ಸಿಎಂ‌ ಆಪ್ತರ ಡಿನ್ನರ್ ಸಭೆ​ಗೆ ಡಿಕೆಶಿ ಆಪ್ತರು ಕೌಂಟರ್.. 30ಕ್ಕೂ ಹೆಚ್ಚು ಶಾಸಕರು ಭಾಗಿ..!

ಸಿಎಂ‌ ಆಪ್ತರ ಡಿನ್ನರ್ ಸಭೆ​ಗೆ ಡಿಕೆಶಿ ಆಪ್ತರು ಕೌಂಟರ್ ನೀಡಿದ್ದಾರೆ. ನಿನ್ನೆ ರಾತ್ರಿ ಡಿಕೆಶಿ ನೇತೃತ್ವದಲ್ಲಿ ಔತಣಕೂಟ ನಡೆದಿದ್ದು, ಆಪ್ತ ಸಚಿವರು, ಶಾಸಕರ ಜೊತೆಗೆ ಉಪಮುಖ್ಯಮಂತ್ರಿಗಳು ಮೀಟಿಂಗ್ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಸಭೆಯಲ್ಲಿ 30ಕ್ಕೂ ಅಧಿಕ ಶಾಸಕರು, ಸಚಿವರು ಭಾಗಿಯಾಗಿದ್ದರು.

author-image
Ganesh Kerekuli
Dinner meeting (1)
Advertisment
  • ಡಿನ್ನರ್​ ಪಾಲಿಟಿಕ್ಸ್​ಗೆ ಹಾಟ್​ಸ್ಪಾಟ್​ ಆಯ್ತು ಬೆಳಗಾವಿ
  • ಸಿಎಂ‌ ಆಪ್ತರ ಡಿನ್ನರ್ ಸಭೆ​ಗೆ ಡಿಕೆಶಿ ಆಪ್ತರು ಕೌಂಟರ್
  • ಸಭೆಯಲ್ಲಿ 30ಕ್ಕೂ ಅಧಿಕ ಶಾಸಕರು, ಸಚಿವರು ಭಾಗಿ

ಬೆಳಗಾವಿ ಸುವರ್ಣ ಸೌಧದಲ್ಲಿ ಚಳಿಗಾಲದ ಅಧಿವೇಶನ ನಡೆಯುತ್ತಿದೆ. ಕಲಾಪದಲ್ಲಿ ನಡೆಯುವ ಚರ್ಚೆಗಳಿಂತ ಕರ್ನಾಟಕ ಕಾಂಗ್ರೆಸ್​ನಲ್ಲಿ ನಡೆಯುತ್ತಿರುವ ಬೆಳವಣಿಗೆಗಳೇ ಹೆಚ್ಚು ಕೊಲಾಹಲಕ್ಕೆ ಎಡೆಮಾಡಿಕೊಟ್ಟಿವೆ. ಸಿಎಂ ಸಿದ್ದರಾಮಯ್ಯರ ಅಹಿಂದ ನಾಯಕರ ಡಿನ್ನರ್ ಪಾರ್ಟಿಗೆ ಕೌಂಟರ್​ ಆಗಿ ನಿನ್ನೆ ರಾತ್ರಿ ಮತ್ತೊಂದು ಭೋಜನಕೂಟ ನಡೆದಿದೆ. 

ಸಿಎಂ‌ ಆಪ್ತರ ಡಿನ್ನರ್ ಸಭೆ​ಗೆ ಡಿಕೆಶಿ ಆಪ್ತರು ಕೌಂಟರ್ ನೀಡಿದ್ದಾರೆ. ನಿನ್ನೆ ರಾತ್ರಿ ಡಿಕೆಶಿ ನೇತೃತ್ವದಲ್ಲಿ ಔತಣಕೂಟ ನಡೆದಿದ್ದು, ಆಪ್ತ ಸಚಿವರು, ಶಾಸಕರ ಜೊತೆಗೆ ಉಪಮುಖ್ಯಮಂತ್ರಿಗಳು ಮೀಟಿಂಗ್ ನಡೆಸಿದ್ದಾರೆ. ಮಾಹಿತಿಗಳ ಪ್ರಕಾರ ಸಭೆಯಲ್ಲಿ 30ಕ್ಕೂ ಅಧಿಕ ಶಾಸಕರು, ಸಚಿವರು ಭಾಗಿಯಾಗಿದ್ದರು. 

ಇದನ್ನೂ ಓದಿ:ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಮತ್ತೆ ಕ್ರಿಕೆಟ್ ಪಂದ್ಯಗಳ ನಡೆಸಲು ಗ್ರೀನ್ ಸಿಗ್ನಲ್..!

ಬೆಳಗಾವಿಯ ಹೊರ ವಲಯದಲ್ಲಿರುವ ಪ್ರವೀಣ್ ದೊಡ್ಡಣ್ಣವರ್ ಫಾರ್ಮ್ ಹೌಸ್​ನಲ್ಲಿ ಮೀಟಿಂಗ್ ನಡೆದಿದೆ. ಮೈನಿಂಗ್ ಉದ್ಯಮಿ ಆಗಿರುವ ದೊಡ್ಡಣ್ಣವರ್, ಡಿಸಿಎಂ ಡಿಕೆ ಶಿವಕುಮಾರ್ ಅವರ ಆಪ್ತರಾಗಿದ್ದಾರೆ. ಡಿ.ಕೆ ಸುರೇಶ್, ಡಿನ್ನರ್ ವ್ಯವಸ್ಥೆಯನ್ನು ನೋಡಿಕೊಂಡಿದ್ದಾರೆ. ನಿನ್ನೆ ಡಿಕೆ ಸಹೋದರ ಸುರೇಶ್ ಬೆಳಗಾವಿ ಬಂದಿದ್ದರು. ಸಿಎಂ ಸಿದ್ದರಾಮಯ್ಯ ಆಪ್ತರನ್ನ ಈ ಮೀಟಿಂಗ್​​ಗೆ ಕರೆದಿಲ್ಲ. ಸಿಎಂ ಬಣದ ಆಪ್ತರನ್ನ ಆಹ್ವಾನಿಸದೆ ಡಿನ್ನರ್ ಪಾರ್ಟಿ ಆಯೋಜನೆಗೊಂಡಿದ್ದು, ಬರೀ ಡಿಕೆಶಿ ಆಪ್ತರು ಮಾತ್ರ ಔತಣಕೂಟದಲ್ಲಿ ಭಾಗಿಯಾಗಿದ್ದರು. 

ಡಿನ್ನರ್​​​ ಮೀಟಿಂಗ್​​​.. ಡಿಕೆ ಸೆಡ್ಡು! 

ಉನ್ನತ ಶಿಕ್ಷಣ ಸಚಿವ ಎಂ.ಸಿ.ಸುಧಾಕರ್, ಮೀನುಗಾರಿಕೆ ಸಚಿವ  ಮಂಕಾಳ​ ವೈದ್ಯ, ಆಹಾರ ಸಚಿವ  ಕೆ.ಹೆಚ್.ಮುನಿಯಪ್ಪ, ವೈದ್ಯಕೀಯ ಶಿಕ್ಷಣ ಸಚಿವ, ಶರಣಪ್ರಕಾಶ್​ ಪಾಟೀಲ್,  ಕಿತ್ತೂರು ಶಾಸಕ ಬಾಬಾಸಾಹೇಬ್ ಪಾಟೀಲ್, ಚನ್ನಪಟ್ಟಣ ಶಾಸಕ ಸಿ.ಪಿ.ಯೋಗೇಶ್ವರ್, ಹಾನಗಲ್​​​ ಶಾಸಕ ಶ್ರೀನಿವಾಸ​ ಮಾನೆ, ಚಿಕ್ಕೋಡಿ ಶಾಸಕ ಗಣೇಶ್​ ಹುಕ್ಕೇರಿ, ಶಾಂತಿನಗರ ಶಾಸಕ ಎನ್​​.ಎ.ಹ್ಯಾರಿಸ್, ರಾಮನಗರ ಶಾಸಕ  ​​ಇಕ್ಬಾಲ್ ಹುಸೇನ್, ಎಂಎಲ್​ಸಿಗಳಾದ ಎಸ್​​​​.ರವಿ, ಚೆನ್ನರಾಜ್ ಹಟ್ಟಿಹೊಳಿ ಹಾಗೂ ಬಿಜೆಪಿ ಶಾಸಕರಾದ ಎಸ್.ಟಿ.ಸೋಮಶೇಖರ್, ಶಿವರಾಮ್ ಹೆಬ್ಬಾರ್​ ಕೂಡ ಭಾಗಿಯಾಗಿದ್ದರು. 

ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

CM SIDDARAMAIAH DK Shivakumar Dinner Party Power sharing
Advertisment