/newsfirstlive-kannada/media/media_files/2025/09/09/belagavi-five-people-2025-09-09-12-35-30.jpg)
ಬೆಳಗಾವಿ: ಅಥಣಿ ತಾಲೂಕಿನ ಅನಂತಪುರದಲ್ಲಿ ದೇಹ ತ್ಯಾಗಕ್ಕೆ ಮುಂದಾಗಿದ್ದ ಐವರಿಗೆ ಕೌನ್ಸಲಿಂಗ್ ಮಾಡಲಾಗಿದೆ. ಬೆಳಗಾವಿ ಬೀಮ್ಸ್ ಆಸ್ಪತ್ರೆಯ ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ನೇತೃತ್ವದಲ್ಲಿ ಐವರಿಗೆ ಕೌನ್ಸಲಿಂಗ್ ನಡೆಸಲಾಗಿದೆ.
ಅನಂತಪುರ ಗ್ರಾಮದ ತುಕಾರಾಮ್ ಈರಕರ್ ನೇತೃತ್ವದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ದೇಹ ತ್ಯಾಗಕ್ಕೆ ನಿರ್ಧರಿಸಿದ್ದರು. ನಿನ್ನೆ ಅವರನ್ನು ತಾಲೂಕು ಆಡಳಿತ ಮತ್ತು ಪೊಲೀಸ್ ಇಲಾಖೆ ರಕ್ಷಣೆ ಮಾಡಿ ಆಸ್ಪತ್ರೆಗೆ ದಾಖಲಿಸಿತ್ತು.
ಪರಮಾತ್ಮ ಬಂದು ಕರೆದುಕೊಂಡು ಹೋಗ್ತಾನೆ
ಹರಿಯಾಣದ ಆಶ್ರಮವೊಂದರ ಚಿಂತನೆಗಳಿಂದ ಪ್ರಭಾವಿತರಾಗಿ ಐವರು ಇಂಥ ಕಠಿಣ ನಿರ್ಧಾರಕ್ಕೆ ಬಂದಿದ್ದರು. ಬಾಬಾ ಆಗಮಿಸಿ ನಮ್ಮನ್ನೆಲ್ಲ ಕೈಲಾಸಕ್ಕೆ ಕರೆದುಕೊಂಡು ಹೋಗುತ್ತಾರೆ ಅಂತಾ ಕುಟುಂಬ ನಂಬಿತ್ತು. ಮನೆಯ ಯಜಮಾನ ತುಕಾರಾಮ ಈರಕರ್ ನೇತೃತ್ವದಲ್ಲಿ ಇಂಥ ನಿರ್ಧಾರಕ್ಕೆ ಬಂದಿದ್ದರು. ಸೆಪ್ಟೆಂಬರ್ 6 ರಿಂದ 8 ದಿನಗಳ ದಿನಗಳ ಕಾಲ ಭಜನೆ, ಪಾರ್ಥನೆಗಳ ಮೂಲಕ ಉಪವಾಸ ವ್ರತ ಮಾಡಿ ಇವತ್ತು ದೇಹತ್ಯಾಗಕ್ಕೆ ನಿರ್ಧರಿಸಿದ್ದರು. ಇವತ್ತು ಪರಮಾತ್ಮನು ಬಂದು ತಮ್ಮನ್ನು ಕೈಲಾಸಕ್ಕೆ ಕರೆದುಕೊಂಡು ಹೋಗುವುದಾಗಿ ಹೇಳಿ ಶರೀರ ತ್ಯಾಗಕ್ಕೆ ಮುಂದಾಗಿದ್ದರು.
ಸದ್ಯ ತುಕಾರಾಮ್ ಕುಟುಂಬ ಜಿಲ್ಲಾಡಳಿತದ ನಿಗಾದಲ್ಲಿದೆ. ಮುನ್ನೆಚ್ಚರಿಕೆ ಕ್ರಮವಾಗಿ ವೈದ್ಯರು ಬೆಳಗಾವಿ ಬೀಮ್ಸ್ ಆಸ್ಪತ್ರೆಯಲ್ಲಿ ಕೌನ್ಸಲಿಂಗ್ ನಡೆಸ್ತಿದ್ದಾರೆ. ಸಾವಿತ್ರಿ ಈರಕರ್, ತುಕಾರಾಮ್ ಈರಕರ್, ವೈಷ್ಣವಿ ಈರಕರ್, ರಮೇಶ್ ಈರಕರ್ ಹಾಗೂ ಮಾಯವ್ವ ಶಿಂಧೆಗೆ ಕೌನ್ಸಲಿಂಗ್ ಮಾಡಲಾಗಿದೆ. ಹೆಚ್ಚಿನ ಕೌನ್ಸಲಿಂಗ್ ಹಿನ್ನೆಲೆಯಲ್ಲಿ ಧಾರವಾಡ ನಿಮಾನ್ಸ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ. ಪೊಲೀಸ್ ಭದ್ರತೆಯಲ್ಲಿ ಆಂಬ್ಯುಲೇನ್ಸ್ ಮೂಲಕ ಧಾರವಾಡ ಮಾನಸಿಕ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ:ನಂಗೆ ಬದುಕಲು ಆಗ್ತಿಲ್ಲ, ಸ್ವಲ್ಪ ವಿ*ಷ ಕೊಡಿ -ನ್ಯಾಯಾಧೀಶರ ಮುಂದೆ ದರ್ಶನ್ ಅಳಲು
ಮಾನಸಿಕ ವಿಭಾಗದ ಮುಖ್ಯಸ್ಥ ಡಾ.ಚಂದ್ರಶೇಖರ್ ಪ್ರತಿಕ್ರಿಯಿಸಿ.. ಕಳೆದ ಆರು ವರ್ಷಗಳಿಂದ ಹರಿಯಾಣ ರಾಮಪಾಲ್ ಬಾಬಾಗೆ ನಡೆದುಕೊಳ್ಳುತ್ತಿದ್ದರಂತೆ. ಅವರ ಪ್ರಕಾರ ದೇಶದ ಎಲ್ಲಾ ಕಡೆ 21 ಜನರು ದೇಹತ್ಯಾಗ ಮಾಡೋರು ಇದ್ದಾರೆ. ಅದರ ಸಲುವಾಗಿ ನಾವು ಸೈಕಾಲಜಿಕಲ್ ಅಸೆಸ್ಮೆಂಟ್ ಪ್ರಕಾರ ಇದನ್ನ ‘ಮಾಸ್ ಹಿಸ್ಟರೀಯಾ’ ಎಂದು ಹೇಳುತ್ತಾರೆ. ಇದು ಇಡೀ ಕುಟುಂಬವೇ ಇದನ್ನ ನಂಬುತ್ತೆ, ಅದರ ಪ್ರಕಾರವೇ ನಡೆದುಕೊಳ್ಳುವ ಸಾಧ್ಯತೆ ಇರುತ್ತದೆ. ಸಾಮೂಹಿಕವಾಗಿ ಸು*ಡ್ ಮಾಡಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ಅವರನ್ನು ಹೆಚ್ಚಿನ ಕೌನ್ಸೆಲಿಂಗ್ ಮಾಡ್ತಿದ್ದೇವೆ ಎಂದಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ