/newsfirstlive-kannada/media/media_files/2025/08/30/satish-jarkiholi1-2025-08-30-14-11-14.jpg)
ಕುಂದಾನಗರಿ ಬೆಳಗಾವಿಯಲ್ಲಿ ಇಂದು ಕಬ್ಬು ಬೆಳೆ ಕುರಿತು ಒಂದು ದಿನದ ವಿಚಾರ ಸಂಕಿರಣ ನಡೆಯುತ್ತಿದೆ. ಈ ಕಾರ್ಯಕ್ರಮವು ಬೆಳಗಾವಿ ಕೆಎಲ್ಇ ಸಂಸ್ಥೆಯ ಜೀರಗಿ ಹಾಲ್ನಲ್ಲಿ ನಡೆದಿದೆ. ಕಾರ್ಯಕ್ರಮದಲ್ಲಿ ಸಚಿವರಾದ ಸತೀಶ್ ಜಾರಕಿಹೋಳಿ, ಲಕ್ಷ್ಮೀ ಹೆಬ್ಬಾಳ್ಕರ್ ಹಾಗೂ ನ್ಯೂಸ್ ಫಸ್ಟ್ ಸಿಇಓ ರವಿಕುಮಾರ್ ಅವರು ಮಾತಾಡಿದ್ದಾರೆ.
ನ್ಯೂಸ್ ಫಸ್ಟ್ ಸಿಇಓ ರವಿಕುಮಾರ್ ಹೇಳಿದ್ದೇನು..?
ಸಚಿವ ಸತೀಶ್ ಜಾರಕಿಹೊಳಿ ಅವರಿಗೆ ಕೃತಜ್ಞತೆ ಸಲ್ಲಿಸುತ್ತಿದ್ದೇನೆ. ನಿನ್ನೆ ಬಿಹಾರದಲ್ಲಿದ್ದರು. ಇಂದು ಬೆಳಿಗ್ಗೆ ಬೆಂಗಳೂರಿನಿಂದ ಇಲ್ಲಿಗೆ ಬಂದಿದ್ದಾರೆ. ಇನ್ನೂ ಸಚಿವೆ ಶ್ರೀಮತಿ ಲಕ್ಷ್ಮಿ ಹೆಬ್ಬಾಳಕರ್ ಹಾಗೂ ಸೋದರ ಚನ್ನರಾಜ್ ಹಟ್ಟಿಹೊಳಿ ಒಪ್ಪಿ ಇಬ್ಬರು ಆಗಮಿಸಿದ್ದಾರೆ. ಸಚಿವೆ ಲಕ್ಷ್ಮಿ ಹೆಬ್ಬಾಳಕರ್ ಅವರಿಗೆ ಸ್ವಾಗತ ಕೋರುತ್ತೇನೆ. ಗೋದಾವರಿ ಬಯೋ ರಿಫೈನರ್ಸ್ ಲಿಮಿಟೆಡ್ ನ ಎಕ್ಸಿಕ್ಯುಟೀವ್ ಡೈರೆಕ್ಟರ್ ಹಾಗೂ ಸೋಮಯ್ಯ ಶುಗರ್ಸ್ನ ಬಾಲಚಂದ್ರ ಆರ್. ಭಕ್ಷಿ ಅವರು ಆಗಮಿಸಿದ್ದಾರೆ.
ಬೆಳಗಾವಿಯಲ್ಲಿ ಕಾರ್ಯಕ್ರಮ ಮಾಡುವುದಕ್ಕೆ ನಮ್ಮ ಜೊತೆ ಇದ್ದಾರೆ. ಇಂಥ ಕಾರ್ಯಕ್ರಮವನ್ನು ನಾವು ಷುಗರ್ ಫ್ಯಾಕ್ಟರಿಯಿಂದ ಮಾಡಬೇಕು. ನೀವು ಮಾಡುತ್ತಿರುವುದು ಸಂತೋಷ ಎಂದು ಬಾಲಚಂದ್ರ ಆರ್. ಭಕ್ಷಿ ನಮ್ಮ ಜೊತೆ ಇದ್ದಾರೆ. ಅವರಿಗೆ ನಮ್ಮ ಸ್ವಾಗತವನ್ನು ಕೋರುತ್ತೇನೆ. ನಮಗೆ ಈ ಕಾರ್ಯಕ್ರಮಕ್ಕೆ ಸಹಕಾರ ಕೊಟ್ಟ ರಾಜ್ಯ ಸರ್ಕಾರ ಹಾಗೂ ಷುಗರ್ ಫ್ಯಾಕ್ಟರಿಗಳಿಗೆ ಧನ್ಯವಾದ ತಿಳಿಸುತ್ತೇವೆ. ಯಾವುದೇ ನ್ಯೂಸ್ ಚಾನಲ್ ಕೃಷಿ ಬಗ್ಗೆ ವಿಶೇಷ ಕಾರ್ಯಕ್ರಮ ಮಾಡಿಲ್ಲ. ನಮಗೆ ಏಕೆ ಮಾಡಬೇಕು ಎಂಬ ಆಲೋಚನೆ ಬಂತು ಅಂದರೇ, ನಾನು ಒಬ್ಬ ಕೃಷಿಕ. ಬೆಂಗಳೂರಿಗೆ ಓದಲು ಹೋಗುವ ಮುಂಚೆ ಊರಿನಲ್ಲಿ ನಾನು ಕೃಷಿ ಮಾಡುತ್ತಿದ್ದೆ. ಊರಿನಲ್ಲಿ ಹೆಚ್ಚಿನ ಇಳುವರಿಯ ಬೆಳೆ ಬೆಳೆಯಬೇಕೆಂಬ ಹುಚ್ಚು ಇತ್ತು. ಹೆಚ್ಚಿನ ಇಳುವರಿಯ ಬೆಳೆ ಬೆಳೆಯುತ್ತಿದ್ದೆ ಎಂದು ನ್ಯೂಸ್ ಫಸ್ಟ್ ಸಿಇಓ ರವಿಕುಮಾರ್ ಹೇಳಿದ್ದರು. ನಮ್ಮದು ಕೃಷಿ ಹಿನ್ನಲೆಯ ಕುಟುಂಬ. ಕೃಷಿಗಾಗಿ ನಾವು ಏನನ್ನಾದರೂ ಮಾಡಬೇಕೆಂದು ಆಲೋಚಿಸಿ, ಈ ಕೃಷಿ ವಿಚಾರ ಸಂಕಿರಣ ಮಾಡುತ್ತಿದ್ದೇವೆ ಎಂದು ರವಿಕುಮಾರ್ ಹೇಳಿದ್ದರು.
ಇದನ್ನೂ ಓದಿ: ಹಗಲಿನಲ್ಲಿ ‘Change Your Life’ ಎನ್ನುತ್ತಿದ್ದ ಯೂಟ್ಯೂಬರ್.. ರಾತ್ರಿ ಮಾಡ್ತೀರೋದು..!
ನ್ಯೂಸ್ ಫಸ್ಟ್ ಚಾನಲ್ ನಲ್ಲಿ ಪ್ರತಿ ಶನಿವಾರ ಸಂಜೆ 5.30 ಕ್ಕೆ ಹಾಗೂ 7.30ಕ್ಕೆ ಕೃಷಿ ದೇವೋಭವ ಕಾರ್ಯಕ್ರಮವನ್ನು ರೈತರು ತಪ್ಪದೇ ನೋಡಬೇಕು. ಸರ್ಕಾರ ಯೋಜನೆಗಳನ್ನು ಅಧಿಕಾರಿಗಳೇ ತಿಳಿಸಿಕೊಡುತ್ತಾರೆ. ನ್ಯೂಸ್ ಫಸ್ಟ್ ಅಗ್ರಿ ಅಂತ ಆ್ಯಪ್ ಕ್ರಿಯೇಟ್ ಮಾಡಿದ್ದೇವೆ. ಪ್ರಗತಿಪರ ರೈತರ ಬಗ್ಗೆ, ಯೋಜನೆಗಳ ಬಗ್ಗೆ ತಿಳಿದುಕೊಳ್ಳಬಹುದು. ನಾವು ಬೆಂಗಳೂರಿನಲ್ಲಿ ಕೃಷಿ ದೇವೋಭವ ಅಂತ ಕಾರ್ಯಕ್ರಮ ಮಾಡಿದ್ದೇವು. ಇಡೀ ದಿನ ಕೃಷಿ ಬಗ್ಗೆ ಚರ್ಚೆ ಮಾಡಿದ್ದೇವು. ಈ ಭಾಗದ ರೈತರು ಬೆಳಗಾವಿಯಲ್ಲಿ ಏಕೆ ಕಾರ್ಯಕ್ರಮ ಮಾಡಬಾರದು ಅಂತ ನಮ್ಮ ಜೊತೆ ಚರ್ಚೆ ಮಾಡಿದ್ದರು. ಬೆಳಗಾವಿ ಕಬ್ಬಿನ ನಾಡು, ಕಬ್ಬು ಅನ್ನು ರೈತರು ಹೆಚ್ಚು ಬೆಳೆಯುತ್ತಾರೆ. ಕಬ್ಬು ವಿಷಯದ ಬಗ್ಗೆ ಚರ್ಚೆ ಮಾಡಿದರೇ, ರೈತರಿಗೆ ಅನುಕೂಲವಾಗುತ್ತೆ ಅಂತ ಅನೇಕರ ಜೊತೆ 2 ದಿನ ಚರ್ಚೆ ಮಾಡಿದ್ದೇವು. ರಾಜ್ಯದ ಬೇರೆ ಬೇರೆ ಜಿಲ್ಲೆಗಳ ರೈತರಿಗೂ ಇದರ ಲಾಭ ಸಿಗಲಿದೆ.
ಬೆಳಗಾವಿಯಲ್ಲಿ ಕಬ್ಬಿನ ಇಳುವರಿ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಮಣ್ಣಿನ ಸವಕಳಿ ಆಗುತ್ತಿದೆ. ನಮ್ಮ ತಂದೆ ಎಕರೆಗೆ 60 ರಿಂದ 70 ಟನ್ ಕಬ್ಬು ಬೆಳೆಯುತ್ತಿದ್ದರು. ಈಗ ಎಕರೆಗೆ 35 ಟನ್‌ಗೆ ಕಬ್ಬಿನ ಇಳುವರಿ ಕುಸಿದಿದೆ ಅಂತ ರೈತರು ಹೇಳುತ್ತಿದ್ದಾರೆ. ಇದಕ್ಕೆ ಕಾರಣಗಳು ಸರಳವಾಗಿವೆ. ಅದನ್ನು ಅರ್ಥ ಮಾಡಿಕೊಂಡು ಕೃಷಿ ಮಾಡಿದರೇ, ಹೆಚ್ಚಿನ ಕಬ್ಬಿನ ಇಳುವರಿ ಪಡೆಯಬಹುದು. ಮಣ್ಣಿನ ಆರೋಗ್ಯ, ರಸಗೊಬ್ಬರ, ನೀರಿನ ಸದ್ಭಳಕೆ, ಕಬ್ಬಿನ ರೋಗ, ಗೊಣ್ಣೆ ಹುಳ ರೋಗಗಳನ್ನು ನಿಯಂತ್ರಿಸಿದರೇ, ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಒಂದು ಎಕರೆಯಲ್ಲಿ 35 ಟನ್ ನಿಂದ 100 ಟನ್ ವರೆಗೂ ಕಬ್ಬು ಇಳುವರಿ ಪಡೆಯಲು ಸಾಧ್ಯ. ಅಂಥ ಸಾಧಕ ರೈತರು ನಮ್ಮೊಂದಿಗೆ ಇದ್ದಾರೆ. ಮನೆಯಲ್ಲಿ ಮಗುವನ್ನು ಹಾರೈಕೆ ಮಾಡುವಂತೆ, ಕಬ್ಬು ಅನ್ನು ಹಾರೈಕೆ ಮಾಡಿದರೇ, ಹೆಚ್ಚಿನ ಇಳುವರಿ ಪಡೆಯಲು ಸಾಧ್ಯ. ಇವತ್ತು ಇಡೀ ದಿನ ಕಾರ್ಯಕ್ರಮ ಇರುತ್ತೆ. ಕೃಷಿ ವಿಜ್ಞಾನಿಗಳು ನಿಮಗೆ ಸಾಕಷ್ಟು ವಿಷಯ ತಿಳಿಸಿಕೊಡುತ್ತಾರೆ. ಈ ಕಾರ್ಯಕ್ರಮವನ್ನು ರೈತರಿಗಾಗಿ ಮಾಡುತ್ತಿರುವುದರಿಂದ ನಿಮಗೆ ಅನುಮಾನಗಳಿದ್ದರೇ, ತಜ್ಞರು, ವಿಜ್ಞಾನಿಗಳ ಜೊತೆ ಮಾತನಾಡಿ ಬಗೆಹರಿಸಿಕೊಳ್ಳಿ ಎಂದು ನ್ಯೂಸ್ ಫಸ್ಟ್ ಸಿಇಓ ರವಿಕುಮಾರ್ ಅವರು ಹೇಳಿದ್ದರು.
ಸಚಿವ ಸತೀಶ ಜಾರಕಿಹೋಳಿ ಹೇಳಿದ್ದೇನು..?
ಸಮಗ್ರ ತಂತ್ರಜ್ಞಾನ ಮಾರುಕಟ್ಟೆ ಬದಲಾವಣೆಯಾಗುತ್ತಿದೆ ಹಾಗೆ ನಾವೂ ಕೂಡಾ ಬದಲಾವಣೆಯಾಗಬೇಕಿದೆ. ಬೆಳಗಾವಿಯಲ್ಲಿ ನ್ಯೂಸ್ ಫಸ್ಟ ವಾಹಿನಿ ಮೂಲಕ ಕಬ್ಬು ಬೆಳೆ ಬಗ್ಗೆ ಒಂದು ದಿನ ಕಬ್ಬು ಬೆಳೆ ಕುರಿತು ವಿಚಾರಣೆ ಸಂಕೀರಣ ಮಾಡಿದ್ದು ರೈತರಿಗೆ ಅನಕೂಲವಾಗಿದೆ. ಬೆಳಗಾವಿಯಲ್ಲಿ ಅತಿ ಹೆಚ್ಚಾಗಿ ಕಬ್ಬು ಬೆಳೆ ಬೆಳೆಗಾರರಿದ್ದಾರೆ. ಬೆಳಗಾವಿ ಜಿಲ್ಲಾದ್ಯಂತ ಒಟ್ಟು 28 ಕಾರ್ಖಾನೆಗಳಿವೆ ಇನ್ನೂ ಎರಡ್ಮೂರು ಸಕ್ಕರೆ ಕಾರ್ಖಾನೆಗಳು ಬರುತ್ತಿವೆ. ಈಗಾಗಲೇ ನ್ಯೂಸ್ ಫಸ್ಟ ವಾಹಿನಿ ಮೂಲಕ ಕಬ್ಬು ಬೆಳೆಗಾರರ ಅನಕೂಲಕ್ಕಾಗಿ ಈ ಕಾರ್ಯಕ್ರಮ ಲೈವ ಕವರೇಜ ಮಾಡುತ್ತಿದ್ದು ಇದರಿಂದ ರೈತರಿಗೆ ಅನಕೂಲವಾಗಲಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಸಿಗುತ್ತಿಲ್ಲ ಅನುವುದು ಇಂದಿನ ಕೂಗಲ್ಲ. ಇದು ಹಲವಾರು ದಶಕಗಳ ಕೂಗಾಗಿದೆ. ರೈತರು ಬೆಳೆದ ಬೆಳೆಗೆ ಯಾವ ಬೆಲೆ ಹೆಚ್ಚಾಗಿ ಸಿಗುತ್ತೊ ಆ ಬೆಳೆಯನ್ನೆ ರೈತರು ಆಯ್ಕೆ ಮಾಡಿ ಬೆಳೆಯುತ್ತಿದ್ದಾರೆ. ಹೀಗಾಗಿ ರೈತರು ನಷ್ಟ ಅನುಭವಿಸುವ ಪ್ರಸಂಗ ಎದುರಾಗಿದೆ. ಆ ಪದ್ದತಿ ರೈತರು ಕಡಿಮೆ ಮಾಡಬೇಕಾಗಿದೆ. ಏಕೆಂದರೆ ನಮ್ಮ ಜಮೀನ ಯಾವ ಬೆಳೆ ಬೆಳೆಯಲು ಯೋಗ್ಯವಾಗಿದೆಯೋ ಅದನ್ನ ಬೆಳೆದರೆ ರೈತ ಲಾಭ ಪಡೆಯಲು ಅನಕೂಲಕರವಾಗಿದೆ. ಕಬ್ಬು ಕಾರ್ಖಾನೆಗಳು ಮೂರು ಕೆಟಗೇರಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಒಂದು ಲಾಭದಾಯಕ ಇನ್ನೊಂದು ಮಧ್ಯಮ ಹಾಗೂ ಇನ್ನೂ ಕೆಲ ಕಾರ್ಖಾನೆಗಳು ನಷ್ಟದಲ್ಲಿವೆ. ನಷ್ಟದಲ್ಲಿದ್ದವರು ಕೂಡಾ ಲಾಭದಾಯಕ ಇದ್ದ ಕಾರ್ಖಾನೆಗಳ ಸಮಾನವಾಗಿ ಬಿಲ್ ಕೊಡಬೇಕಾಗಿದೆ. ಹೀಗಾಗಿ ಕೆಲ ಕಾರ್ಖಾನೆಗಳು ಸಮಸ್ಯೆಯಲ್ಲಿವೆ. ಮೊದಲ ಎಲ್ಲ 60 ಟನ್ ಕಬ್ಬು ಬೆಳೆ ಬೆಳೆಯುತ್ತಿದ್ದರು ಈಗ 30 ಟನ್‌ಗೆ ಬಂದು ನಿಂತಿದೆ. ಹೀಗಾಗಿ ನಾವೂ ಒಂದೇ ಬೆಳೆಯನ್ನ ಬೆಳೆಯುತ್ತಿದ್ದಾರೆ. ಅದಕ್ಕೆ ನಾವೂ ಬೇರೆ ಬೇರೆ ಬೆಳೆಯುವುದರಿಂದ ಮಣ್ಣಿನಲ್ಲಿ ಫಲವತ್ತತೆ ಉಳಿಯಲು ಸಾಧ್ಯವಾಗುತ್ತಿದೆ. ತಂತ್ರಜ್ಞಾನ ತುಂಬಾ ಮುಂದುವರೆದಿದೆ ಅದನ್ನ ಎಲ್ಲ ರೈತರು ಉಪಯೋಗ ಮಾಡಬೇಕಿದೆ. ರಾಸಾಯನಿಕ ಗೊಬ್ಬರ ಬಳಕೆ ಕಡಿಮೆ ಮಾಡಿ. ಹಳೆಯ ಪದ್ದತಿ ಮತ್ತೆ ಮಾರುಕಟ್ಟೆಗೆ ಬರುತ್ತಿದೆ. ಸಾವಯವ ಗೊಬ್ಬರ ಬಳಕೆ ಮಾಡಿ ಮುಂದಿನ ದಿನಮಾನಗಳಲ್ಲಿ ಮತ್ತೆ ಸಾವಯವ ಗೊಬ್ಬರ ಬಳಕೆ ಮಾಡಲು ರೈತರು ಮುಂದಾಗಬೇಕಿದೆ. ಈಗಾಗಲೇ ರೈತರ ಅನಕೂಲಕ್ಕಾಗಿ ನೀರಾವರಿ ಸೌಲಭ್ಯ ಕೂಡಾ ಮಾಡಿ ಕೊಟ್ಟಿದ್ದೇವೆ. ಡೊನ್ನೆ ಹುಳದ ಬಗ್ಗೆ ರೈತರಿಗೆ ಗೊಂದಲ ಸೃಷ್ಟಿಯಾಗಿದೆ. ಈ ಬಗ್ಗೆ ಕಾರ್ಯಕ್ರಮದಲ್ಲಿ ಚರ್ಚೆ ನಡೆಯಲಿದೆ ಅದರಲ್ಲಿ ಭಾಗಿಯಾಗಿ ತಮ್ಮ ತೊಂದರೆ ಬಗ್ಗೆ ಚರ್ಚಿಸಿ ಎಂದು ಹೇಳಿದ್ದಾರೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ