/newsfirstlive-kannada/media/media_files/2025/11/07/belagavi-protest-2025-11-07-16-40-40.jpg)
ಬೆಳಗಾವಿಯಲ್ಲಿ ಕಬ್ಬಿಗೆ ಬೆಂಬಲ ಬೆಲೆ ನಿಗದಿ ಪಡಿಸುವಂತೆ ಆಗ್ರಹಿಸಿ ಅನ್ನದಾತರು ನಡೆಸುತ್ತಿರುವ ಹೋರಾಟ ತೀವ್ರ ಸ್ಪರೂಪ ಪಡೆದುಕೊಂಡಿದೆ. ರೈತರು 215 ರಾಷ್ಟ್ರೀಯ ಹೆದ್ದಾರಿಯನ್ನ ಬಂದ್​ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ರು.
ಗದ್ದನಕೇರಿ ಕ್ರಾಸ್​​ನಲ್ಲಿ ರಸ್ತೆಯಲ್ಲಿ ಕೂತು ಪ್ರತಿಭಟಿಸುವ ಮೂಲಕ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ರು. ಹತ್ತರಗಿ ಟೋಲ್​ಗೆ ವಾಹನಗಳನ್ನ ಅಡ್ಡ ನಿಲ್ಲಿಸಿದ ರೈತರು ಸಂಪೂರ್ಣ ಸಂಚಾರವನ್ನ ಬಂದ್​ ಮಾಡಿದ್ರು. ಈ ವೇಳೆ ಕೆಲ ಕಿಡಿಗೇಡಿಗಳು ಕಲ್ಲತೂರಾಟ ನಡೆಸಿದ್ದಾರೆ. ಪೊಲೀಸರ ವಾಹನದ ಮೇಲೆ ಕಲ್ಲು ತೂರಾಟ ನಡೆದಿದೆ. ಕಲ್ಲುತೂರಾಟದಿಂದ ಸ್ಥಳದಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
/filters:format(webp)/newsfirstlive-kannada/media/media_files/2025/11/06/farmer_protest-2025-11-06-07-41-36.jpg)
ಲಾಟಿ ಚಾರ್ಜ್
ಪ್ರತಿಭಟನೆ ವೇಳೆ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳು ಪೊಲೀಸರನ್ನ 1 ಕಿಲೋ ಮೀಟರ್ ದೂರದವರೆಗೂ​ ಅಟ್ಟಾಡಿಸಿದ್ದಾರೆ. ಈ ಕಲ್ಲು ತೂರಾಟದಿಂದ ನೂರಾರು ವಾಹನಗಳ ಗಾಜು ಪುಡಿ ಪುಡಿಯಾಗಿದೆ. ರೈತ ಆಕ್ರೋಶಕ್ಕೆ ಬೆದರಿ ಪರಿಸ್ಥತಿ ತಿಳಿಗೊಳಿಸಲು ಪೊಲೀಸರಿಂದ ಪ್ರತಿಭಟನಾಕಾರರ ಮೇಲೆ ಲಾಟಿ ಚಾರ್ಜ್ ಸಹ ಮಾಡಿದ್ದಾರೆ.ಸದ್ಯ ಕಲ್ಲು ತೂರಾಟ ನಡೆಸಿದ ಕೆಲವರನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಪೊಲೀಸರಿಂದ ಥಳಿತ
ಹತ್ತರಗಿ ಟೋಲ್ ಬಳಿ ಪ್ರತಿಭಟನೆ ವೇಳೆ ವಾಹನ ಚಾಲಕನಿಗೆ ಪೊಲೀಸರು ಥಳಿಸಿರೋ ಘಟನೆ ಸಹ ನಡೆದಿದೆ.. ಪುಣೆ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ರೈತ ಮುಖಂಡರು ಭಾಷಣ ಮಾಡ್ತಿದ್ರು.. ಈ ವೇಳೆ ಹುಕ್ಕೇರಿ ಸಿಪಿಐ ಮೈಕ್ ಬಂದ್ ಮಾಡಿ, ವಾಹನವನ್ನರಸ್ತೆಯಿಂದ ತೆಗೆದುಕೊಂಡು ಹೋಗಲು ಸೂಚನೆ ನೀಡಿದ್ದಾರೆ.. ಆದ್ರೆ ವಾಹನ ಚಾಲಕ ಪೊಲೀಸರ ಸೂಚನೆ ಪಾಲಿಸಿಲ್ಲ.. ಇದ್ರಿಂದ ಸಿಟ್ಟಿಗೆದ್ದ ಪೊಲೀಸ್​ ಸಿಬ್ಬಂದಿ ವಾಹನ ಚಾಲಕನನ್ನ ಹಿಡಿದು ಥಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/06/farmers_protest-2025-11-06-07-39-42.jpg)
ಕಲ್ಲು ತೂರಿದ್ದು ಕಿಡಿಗೇಡಿಗಳು
ಕಲ್ಲು ತೂರಾಟ ನಡೆದ ಸ್ಥಳಕ್ಕೆ ಆಗಮಿಸಿದ ರೈತ ನಾಯಕ ಚುನ್ನಪ್ಪ ಪೂಜಾರಿಕಲ್ಲು ತೂರಾಟ ಮಾಡಿದವರು ನಮ್ಮ ರೈತರಲ್ಲ, ಕಿಡಿಗೇಡಿಗಳು ಅಂತ ಸ್ಪಷ್ಟನೆ ನೀಡಿದ್ದಾರೆ.. ರೈತರು ಶಾಂತಿಯುತವಾಗಿ ಪ್ರತಿಭಟನೆ ಮಾಡಬೇಕು.. ನ್ಯಾಯ ಸಿಗುತ್ತದೆ ಎನ್ನುವ ಭರವಸೆ ಇದೆ ಎಂದು ನ್ಯೂಸ್​ ಫಸ್ಟ್​ಗೆ ಚುನ್ನಪ್ಪ ಪೂಜಾರಿ ಹೇಳಿದ್ದಾರೆ.
ಎಸ್​ಪಿ ಸ್ಥಳಕ್ಕೆ ಭೇಟಿ..
ರೈತರ ಆಕ್ರೋಶವನ್ನ ಕಂಟ್ರೋಲ್ ಮಾಡೋದಕ್ಕೆ ಎಸ್​ಪಿ ಭೀಮಶಂಕರ್ ಗುಳೇದ್ ಭೇಟಿ ನೀಡಿದ್ದಾರೆ.ಎಸ್​ಪಿ ಭೀಮಶಂಕರ್ ಗುಳೇದ್ ಮಾತನಾಡಿದ್ದು, ನಮ್ಮ ಪೊಲೀಸರು ರಸ್ತೆ ತಡೆ ಮಾಡಿರುವುದನ್ನ ಕಂಟ್ರೋಲ್ ಮಾಡ್ತಿದ್ರು..ಆದ್ರೇ ನಮ್ಮ ಪೊಲೀಸರಿಗೆ ಕಲ್ಲು ತೂರಾಟ ಮಾಡಿದ್ದಾರೆ.ಹೋರಾಟ ಶಾಂತಿಯುತವಾಗಿರಲಿನಮಗೆ ಸಹಕಾರ ಕೊಟ್ಟರೆ, ನಾವು ಸಹಕಾರ ಕೊಡ್ತೀವಿ.
/filters:format(webp)/newsfirstlive-kannada/media/media_files/2025/11/05/farmer-protest-1-2025-11-05-08-18-40.jpg)
ಸ್ವಯಂ ಪ್ರೇರಿತವಾಗಿ ಕಾನೂನನ್ನ ಕೈಗೆ ತೆಗೆದುಕೊಳ್ಳಬಾರದಿತ್ತು. 6 ರಿಂದ 7 ಜನ ಪೊಲೀಸರಿಗೆ ಕಲ್ಲು ತೂರಾಟದಿಂದ ಗಾಯಗಳಾಗಿದೆ.ಮುನ್ನೆಚ್ಚರಿಕ ಕ್ರಮವಾಗಿಯೇ ನಾವು ಸಿಸಿಟಿವಿ ಅಳವಡಿಕೆ ಮಾಡಿದ್ದೇವೆ ಕಲ್ಲು ತೂರಾಟ ಮಾಡಿದವರು ಯಾರೆಂದು ನಮಗೆ ಗೊತ್ತಾಗುತ್ತದೆ. ಅಮಾಯಕರಿಗೆ ತೊಂದರೆ ಯಾಗದಂತೆ ನೋಡಿಕೊಳ್ತೀವಿ.
ಇದನ್ನೂ ಓದಿ: ಚಿತ್ತಾಪುರ ಆರ್‌ಎಸ್ಎಸ್ ಪಥ ಸಂಚಲನ ವಿವಾದ: ಎಲ್ಲರಿಗೂ ಪ್ರತೇಕ ದಿನ ಮೆರವಣಿಗೆಗೆ ಅವಕಾಶ ಕೊಡುತ್ತೇವೆ ಎಂದ ಸರ್ಕಾರ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us