Advertisment

QR ಕೋಡ್​​ ಸ್ಕ್ಯಾನ್​ಗೆ ಇನ್ಮುಂದೆ ಮೊಬೈಲ್​ ಬೇಕಿಲ್ಲ.. ನಿಮ್ಮ ಕಣ್ಣುಗಳಿಂದಲೇ​ ಮಾಡಬಹುದು, ಹೇಗೆ?

ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್ ಕೆಲವೇ ತಿಂಗಳಲ್ಲಿ ಮಾರ್ಕೆಟ್​ಗೆ ಬರಲಿದೆ. ಇದರ ವಿಶೇಷ ಎಂದರೆ ಇದು ಯುಪಿಐ ಕ್ಯೂಆರ್​ ಕೋಡ್​ ಪ್ಯುಚರ್​ಗಳನ್ನು ಒಳಗೊಂಡಿರಲಿದೆ. ಬಳಕೆದಾರರು ಈ ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್ ಮೂಲಕ ಕ್ಯೂಆರ್​ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು.

author-image
Bhimappa
PHONE_PAY
Advertisment

ಹೈದರಾಬಾದ್: ವಿಶ್ವದಲ್ಲಿ ತಂತ್ರಜ್ಞಾನ ಹೊಸ ಹೊಸ ಆವಿಷ್ಕಾರಗಳಿಗೆ ಕಾರಣವಾಗುತ್ತಿದೆ. ದಿನದಿಂದ ದಿನಕ್ಕೆ ಕಲಾತ್ಮಕ ರಚನೆ ಸೃಷ್ಟಿಯಾಗುತ್ತಿದ್ದು ಮನುಷ್ಯ ಅಂದುಕೊಂಡಿದ್ದಕ್ಕಿಂತ ದೊಡ್ಡದನ್ನೇ ಸಾಧನೆ ಮಾಡುತ್ತಿದ್ದಾನೆ. ಇದಕ್ಕೆ ಸಾಕ್ಷಿ ಎಂಬಂತೆ, ನಾವು ಕಣ್ಣುಗಳಿಗೆ ಧರಿಸುವ ಕನ್ನಡಕದಿಂದಲೇ ಯುಪಿಐ ಕ್ಯೂಆರ್​ ಕೋಡ್​ ಅನ್ನು ಸ್ಕ್ಯಾನ್ ಮಾಡಬಹುದಾದ ಸ್ಮಾರ್ಟ್​ಗ್ಲಾಸ್​ಗಳು ಕೆಲವೇ ತಿಂಗಳಲ್ಲಿ ಮಾರ್ಕೆಟ್​ಗೆ ಬರುತ್ತಿವೆ. 

Advertisment

ಕನ್ನಡಕ ಕಂಪನಿಯಾದ ಲೆನ್ಸ್​ಕಾರ್ಟ್​ (Lenskart) ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್​ ಇತ್ತೀಚೆಗೆ ಅನೌನ್ಸ್​ ಮಾಡಿದೆ. ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್ ಕೆಲವೇ ತಿಂಗಳಲ್ಲಿ ಮಾರ್ಕೆಟ್​ಗೆ ಬರಲಿದೆ. ಇದರ ವಿಶೇಷ ಎಂದರೆ ಇದು ಯುಪಿಐ ಕ್ಯೂಆರ್​ ಕೋಡ್​ ಪ್ಯುಚರ್​ಗಳನ್ನು ಒಳಗೊಂಡಿರಲಿದೆ. ಬಳಕೆದಾರರು ಈ ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್ ಮೂಲಕ ಕ್ಯೂಆರ್​ ಕೋಡ್ ಅನ್ನು ಸ್ಕ್ಯಾನ್ ಮಾಡಬಹುದು. ಜೊತೆಗೆ ತಮ್ಮ ಧ್ವನಿ ದೃಢಿಕರಣ ಮೂಲಕ ಅತಿ ಬೇಗನೆ ಹಣ ಪಾವತಿ ಮಾಡಬಹುದು. ಇದಕ್ಕೆ  ಮೊಬೈಲ್ ಅವಶ್ಯಕತೆನೇ ಇಲ್ಲ ಎಂದು ಹೇಳಲಾಗಿದೆ. 

ಇದನ್ನೂ ಓದಿ: ವಿದ್ಯಾರ್ಥಿಗಳಿಗೆ ಅವಕಾಶಗಳ ಹೆಬ್ಬಾಗಿಲು ಬೆಂಗಳೂರು.. ಸಿಲಿಕಾನ್ ಸಿಟಿ ಬಗ್ಗೆ ಅಶ್ವಥ್ ನಾರಾಯಣ್ ಪ್ರಶಂಸೆ

PHONE_PAY_New

ಮುಂಬೈನ ಬಂದ್ರಾ ಕುರ್ಲಾ ಜಿಯೋ ವರ್ಲ್ಡ್​ ಸೆಂಟರ್ ಕಾಂಪ್ಲೆಕ್ಸ್​ನಲ್ಲಿ ಆಯೋಜನೆ ಮಾಡಿದ್ದ ಜಾಗತಿಕ ಫಿನ್‌ಟೆಕ್ ಉತ್ಸವ 2025 (ಜಿಎಫ್​ಎಫ್​) ಸಮಾರಂಭದಲ್ಲಿ ಈ B Camera smartglasses ಅನ್ನು ಅನಾವರಣಗೊಳಿಸಲಾಗಿದೆ. ಭಾರತದಲ್ಲಿ ಪರಿಚಯಿಸಲಾಗುತ್ತಿರುವ ಮೊಟ್ಟ ಮೊದಲ UPI ಪಾವತಿ ಮಾಡುವ ಸ್ಮಾರ್ಟ್‌ಗ್ಲಾಸ್‌ ಇವು ಆಗಿವೆ. 

Advertisment

ಬಿ ಕ್ಯಾಮೆರಾ ಸ್ಮಾರ್ಟ್​ಗ್ಲಾಸಸ್ ಭಾರತೀಯ ರಾಷ್ಟ್ರೀಯ ಪಾವತಿ ನಿಗಮದ (ಎನ್​​ಪಿಸಿಐ) ಯುಪಿಐ ಸಂಬಂಧಿಸಿವೆ. ಇವು ಎಲ್ಲ ರೀತಿಯ ಸುರಕ್ಷತೆಯೊಂದಿಗೆ ಬ್ಯಾಂಕ್ ಅಕೌಂಟ್​ಗೆ ಲಿಂಕ್ ಹೊಂದಿರುತ್ತದೆ.  ಸ್ಮಾರ್ಟ್​ಗ್ಲಾಸ್ ಯಾವುದೇ ಹಣ ಪೋಲು ಆಗದಂತೆ ಸೆಕ್ಯೂರಿಟಿ ಹೊಂದಿವೆ. ಒಂದು ಬಾರಿ ಕನೆಕ್ಟ್ ಆದ ಮೇಲೆ ಜಸ್ಟ್​ ನೀವು ನೋಡಿದರೆ ಸಾಕು ಅದರಲ್ಲಿರುವ ಕ್ಯಾಮೆರಾ ಕ್ಯೂಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುತ್ತದೆ. ಬಳಿಕ ತಮ್ಮ ಧ್ವನಿ ಮೂಲಕ ಹಣ ಪಾವತಿ ಮಾಡಬಹುದು. ಇಲ್ಲಿ ಫೋನ್ ಬಳಕೆ ಅಥವಾ ಪಿನ್ ನಂಬರ್ ಹಾಕುವ ಅವಶ್ಯಕತೆನೂ ಇಲ್ಲ. 

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

UPI Kannada News Smartglasses
Advertisment
Advertisment
Advertisment