/newsfirstlive-kannada/media/media_files/2025/10/17/rakshitha_bbk12-1-2025-10-17-22-54-39.jpg)
ಬಿಗ್‌ಬಾಸ್ ಮನೆಯಲ್ಲಿ ಅರ್ಧಂಬರ್ಧ ಕನ್ನಡ ಮಾತಾಡಿಕೊಂಡು ಎಲ್ಲರ ಮೆಚ್ಚುಗೆ ಗಳಿಸಿದ್ದ ರಕ್ಷಿತಾ, ಬಂದ ಎರಡೇ ವಾರದಲ್ಲೇ ಮನೆಯ ಸ್ಪರ್ಧಿಗಳ ಇನ್ನೊಂದು ಮುಖವನ್ನು ಕಾಣುವಂತಾಗಿದೆ. ಒಂದು ವಾರ ತಡವಾಗಿ ಬಿಗ್‌ಬಾಸ್ ಮನೆಗೆ ಎಂಟ್ರಿಕೊಟ್ಟ ರಕ್ಷಿತಾ ಶೆಟ್ಟಿ ತಮ್ಮ ಮಾತು, ತಮ್ಮ ಆಟದಿಂದ ಈ ಚಿನಕುರುಳಿ ನೋಡಿದಷ್ಟು ಸಿಂಪಲ್ ಅಲ್ಲ. ಆಟದ ವಿಚಾರಕ್ಕೆ ಬಂದರೆ ಟಫ್ ಇದ್ದಾಳೆ ಅನ್ನೋದು ಎಲ್ಲರಿಗೂ ಅರ್ಥವಾಗುವಂತೆ ಮಾಡಿದ್ದಳು. ಇಂತಹ ರಕ್ಷಿತಾ ಈ ವಾರ ಎಲ್ಲರ ಟಾರ್ಗೆಟ್ ಆಗುತ್ತಿದ್ದಾಳೆ.
ಜಾಹ್ನವಿ ಹಾಗೂ ಅಶ್ವಿನಿ ಜೊತೆಗೆ ಜಗಳ, ರಾರಾ ಹಾಡು ಡ್ಯಾನ್ಸ್, ಗೆಜ್ಜೆ ಸದ್ದು ಇವೆಲ್ಲವನ್ನೂ ಮೀರಿ ಇವತ್ತಿನ ಬಿಗ್‌ಬಾಸ್ ಪತ್ರಿಕಾಗೋಷ್ಟಿಯಲ್ಲಿ ಎಲ್ಲರ ಟಾರ್ಗೆಟ್ ಆಗಿದ್ದಾಳೆ. ರಕ್ಷಿತಾ ಸೀಟ್‌ನಲ್ಲಿ ಹೋಗಿ ಕುಳಿತುಕೊಳ್ಳುತ್ತಿದ್ದಂತೆಯೇ ಎಲ್ಲರೂ ಅವಳನ್ನು ರೋಸ್ಟ್ ಮಾಡೋಕೆ ಶುರು ಮಾಡಿದ್ದಾರೆ.
ಯಾಕೆ ಇಷ್ಟು ಇನೋಸೆಂಟ್ ಫೇಸ್ ಮಾಡ್ಕೊಂಡಿದ್ದೀರಾ? ಅಂತ ರಾಶಿಕಾ ಕೇಳೋ ಪ್ರಶ್ನೆಗೆ ಉತ್ತರಿಸುವ ರಕ್ಷಿತಾ ನಾನು ಇನೋಸೆಂಟೇ ಎಂದು ಹೇಳುತ್ತಾಳೆ. ಇದರಿಂದ ಗರಂ ಆಗೋ ಅಶ್ವಿನಿ ಗೌಡ ಮತ್ತೆ ರಕ್ಷಿತಾಳನ್ನು ರೋಸ್ಟ್ ಮಾಡೋಕೆ ಶುರು ಮಾಡುತ್ತಾರೆ. ಇನ್ನೋಸೆನ್ಸ್ ಅನ್ನುವುದೇ ನಿನ್ನ ಸ್ಟ್ರಾಟಜಿನಾ? ನಿನಗೆ ಮನೆಯಲ್ಲಿರುವ ಉಳಿದವರಿಗೆ ಗೌರವ ಕೊಡಬೇಕು ಅನ್ನೋದೆ ತಿಳಿದಿಲ್ವಾ ಹೀಗೆ ಸಾಲು ಸಾಲು ಪ್ರಶ್ನೆಗಳನ್ನು ಕೇಳಿ ರಕ್ಷಿತಾರನ್ನೇ ಕಕ್ಕಾಬಿಕ್ಕಿ ಮಾಡಿ ಹಾಕುತ್ತಾರೆ.
ಕಾಕ್ರೋಚ್ ಸುಧಿಯಂತೂ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ನಿನ್ನ ಆಟ ಬೆಳಗ್ಗಿಗಿಂತ ರಾತ್ರಿ ಹೊತ್ತೆ ಜಾಸ್ತಿಯಾಗ್ತಿದೆ ಅಂತ ಕೇಳಿದ್ದೆ, ನೀವು ಬಿಗ್‌ಬಾಸ್ ಮನೆಗೆ ಬರೋ ಬದಲು ಯಾವುದಾದರೂ ಝೂ ಗಾರ್ಡನ್‌ನಲ್ಲಿ ಕೆಲಸಕ್ಕೆ ಹೋಗಬಹುದಿತ್ತು ಎಂದು ಖಾರವಾಗಿಯೇ ಹೇಳಿದ್ದಾರೆ. ಮಾತ್ರವಲ್ಲ ನಮಗೂ ನಿಮ್ಮನ್ನು ಈ ಮನೆಯಲ್ಲಿ ಉಳಿಸಿಕೊಳ್ಳೋಕೆ ಇಷ್ಟನೇ ಇಲ್ಲ ಎಂದು ಮುಖಕ್ಕೆ ಹೊಡೆದಂತೆ ಹೇಳಿದ್ದಾರೆ. ರಕ್ಷಿತಾ ಎಲ್ಲರಿಂದಲೂ ಇಷ್ಟು ಟಾರ್ಗೆಟ್ ಆಗುತ್ತಿರುವುದೇಕೆ? ಇದರ ಹಿಂದೆ ಫೈನಲಿಸ್ಟ್‌ಗಳ ಸ್ಟ್ರಾಟಜಿ ಏನಾದ್ರೂ ಇದೆಯಾ?.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ