/newsfirstlive-kannada/media/media_files/2025/08/11/raichuru-2025-08-11-11-39-10.jpg)
ರಾಯಚೂರು: ನೂತನ ದೇವಾಲಯ ನಿರ್ಮಾಣಕ್ಕೆಂದು ಭಿಕ್ಷುಕಿ ಬರೋಬ್ಬರಿ 1.83 ಲಕ್ಷ ದೇಣಿಗೆ ನೀಡಿರೋ ಘಟನೆ ಬಿಜನಗೇರಾ ಗ್ರಾಮದಲ್ಲಿ ನಡೆದಿದೆ. ಆಂಜನೇಯ ದೇವಾಲಯಕ್ಕೆ ದೇಣಿಗೆ ನೀಡಿದ ವೃದ್ಧೆ ಹೆಸರು ರಂಗಮ್ಮ.
ಇದನ್ನೂ ಓದಿ:ವಿದ್ಯಾರ್ಥಿಗಳಿಗೆ ಭರ್ಜರಿ ಗುಡ್ನ್ಯೂಸ್.. ಪುಸ್ತಕ ನೋಡಿಕೊಂಡು ಪರೀಕ್ಷೆ ಬರೆಯಲು ಅವಕಾಶ
ಹೌದು, ರಂಗಮ್ಮ ಸುಮಾರು ವರ್ಷಗಳಿಂದ ಬಿಜನಗೇರಾ ಗ್ರಾಮದಲ್ಲಿ ವಾಸಿಸುತ್ತಿರುವ ನಿರ್ಗತಿಕ ವೃದ್ಧೆ. ಇಲ್ಲಿಯವರೆಗೆ ಈಕೆಗೆ ಊರಿನವರೇ ಊಟ, ಬಟ್ಟೆ ಕೊಡುತ್ತಾ ಬಂದಿದ್ದಾರೆ. ಈ ಹಿಂದೆ ಭಿಕ್ಷೆ ಬೇಡಿದ್ದ 25-30 ಸಾವಿರ ಹಣದಿಂದ ಗ್ರಾಮಸ್ಥರು ಪುಟ್ಟ ಸೂರು ಮಾಡಿಕೊಟ್ಟಿದ್ದರು.
ಇದೀಗ ದಾರಿಹೋಕರು, ಆಟೋ ರಿಕ್ಷಾ ಚಾಲಕರು, ಟಂ ಟಂ ಚಾಲಕರು ನೀಡುವ ಭಿಕ್ಷೆ ಹಣವನ್ನೇ ನೂತನ ದೇವಾಲಯ ನಿರ್ಮಾಣಕ್ಕೆಂದು ದೇಣಿಗೆ ನೀಡಿದ್ದಾಳೆ. ಭಿಕ್ಷಾಟನೆ ದುಡ್ಡನ್ನು ಗಂಟು ಕಟ್ಟಿಕೊಂಡು ಇಟ್ಟಿದ್ದರು. ಇದೇ ಹಣವನ್ನು ವೃದ್ಧೆ ಆಂಜನೇಯ ದೇವಾಲಯ ನಿರ್ಮಾಣಕ್ಕೆಂದು ಕೊಟ್ಟಿದ್ದಾಳೆ. ಗ್ರಾಮಸ್ಥರೆಲ್ಲಾ ಹಣವನ್ನ ಎಣಿಸಿ ಅಚ್ಚರಿ ವ್ಯಕ್ತಪಡಿಸಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ