೂರು: ನಗರದ ವಿಲ್ಸನ್ ಗಾರ್ಡನ್ ಸಿಲಿಂಡರ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೇ ಬಾಲಕಿ ಕಯಲ್ (8) ನಿಧನ ಆಗಿದ್ದಾಳೆ. ಘಟನೆಯಲ್ಲಿ ಬಾಲಕ ಮುಬಾರಕ್ ಬಳಿಕ ಜೀವ ಬಿಟ್ಟ ಕಯಲ್ 2ನೇಯವರು ಆಗಿದ್ದಾರೆ.
ಸ್ವಾತಂತ್ರ್ಯ ದಿನಾಚರಣೆಯಂದೇ ವಿಲ್ಸನ್ ಗಾರ್ಡನ್‌ನ ಮನೆಯೊಂದರಲ್ಲಿ ಸಿಲಿಂಡರ್ ಸ್ಫೋಟಗೊಂಡು ಕಯಲ್ ಗಂಭೀರವಾಗಿ ಗಾಯಗೊಂಡಿದ್ದಳು. ತಕ್ಷಣ ಬಾಲಕಿಯನ್ನ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೇ ಬಾಲಕಿ ಕಣ್ಮುಚ್ಚಿದ್ದಾಳೆ. ಘಟನೆ ನಡೆದು ಮೂರನೇ ದಿನಕ್ಕೆ ಕಯಲ್ ಆಸ್ಪತ್ರೆಯಲ್ಲಿ ಜೀವ ಬಿಟ್ಟಿದ್ದಾಳೆ.
ಇದನ್ನೂ ಓದಿ:ಧರ್ಮಸ್ಥಳದಲ್ಲಿ ಆನೆ ಮಾವುತ, ಯಮುನಾ ಕೇಸ್​.. SITಗೆ ದೂರು, ಸ್ಫೋಟಕ ಮಾಹಿತಿ ಬಿಚ್ಚಿಟ್ಟ ಗಣೇಶ್
ಆಗಸ್ಟ್ 15 ರಂದು ವಿಲ್ಸನ್ ಗಾರ್ಡನ್‌ನ ಮನೆಯಲ್ಲಿ ಸಿಲಿಂಡರ್ ಸ್ಫೋಟಗೊಂಡು ಓರ್ವ ಬಾಲಕ ಜೀವ ಕಳೆದುಕೊಂಡಿದ್ದನು. ಇದರ ಜೊತೆಗೆ 9 ಮಂದಿ ಗಂಭೀರವಾಗಿ ಗಾಯಗೊಂಡಿದ್ದರು. ಪ್ರಾಣ ಕಳೆದುಕೊಂಡ ಬಾಲಕನ ಕುಟುಂಬಕ್ಕೆ ಸಿಎಂ ಸಿದ್ದರಾಮಯ್ಯ ಅವರು 5 ಲಕ್ಷ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದರು. ಅದರಂತೆ ಗಾಯಾಳುಗಳ ಆಸ್ಪತ್ರೆಯ ಖರ್ಚು ಸರ್ಕಾರ ನೋಡಿಕೊಳ್ಳುತ್ತದೆ ಎಂದು ಘಟನೆ ಸ್ಥಳಕ್ಕೆ ಭೇಟಿ ನೀಡಿದ್ದ ವೇಳೆ ಹೇಳಿದ್ದರು.
ಮನೆ ಕಸ್ತೂರಮ್ಮ ಎನ್ನುವರದ್ದು ಆಗಿದೆ. ಘಟನೆಯಲ್ಲಿ ಕಸ್ತೂರಮ್ಮ ಕೂಡ ತೀವ್ರವಾಗಿ ಗಾಯಗೊಂಡಿದ್ದು ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಸುಬ್ರಹ್ಮಣಿ (62) ಅಗಡಿ ಆಸ್ಪತ್ರೆ ಹಾಗೂ ಶೇಕ್ ನಜೀಬ್ ಉಲ್ಲಾ (37) ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಫಾತೀಮಾ (8), ಸರಸಮ್ಮ (50), ಶಬ್ರೀನಾ ಬಾನು (35) ಸಂಜಯ್ ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದರಲ್ಲಿ ಕಯಲ (8) ಇಂದು ನಿಧನ ಆಗಿದ್ದಾರೆ. ಸ್ಫೋಟದ ತೀವ್ರತೆಗೆ ಮನೆ ಎಲ್ಲ ಧ್ವಂಸವಾಗಿ, ಅಕ್ಕಪಕ್ಕದ 13 ಮನೆಗಳು ಹಾನಿ ಆಗಿದ್ದವು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ