/newsfirstlive-kannada/media/media_files/2025/11/02/bgm_incident-2025-11-02-07-46-11.jpg)
ಕೆಂಪು, ಹಳದಿ ರಂಗಿನಲ್ಲಿ ಕಂಗೊಳಿಸುತ್ತಿದ್ದ ಕನ್ನಡದ ಹಬ್ಬಕ್ಕೆ ಕೆಂಪು ರಕ್ತದ ಲೇಪನವಾಗಿದೆ. ಗಡಿನಾಡ ರಾಜ್ಯೋತ್ಸವ ಸಂಭ್ರಮದಲ್ಲಿ ಕಿಡಿಗೇಡಿಗಳ ಅಟ್ಟಹಾಸ ಕೇಕೆ ಹಾಕಿದೆ. ಸಿಕ್ಕ ಸಿಕ್ಕವರಿಗೆ ಚಾಕು ಇರಿದ ದುಷ್ಕರ್ಮಿಗಳ ಜಾಡು ಪತ್ತೆಯೇ ಪೊಲೀಸರಿಗೆ ಸವಾಲಾಗಿದೆ. ಕೃತ್ಯದ ಹಿಂದಿನ ಸತ್ಯ ಎನೆಂಬುದು ಸದ್ಯ ಕುತೂಹಲ ಮೂಡಿಸಿದೆ.
ಸಂಭ್ರಮ, ಸಡಗರ ರಾಜ್ಯೋತ್ಸವದ ರಂಗಲ್ಲಿ ಕನ್ನಡ ಮಕ್ಕಳ ಕಲರವ. ಎಲ್ಲೆಲ್ಲೂ ಕನ್ನಡ ಬಾವುಟ, ಕಣ್ಣು ಹಾಯಿಸಿದಷ್ಟುದ್ದಕ್ಕೂ ಕಿಕ್ಕಿರಿದ ಜನಸಾಗರ. ಇದು ಗಡಿನಾಡು ಬೆಳಗಾವಿಯ ಕನ್ನಡ ರಾಜ್ಯೋತ್ಸವದ ರಂಗು. ಒಂದ್ಕಡೆ ಈ ಕನ್ನಡ ಹಬ್ಬದ ಸಂತಸ ಕಳೆಗಟ್ಟಿದ್ರೆ ಮತ್ತೊಂದ್ಕಡೆ ಆಗಿದ್ದು ಮಾತ್ರ ಘೋರ.
/filters:format(webp)/newsfirstlive-kannada/media/media_files/2025/11/02/bgm_incident_1-2025-11-02-07-46-32.jpg)
ಜನರು ಆಸ್ಪತ್ರೆ ಬೆಡ್​ ಮೇಲೆ ತಲೆ, ಹೊಟ್ಟೆ, ಬೆನ್ನಿಗೆ ಬ್ಯಾಂಡೇಜ್​ ಹಾಕಿಸಿಕೊಂಡು ನರಳಾಡುತ್ತಿದ್ದಾರೆ. ಗಾಯಾಳುಗಳ ಸಂಬಂಧಿಕರ ಗೊಂದಲ, ಎಲ್ಲೆಲ್ಲೂ ಆತಂಕದ ವಾತಾವರಣ ಏರ್ಪಟ್ಟಿದ್ದು ಪೊಲೀಸರ ವಿಚಾರಣೆ ಮಾಡುತ್ತಿದ್ದಾರೆ. ಒಂದ್ಕಡೆ ಬೆಳಗಾವಿಯಲ್ಲಿ ಕನ್ನಡ ರಾಜ್ಯೋತ್ಸವದ ರಂಗು ಪಸರಿಸಿದ್ರೆ, ಮತ್ತೊಂದ್ಕಡೆ ರಕ್ತದೋಕುಳಿ ಚಿಮ್ಮಿರುವುದು ದುರಂತವೇ ಸರಿ.
ಐದು ಮಂದಿಗೆ ಚಾಕು ಇರಿದು ದುಷ್ಕರ್ಮಿಗಳು ಪರಾರಿ
ಬೆಳಗಾವಿಯಲ್ಲಿ ನಡೆಯುತ್ತಿದ್ದ ಅದ್ಧೂರಿ ಕನ್ನಡ ರಾಜ್ಯೋತ್ಸವ ಮೆರವಣಿಗೆಯಲ್ಲಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ. ಹುಚ್ಚನ ಮದುವೇಲಿ ಉಂಡೋನೆ ಜಾಣ ಅನ್ನೋ ಹಾಗೆ ಕಿಕ್ಕಿರಿದ ಜನ ಸಮೂಹದಲ್ಲಿ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಸಿಕ್ಕ ಸಿಕ್ಕವರಿಗೆ ಚಾಕು ಚುಚ್ಚಿ ಎಸ್ಕೇಪ್ ಆಗಿದ್ದಾರೆ. ದುಷ್ಕರ್ಮಿಗಳ ದುಷ್ಕೃತ್ಯದಿಂದ ಗುರುನಾಥ ವಕ್ಕುಂದ, ಸಚಿನ್ ಕಾಂಬಳೆ, ಲೋಕೇಶ್ ಬೆಟಗೇರಿ, ಮಹೇಶ್, ವಿನಾಯಕ ಎಂಬ 5 ಮಂದಿಗೆ ಗಾಯಗಳಾಗಿವೆ. ಚಾಕು ಇರಿತಕ್ಕೊಳಗಾದ ಇವರೆಲ್ಲರೂ ಬೆಳಗಾವಿಯ ನೆಹರು ನಗರದ ನಿವಾಸಿಗಳಾಗಿದ್ದಾರೆ.
ಕಿಡಿಗೇಡಿಗಳ ಕೃತ್ಯದಿಂದ ಗಾಯಗೊಂಡು ಐದು ಮಂದಿ ಬಿಮ್ಸ್​ ಆಸ್ಪತ್ರೆಗೆ ದಾಖಲಾಗಿದ್ದರು. ಈ ಪೈಕಿ ಮೂವರು ಚಿಕಿತ್ಸೆ ಪಡೆದು ಡಿಸ್ಚಾರ್ಜ್​ ಸಹ ಆಗಿದ್ದಾರೆ. ಬಿಮ್ಸ್​ಗೆ ಬೆಳಗಾವಿ ಪೊಲೀಸ್​​ ಕಮಿಷನರ್​ ಭೇಟಿ ನೀಡಿ ಗಾಯಾಳುಗಳ ಬಳಿ ಮಾಹಿತಿ ಕಲೆ ಹಾಕಿದ್ದಾರೆ. ​​ಗಾಯಗೊಂಡ ಐವರೂ ಅಪಾಯದಿಂದ ಪಾರಾಗಿದ್ದಾರೆ, ಕೃತ್ಯ ನಡೆದ ಜಾಗದಲ್ಲಿನ ಸಿಸಿಟಿವಿ ದೃಶ್ಯ ಪರಿಶೀಲಿಸುತ್ತಿದ್ದೇವೆ ಅಂತ ಪೊಲೀಸ್​​ ಆಯುಕ್ತ ಭೂಷಣ್ ಬೊರಸೆ ತಿಳಿಸಿದ್ದಾರೆ.
/filters:format(webp)/newsfirstlive-kannada/media/media_files/2025/11/02/bgm_incident_2-2025-11-02-07-46-43.jpg)
ಕೈಯಲ್ಲಿ ಚಾಕು ಹಿಡಿದು 11ಕ್ಕೂ ಹೆಚ್ಚು ಜನರಿಂದ ಹಲ್ಲೆ, ಪರಾರಿ
ಚಾಕು ಇರಿತಕ್ಕೊಳಗಾಗಿ ಆಸ್ಪತ್ರೆ ಪಾಲಾಗಿರೋ ರಾಘವೇಂದ್ರ ಎಂಬಾತ, ಅಸಲಿಗೆ ಬೆಳಗಾವಿಯ ಸದಾಶಿವ ನಗರದ ಲಕ್ಷ್ಮೀ ಕಾಂಪ್ಲೆಕ್ಸ್ ಬಳಿ ಏನಾಯ್ತು ಅನ್ನೋದನ್ನ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ. ಮೆರವಣಿಗೆಗೆ ತಂದಿದ್ದ ತಮ್ಮ ರೂಪಕ ವಾಹನ ಕಂಡು ತಮ್ಮ ಮೇಲೆ ಹಲ್ಲೆ ಮಾಡಿದ್ರು ಅಂತ ತಿಳಿಸಿದ್ದಾರೆ.
ಸಂಭ್ರಮದಿಂದ ಕೂಡಿದ್ದ ಬೆಳಗಾವಿ ಕನ್ನಡದ ಹಬ್ಬದಲ್ಲಿ ಕಿಡಿಗೇಡಿಗಳು ಇಂತದೊಂದು ದುಷ್ಕೃತ್ಯ ಎಸಗಿರೋದು ನಿಜಕ್ಕೂ ದುರಂತ. ಅಷ್ಟಕ್ಕೂ ಈ ಘಟನೆ ಹಿಂದಿನ ಕಾಣದ ಕೈಗಳ್ಯಾವುವು? ಚಾಕು ಇರಿತಕ್ಕೆ ಬೇರೆ ಏನಾದ್ರೂ ಕಾರಣ ಇದ್ಯಾ? ಈ ಎಲ್ಲಾ ಪ್ರಶ್ನೆಗಳಿಗೆ ಸದ್ಯ ಪೊಲೀಸರ ತನಿಖೆ ಬಳಿಕವಷ್ಟೇ ಉತ್ತರ ಸಿಗಬೇಕಿದೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us